Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಡಚಣ: ಸಮೀಪದ ಕರ್ನಾಟಕ-ಮಹಾರಾಷ್ಟ್ರ ಗಡಿಗ್ರಾಮ ಉಮದಿಯಲ್ಲಿರುವ ಸರ್ವೋದಯ ಶಿಕ್ಷಣ ಸಂಸ್ಥೆಯ ಸಮತಾ ಮಾಧ್ಯಮಿಕ ಆಶ್ರಮ ಶಾಲೆ ಮತ್ತು ಜೂನಿಯರ್ ಕಾಲೇಜಿನ 12 ನೇ ತರಗತಿ ವಾರ್ಷಿಕ ಪರೀಕ್ಷೆಯವಿಜ್ಞಾನ ವಿಭಾಗದ ಫಲಿತಾಂಶದಲ್ಲಿ100% ರಷ್ಟು ಹಾಗೂ ಕಲಾ ವಿಭಾಗದಲ್ಲಿ 93% ರಷ್ಟು ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಐಶ್ವರ್ಯ ಗಡದೆ- 87.17%(ಪ್ರಥಮ ಸ್ಥಾನ), ಪೃಥ್ವಿ ಹೋರ್ತಿಕರ-83.50%(ದ್ವಿತೀಯ ಸ್ಥಾನ), ಪ್ರಶಾಂತ್ ಪಡುವಳೆ-83.17%(ತೃತೀಯ ಸ್ಥಾನ) ಮತ್ತು ಕಲಾ ವಿಭಾಗದಲ್ಲಿ ಸೋನಾಲಿ ಬೆಳ್ಳುಂಡಗಿ-87.67%(ಪ್ರಥಮ ಸ್ಥಾನ), ಅಶ್ವಿನಿ ಕಕಮರಿ-87.50%(ದ್ವಿತೀಯ ಸ್ಥಾನ), ಶಶಿಕಾಂತ್ ಹೊನಮುರ್ಗಿ-86.33%(ತೃತೀಯ ಸ್ಥಾನ) ಈ ರೀತಿ ಉನ್ನತ ಶ್ರೇಣಿಯಲ್ಲಿ ಅಂಕ ಗಳಿಸುವ ಮೂಲಕ ಕಾಲೇಜಿನ ಕೀರ್ತಿ ಇಮ್ಮಡಿಗೊಳಿಸಿದ್ದಾರೆ. ಇವರ ಸಾಧನೆ ಹೀಗೆ ಹೆಚ್ಚಿಸಲೆಂದು ಸಂಸ್ಥೆಯ ಅಧ್ಯಕ್ಷ ಮಹಾದೇವಪ್ಪಣ್ಣ ಹೋತಿಕರ, ಉಪ ಅಧ್ಯಕ್ಷ ರೇವಪ್ಪಣ್ಣ ಲೋಣಿ, ಕಾರ್ಯದರ್ಶಿ ಎಸ್.ಕೆ ಹೊರ್ತಿಕರ ಹಾಗೂ ಆಡಳಿತ ಮಂಡಳಿ ಸೇರಿ ಬೋಧಕ-ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಬಸವನಬಾಗೇವಾಡಿ: ಪಟ್ಟಣದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ಅವರ ನಿವಾಸದಲ್ಲಿ ಬುದ್ಧ ಪೂರ್ಣಿಮಯಂಗವಾಗಿ ಗುರುವಾರ ಗೌತಮ ಬುದ್ಧರ ೨೫೬೧ ನೇ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜಯಂತಿಯಂಗವಾಗಿ ಗೌತಮ ಬುದ್ಧ, ಡಾ.ಅಂಬೇಡ್ಕರ ಅವರ ಪ್ರತಿಮೆಗಳಿಗೆ ಪೂಜೆ ಸಲ್ಲಿಸಲಾಯಿತು.