ಇಂಡಿ: ಪಟ್ಟಣದ ಕೆನರಾ ಬ್ಯಾಂಕ್ ಖಾತೆಯಲ್ಲಿರುವ ಶಿವಾನಂದ ಲಕ್ಕುಂಡಿಮಠ ಇವರ ಖಾತೆ ೧೨೫೦೦೪೯೩೯೨೧೯ ಅಕೌಂಟಿನಿಂದ ಎರಡು ಲಕ್ಷ ಹತ್ತು ಸಾವಿರ ರೂ ವಂಚನೆ ಯಾಗಿರುತ್ತದೆ.
ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಯಾಗಿದ್ದು ಯಾರು ಈ ಕೃತ್ಯ ಮಾಡಿದ್ದಾರೆ ಎಂಬುದು ಇನ್ನೂ ತಿಳಿಸಿದಿಲ್ಲ.
ಖಾತೆಯಲ್ಲಿಯ ಹಣ ಒಂದೇ ಬಾರಿಗೆ ತೆಗೆಯದೇ ರವಿವಾರ ಮಧ್ಯಾಹ್ನ ಸುಮಾರಿಗೆ ಮೊದಲಬಾರಿಗೆ ಒಂದು ಲಕ್ಷ ರೂ, ೨ ನೇ ಸಲ ೩೫ ಸಾವಿರ ರೂ, ೩ ನೇ ಸಲ ೫೦ ಸಾವಿರ ರೂ, ೪ ನೇ ಬಾರಿ ೨೫ ಸಾವಿರ ರೂ ಹಣ ಹೋಗಿದೆ.
ಬ್ಯಾಂಕ್ ಮೊಬಾಯಿಲ್ ಆಪ್ ಇಲ್ಲ, ಎಟಿಎಂ ಇಲ್ಲ,ಚೆಕ್ ಇಲ್ಲ ಹಿಗಿದ್ದರೂ ಸಹಿತ ಖಾತೆಯಲ್ಲಿಯ ಹಣ ಖಾಲಿಯಾಗಿದೆ.
ಈ ಕುರಿತು ಭಾನುವಾರ ಸಾಯಂಕಾಲವೇ ವಿಜಯಪುರ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಇಂದು ಪಟ್ಟಣದ ಅನೇಕ ಜನರು ಕೆನರಾ ಬ್ಯಾಂಕಿಗೆ ಭೇಟಿ ನೀಡಿ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರ ಜೊತೆಗೆ ಚರ್ಚಿಸಿದರು.
ಹಿರಿಯ ವ್ಯವಸ್ಥಾಪಕ ಸಿದ್ದನಗೌಡ ಮಾತನಾಡಿ ಬ್ಯಾಂಕ ಖಾತೆಯಿಂದ ಹಣ ಖಾಲಿಯಾದರೆ ಒಂದು ಗಂಟೆಯ ಒಳಗಡೆ ೧೯೩೦ ನಂ ಫೋನು ಮಾಡಬೇಕು. ಯಾವದೇ ಬ್ಯಾಂಕಿನ ಖಾತೆಯಲ್ಲಿ ಹಣ ಇರಲಿ ಒಂದು ಗಂಟೆಯ ಒಳಗೆ ಫೋನು ಮಾಡಿ. ಆಗ ಅಕೌಂಟ್ ಬ್ಲಾಕ್ ಮಾಡುತ್ತಾರೆ. ಮುಂದೆ ಹಣ ಹೋಗುವದಿಲ್ಲ.
ಅದಲ್ಲದೆ ಎಪಿಕೆ ಲಿಂಕ್, ಎಸ್ ಎಂ ಎಸ್, ವ್ಯಾಟ್ಸ ಅಫ್ ಓಪನ್ ಮಾಡಬೇಡಿ ಎಂದರು ಸಾರ್ವಜನಿಕರಿಗೆ ಸೂಚನೆ ನೀಡಿದರು. ಅದಲ್ಲದೆ ಯಾವುದೇ ಬ್ಯಾಂಕಿನವರು ಓಟಿಪಿ ಕೇಳುವದಿಲ್ಲ, ಮತ್ತು ಪಿನ್ ನಂ ಕೇಳುವದಿಲ್ಲ ಎಂದರು.
ಅದಲ್ಲದೆ ಲಕ್ಕುಂಡಿಮಠ ಇವರ ಹಣ ಕುರಿತು ಎಲ್ಲ ಕಡೆಗೆ ಪ್ರಯತ್ನಿಸುತ್ತಿದ್ದು ಹಣ ಜಮೆ ಆಗುತ್ತದೆ ಎಂದರು.
ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಕರವೇ ಅಧ್ಯಕ್ಷ ಬಾಳು ಮುಳಜಿ, ನ್ಯಾಯವಾದಿ ಎಸ್.ಎಲ್.ನಿಂಬರಗಿಮಠ, ಗೀರಿಶ ಪಾಟೀಲ,ಅರವಿಂದ ಪಾಟೀಲ,ಸಂತೋಷ ಪಾಟೀಲ ರೋಡಗಿ, ಆದಿತ್ಯ ಶಿಂಧೆ ಮತ್ತಿತರಿದ್ದರು.
ಪ್ರಕರಣ ಇಂಡಿ ಪೋಲಿಸ ಠಾಣೆಯಲ್ಲಿ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

