ಇಂಡಿ: ಸಿಂದಗಿ ಮತ್ತು ಆಲಮೇಲ ತಾಲೂಕುಗಳಲ್ಲಿ ಭೀಮಾ ನದಿಯಲ್ಲಿ ಆಕ್ರಮ ಮರುಳು ಸಾಗಾಣಿಕೆ ಮಾಡುವ ಕುರಿತು ಸೋಮವಾರ ರಾತ್ರಿ ೧೧ ಗಂಟೆಯಿಂದ ರೇಡ್ ಇಂಡಿಯ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರ ನೇತೃತ್ವದಲ್ಲಿ ನಡೆಯಿತು.
ಇಂಡಿ, ಸಿಂದಗಿ ಮತ್ತು ಆಲಮೇಲ ತಾಲೂಕುಗಳಲ್ಲಿ ಎಲ್ಲ ಕಡೆಗೂ ಆಕ್ರಮ ಮರುಳು ಮಾಡುವಾಗಲೇ ಹಿಡಿದಿದ್ದಾರೆ.
ಎಲ್ಲ ಕಡೆಗೂ ಆಕ್ರಮ ಮರುಳು ಮಾಡುವವರು ತಮ್ಮ ವಾಹನ ಗಳಿಗೆ ಕೀಲಿ ಹಾಕಿ ಓಡಿ ಹೋಗಿದ್ದಾರೆ.
ಒಂದು ಹಿಟಾಚಿ, ಒಂದು ಜೆಸಿಪಿ, ಎರಡು ಟ್ಯಾçಕ್ಟರ್ ಒಂದು ಬುಲೆರೋ ಸೇರಿದಂತೆ ಹಲವಾರು ವಾಹನ ವಶದಲ್ಲಿ ಪಡೆದಿದ್ದಾರೆ.
ಅದಲ್ಲದೆ ಯಾರೂ ನದಿಯಲ್ಲಿಯ ಮರುಳು ಆಕ್ರಮ ಮಾಡಬಾರದು. ಮರುಳು ತೆಗೆಯಲು ವಾಹನಗಳನ್ನು ಬಳಸಬಾರದು, ನದಿ ದಂಡೆಯ ಸಮೀಪದ ತೋಟದವರು ಮರುಳು ಆಕ್ರಮಕ್ಕೆ ವಾಹನ ಹೋಗಲು ಜಾಗ ನೀಡಬಾರದು. ಇಲ್ಲದಿದ್ದರೆ ಕ್ರಮ ಜರುಗಿಸಲಾಗುವದು ಎಂದರು.
ಆಲಮೇಲ ತಹಸೀಲ್ದಾರ ಮಹಾದೇವ ಸಣ್ಣಮೂರಿ, ಲಕ್ಷö್ಮಣ ಕಾಢೆ, ರವಿ ಕಕ್ಕಳಮೇಲಿ, ಮಾರುತಿ ಸಾಳುಂಕೆ, ಯಮನೂರ ಗೊಂಧಳಿ, ಭೀಮಣ್ಣ ಜೇರಟಗಿ, ಶರಣು ತಳವಾರ, ದತ್ತು ವಾಲಿಕಾರ, ಮಲಕಪ್ಪ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