ಅಶೋಕ ಚಲವಾದಿ ಮಾತನಾಡಿ, ಬುದ್ಧ ಪೌರ್ಣಮಿಯು ಅತ್ಯಂತ ವಿಶೇಷ ಮತ್ತು ಪವಿತ್ರ ದಿನವಾಗಿದೆ. ಬುದ್ಧ ಪೌರ್ಣಮಿಯ ಭಗವಾನ್ ಬುದ್ಧನ ಜನ್ಮ, ಬೋಧನ ಮತ್ತು ಮಹಾಪರಿನಿರ್ವಾಣವನ್ನು ನೆನಪಿಸುವ ಪ್ರಮುಖ ಬೌದ್ಧ ಹಬ್ಬವಾಗಿದೆ. ಇದು ಶಾಂತಿ, ಕರುಣೆ ಮತ್ತು ಪ್ರeಯ ಆಧ್ಯಾತ್ಮಿಕ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ ಎಂದರು. ಈ ಸಂದರ್ಭದಲ್ಲಿ ವಿಠ್ಠಲ ಚಲವಾದಿ, ಪ್ರಜ್ವಲ ನಂದಿ, ಗಂಗಾ ನಂದಿ, ಪ್ರಿಯಾಂಕಾ ನಂದಿ, ಪೂಜಾ ನಂದಿ, ಅನಿತಾ ನಂದಿ ಇದ್ದರು.
ಬಸವನಬಾಗೇವಾಡಿ: ಪಟ್ಟಣದ ಬಸವ ನಗರದಲ್ಲಿರುವ ರೇಣುಕಾ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ಗುರುವಾರ ಸಂಭ್ರಮ,ಸಡಗರದಿಂದ ಜರುಗಿತು. ದೇವಿಗೆ ಜಾತ್ರಾಮಹೋತ್ಸವದಂಗವಾಗಿ ವಿಶೇಷ ಪೂಜೆ ನೆರವೇರಿತು. ಜನತೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ದೇವಿಯ ದರ್ಶನ ಪಡೆದು ತಮ್ಮ ಹರಕೆ ಸಲ್ಲಿಸಿದರು.ಬೆಳಗ್ಗೆ ಜಾತ್ರಾಮಹೋತ್ಸವದಂಗವಾಗಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಿಂದ ರೇಣುಕಾ ಯಲ್ಲಮ್ಮದೇವಿ ಪಲ್ಲಕ್ಕಿ ಉತ್ಸವವು ಕುಂಭಮೇಳ, ಜೋಗಮ್ಮಗಳ ಜೌಡಕಿ ಕುಣಿತ, ಡೊಳ್ಳು ಹಾಗೂ ತಳೇವಾಡದ ಹಣಮಂತ ಭಜಂತ್ರಿಯವರ ಕರಡಿ ಮಜಲು ತಂಡದೊಂದಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಯಲ್ಲಿ ಗಂಗಸ್ಥಳ ಪೂಜೆ ಮುಗಿಸಿಕೊಂಡ ನಂತರ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನಕ್ಕೆ ಆಗಮಿಸಿತು. ಪಲ್ಲಕ್ಕಿ ಉತ್ಸವವು ದೇವಸ್ಥಾನಕ್ಕೆ ಆಗಮಿಸಿದ ನಂತರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ಹಾಗೂ ತೊಟ್ಟಿಲು ಕಾರ್ಯಕ್ರಮ ಜರುಗಿತು.ಪಲ್ಲಕ್ಕಿ ಉತ್ಸವದಲ್ಲಿ ಶರಣಪ್ಪ ಬೆಲ್ಲದ, ಬಸವರಾಜ ಟಕ್ಕಳಕಿ, ಹಣಮಂತ ಹತ್ತಿ, ಮಹಾಂತೇಶ ಹಂಜಗಿ, ಬಸವರಾಜ ಕಾಮನಕೇರಿ, ರಮೇಶ ಪವಾರ, ಸಂಗಮೇಶ ದೊಡ್ಡಮನಿ, ಕೊಟೆಪ್ಪ ಬಿರಾದಾರ, ಮಹೇಶ ಸಾಲವಾಡಗಿ, ಭೀಮು ಗೊಳಸಂಗಿ, ಶಿವು ಜೀರ,…
ಇಂಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿದಾನದಿಂದ ಇಂಡಿ ಪಟ್ಟಣದ ಬೀರಪ್ಪ ನಗರದಲ್ಲಿರುವ ಶಬರಿಗಿರಿವಾಸ ಶ್ರೀ ಅಯ್ಯಪ್ಪ ಸ್ವಾಮಿ ಕಮೀಟಿ (ರಿ) ಇಂಡಿ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ೧ ಲಕ್ಷ (ಒಂದು ಲಕ್ಷ ರೂ.) ಚಕ್‌ನ್ನು ಯೋಜನಾಧಿಕಾರಿಯಾದ ನಟರಾಜ ಎಲ್.ಎಂ ವಿತರಿಸಿದರು.ನಟರಾಜ ಮಾತನಾಡಿ, ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕ ಮತ್ತು ದೇವಸ್ಥಾನಗಳು ನೆಮ್ಮದಿಯ ಶ್ರದ್ದಾ ಕೇಂದ್ರಗಳು. ಅದಕ್ಕಾಗಿ ಮಂಜುನಾಥ ಸನ್ನಿಧಾನದಿಂದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹಣ ನೀಡಿರುವದು ನಮ್ಮ ಸಂಸ್ಕೃತಿಯ ಪ್ರತೀಕ ಎಂದರು.ಪುಣ್ಯ ಕಾರ್ಯಗಳಲ್ಲಿ ಧರ್ಮಸ್ಥಳದ ಕಾರ್ಯ ಶ್ಳಾಘನೀಯ. ಈ ಭಾಗದಲ್ಲಿ ಸ್ತ್ರೀ ಶಕ್ತಿ ಗುಂಪುಗಳನ್ನು ಮಾಡಿ ಸ್ತ್ರೀಯರಿಗೆ ಸ್ವಾವಲಂಬಲನೆಗಾಗಿ ಹಣಕಾಸಿನ ಸಹಾಯ ನೀಡುತ್ತಿರುವದು ಹೆಮ್ಮೆಯ ವಿಷಯ. ಅನೇಕ ಮಹಿಳೆಯರು ಈ ಯೋಜನೆ ಲಾಭ ಪಡೆದಿದ್ದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಪ್ರಕಾಶ ಹೂಗಾರ, ಅಧ್ಯಕ್ಷ ಶಾಂತಕುಮಾರ ಮೇತ್ರಿ, ಕಾರ್ಯದರ್ಶಿ ಶರಣಗೌಡ ಬಿರಾದಾರ., ವಿರೇಶ ಹತ್ತೂರಮಠ, ರವಿ…
ಮುದ್ದೇಬಿಹಾಳ: ತಾಲೂಕಿನ ನೆರಬೆಂಚಿ ಗ್ರಾಮದ ಅಕ್ಷತಾ ಪ್ರವೀಣ ಮಡಿವಾಳರ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮನೆಗೆಲಸ ಮಾಡಿಕೊಂಡಿದ್ದ ಅಕ್ಷತಾ ಮಲ ವಿಸರ್ಜನೆಗೆಂದು ಮೇ೧೩ ರಂದು ಹೋದವಳು ಇಲ್ಲಿಯವರೆಗೆ ಮನೆಗೆ ವಾಪಸ್ ಬಂದಿರುವದಿಲ್ಲ ಎಂದು ಅವಳ ಪತಿ ಪ್ರವೀಣ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ವಿಜಯಪುರ: ವಿಜಯಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ.೨೭ ಹಾಗೂ ೨೮ ರಂದು ಬೆಳಗ್ಗೆ ೯ ಗಂಟೆಯಿಂದ ರಾಮನಗರದ ಟೊಯೊಟಾ ಕಿರ್ಲೋಸ್ಕರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕ್ಸ್, ಫಿಟ್ಟರ್, ಮೇಕ್ತನಿಸ್ಟ್, ಟರ್ನರ್, ಡೀಸೆಲ್ ಮೆಕ್ಯಾನಿಕ್, ಎಂ ಎಂ ವಿ, ಟಿ ಡಿ ಎಂ ವೃತ್ತಿಯಲ್ಲಿ ತೇರ್ಗಡೆ ಹೊಂದಿದ ಹಾಗೂ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಒಂದು ಪ್ರತಿ ತಮ್ಮ ಮಾಹಿತಿ ಹಾಗೂ ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರಗಳ ದಾಖಲೆ ಹಾಗೂ ಭಾವಚಿತ್ರ ದೊಂದಿಗೆ ಸಂದರ್ಶನಕ್ಕೆ ಹಾಜರಾಗಿ ಸದುಪಯೋಗ ಪಡಿಸಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಸರಕಾರಿ ಐ ಟಿ ಐ ಪ್ರಾಚಾರ್ಯರು, ದೂರವಾಣಿ ಸಂಖ್ಯೆ; ೦೮೩೫೨-೬೦೩೬೦ ಅಥವಾ ೯೮೮೬೪೩೭೫೧೭ ಕ್ಕೇ ಕರೆಮಾಡಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಜಯಪುರ: ಮಾನವೀಯತೆ ಇದು ಮಾನವರ ಅಸ್ತಿತ್ವದ ಮೂಲತತ್ವವಾಗಿದೆ ಎಂದು ಉದ್ಯಮಿ ಸುಖ್‌ರಾಜ ಪೋರವಾಲ ಹೇಳಿದರು.ನಗರದ ಬಿಎಲ್‌ಡಿಇ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಪತ್ನಿ ದಿ:ಸುಂದರದೇವಿ ಅವರ ೭ನೇ ಪುಣ್ಯಸ್ಮರಣೆ ನಿಮಿತ್ತ ಆಸ್ಪತ್ರೆಯ ರೋಗಿಗಳ ಸಂಬಂಧಿ ಹಾಗೂ ಸಿಬ್ಬಂದಿಗೆ ಉಪಹಾರ ವಿತರಿಸಿ ಮಾತನಾಡಿದರು.ನಮ್ಮ ಜೀವನದಲ್ಲಿ ಯಾವುದು ಶಾಶ್ವತವಲ್ಲ. ನಮ್ಮ ಕೆಲವು ಕಾರ್ಯಗಳು ಮಾತ್ರ ಶಾಶ್ವತ ನೆನಪುಗಳಿಗೆ ಕಾರಣವಾಗುತ್ತವೆ. ಕಳೆದ ೭ ವರ್ಷದ ಹಿಂದೆ ಪತ್ನಿ ನಿಧನರಾದ ತಕ್ಷಣ ಅವರ ಎರಡು ಕಣ್ಣು ಸೇರಿದಂತೆ ದೇಹವನ್ನು ಆಸ್ಪತ್ರೆಗೆ ದಾನ ಮಾಡಿ ಅವರ ಜೀವನದ ಸಾರ್ಥಕತೆಯನ್ನು ಸಾರಲಾಯಿತು. ನಾವು ಸಹ ಅಷ್ಟೇ ಇದ್ದಷ್ಟು ದಿನ ಉಳಿದವರ ಸೇವೆಗೆ ಸ್ವಲ್ಪ ಕಾಲಾವಕಾಶ ನೀಡೋಣ ಎಂದು ಹೇಳುತ್ತಾ ಇಂದಿನ ಈ ಕಾರ್ಯಕ್ಕೆ ಹೀರಾಚಂದ್ ಗಾಂಧಿ ಪ್ರೇರಣೆ ನೀಡಿದ್ದು ಅವರ ಮಾರ್ಗದರ್ಶನ ಅತ್ಯಂತ ಸಮಯೋಚಿತ ಎಂದರು.ರಿತೇಶಕುಮಾರ ಪೋರವಾಲ್, ಹೀರಾಚಂದ ಗಾಂಧಿ, ಇಂದುಮತಿ, ನೇಹಾ, ರಿಷಬ್ ಸೇರಿದಂತೆ ಸಮುದಾಯದ ಪ್ರಮುಖರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.
ವಿಜಯಪುರ: ಭಾರತದಲ್ಲಿ ಹುಟ್ಟಿ ಇಡೀ ವಿಶ್ವದಲ್ಲಿ ಹರಡಿರುವ ತಥಾಗತ ಗೌತಮ ಬುದ್ಧರ ಬೌದ್ಧ ಧಮ್ಮವನ್ನು ಉಳಿಸಲು ಮತ್ತು ಅದನ್ನು ಬೆಳೆಸಲು ಧಮ್ಮದ ಉಪಾಸಕರ ಮೇಲೆ ಬಹು ದೊಡ್ಡ ಜವಾಬ್ದಾರಿಯಿಂದ ಎಂದು ಚಿಂತಕ ಜೆ. ಎಸ್. ಪಾಟೀಲ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ನಗರದ ಸಾರಿಪುತ್ರ ಬುದ್ಧ ವಿಹಾರದಲ್ಲಿ ತಥಾಗತ ಗೌತಮ ಬುದ್ಧರ ೨೫೬೮ ನೇ ಜನ್ಮ ಜಯಂತಿ ಪ್ರಯುಕ್ತ ಆಯೋಜಿಸಿದ ಸಮಾರಂಭದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡಿದ ಅವರು, ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್ ಚೇತನ ಗೌತಮ್ ಬುದ್ಧರನ್ನು ನಮಗೆಲ್ಲ ಪರಿಚಯಿಸಿದವರು ಭೋದಿಸತ್ವ ಬಾಬಾಸಾಹೇಬ ಅಂಬೇಡ್ಕರವರು. ಅವರು ತೋರಿದ ಬುದ್ಧರ ಮಾರ್ಗ ನಮಗೆಲ್ಲ ಇಂದು ವಿಮೋಚನೆಗೆ ಬಹುದೊಡ್ಡ ಸಾಧನವಾಗಿದೆ. ಭಾರತ ಜಗತ್ತಿಗೆ ಬೆಳಕಾಗಿ ವಿಶ್ವಕ್ಕೆ ಗುರುವಾಗಿ ಕಂಡಿದ್ದು ಬುದ್ಧರ ಜ್ಞಾನದ ಕಾರಣಕ್ಕಾಗಿ ಜಗತ್ತಿನ ಪ್ರಥಮ ವಿಜ್ಞಾನಿ ಕಾರಣ ಹಾಗೂ ಪರಿಣಾಮದ ತತ್ವವನ್ನು ತಿಳಿಸಿದ ಮೊದಲ ವಿಜ್ಞಾನಿ ಗೌತಮರು ಎಂದು ಹೇಳಿದರು.ಬಾಬಾಸಾಹೇಬ್ ಅಂಬೇಡ್ಕರ್ ಕಂಡ ಪ್ರಬುದ್ಧ ಭಾರತ ಕನಸನ್ನು ನನಸು ಮಾಡುವ ಜವಾಬ್ದಾರಿ ಅವರ…
ಅಧಿಕಾರಿಗಳಿಂದ ಅಸ್ಕಿ, ಬೆಕಿನಾಳ, ಬೂದಿಹಾಳ(ಪಿ.ಟಿ) ಕೆರೆಗಳಿಗೆ ನೀರು ತುಂಬಿಸುವ ಮನವರಿಕೆ ಕಲಕೇರಿ: ಸಮೀಪದ ಆಸ್ಕಿ ಕೆರೆಯಲ್ಲಿ ನೂರಾರು ರೈತರು ಆಸ್ಕಿ, ಬೆಕಿನಾಳ, ಹಾಗೂ ಬೂದಿಹಾಳ ಪಿ.ಟಿ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ತಾಳಿಕೋಟಿ ತಹಶಲ್ದಾರರಾದ ಕೀರ್ತಿ ಚಾಲಕ ಮತ್ತು, ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳಾದ ಇಇ ಎಸ್.ಎನ್, ಬಂಡಿವಡರ್, ಸೆಕ್ಷನ ಆಫೀಸರ್ ಪ್ರವೀಣ ಗುಡಗುಂಟಿ ಅವರ ಮಧ್ಯವಸ್ತಿಕೆಯಲ್ಲಿ ಬುಧವಾರ ಸತ್ಯಾಗ್ರಹವನ್ನು ಹಿಂಪಡೆಯಲಾಯಿತು.ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಇರುವುದರಿಂದ ಜೂನ ೬ರ ನಂತರ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಡನೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು, ಜಿಲ್ಲಾಧಿಕಾರಿಗಳು, ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳೊಂದಿಗೆ ಸಭೆ ಮಾಡಿ ಅಧಿಕೃತವಾಗಿ ಯಾವ ರೀತಿ ಈ ೩ ಕೆರೆಗಳನ್ನು ತುಂಬಿಸಬೇಕು ಎಂದು ತಜ್ಞರಿಂದ ಸಮೀಕ್ಷೆ ಮಾಡಿಸಿ ನಂತರದಲ್ಲಿ ಒಂದು ನಿರ್ಣಯಕ್ಕೆ ಬರಬಹುದು ಎಂದು ಹೋರಾಟಕ್ಕೆ ಕುಳಿತ ರೈತರೊಡನೆ ಕೀರ್ತಿ ಚಾಲಕ ಅವರು ಮನವರಿಕೆ ಮಾಡಿದ ನಂತರ ಹೋರಾಟವನ್ನು ಹಿಂಪಡೆಯಲಾಯಿತು.ಈ…
ವಿಶೇಷಚೇತನರಿಗೆ ಉದ್ಯೋಗ ನೀಡಿಕೆ :ತಿಕೋಟಾ ತಾಲೂಕು ಮುಂಚೂಣಿ ತಿಕೋಟಾ: ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಡಿ ಗ್ರಾಮ ಪಂಚಾಯತಿ ವತಿಯಿಂದ ಜರುಗಿದ ರೋಜಗಾರ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ ಶೋಭಕ್ಕ ಶಿಳೀನ ಅವರು ಮಾತನಾಡಿದರು.ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಬಿಜ್ಜರಗಿ ಗ್ರಾಮದಲ್ಲಿ ಸುಮಾರು ೨೫ಕ್ಕೂ ಅಧಿಕ ಜನ ವಿಶೇಷಚೇತನರು ಕೂಲಿ ಕೆಲಸ ನಿರ್ವಹಿಸಿ, ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿಯೇ ವಿಶೇಷಚೇತನರಿಗೆ ಉದ್ಯೋಗ ನೀಡಿಕೆಯಲ್ಲಿ ತಿಕೋಟಾ ತಾಲೂಕು ಮುಂಚೂಣಿಯಲ್ಲಿದೆ. ಯೋಜನೆಯಡಿ ತಾಲೂಕು ವ್ಯಾಪ್ತಿಯಲ್ಲಿ ೪೭೨ ವಿಶೇಷಚೇತನರಿಗೆ ಉದ್ಯೋಗ ಖಾತ್ರಿ ಕಾರ್ಡ್ ನೀಡಲಾಗಿದ್ದು, ಈಗಾಗಲೇ ೮೪ ಜನರು ಕೆಲಸ ನಿರ್ವಹಿಸಿದ್ದು, ೯೯೩ ಮಾನವ ದಿನಗಳನ್ನು ಸೃಜನೆ ಮಾಡಿದ್ದಾರೆ. ಜಿಲ್ಲೆಯಲ್ಲಿಯೇ ಅಧಿಕ ಮಾನವ ದಿನ ಸೃಜನೆಯಾಗಿದ್ದು ನಮ್ಮ ತಾಲೂಕಿನಲ್ಲಿಯೇ ಎಂದರು. ಇದರಲ್ಲಿ ಬಿಜ್ಜರಗಿಯಲ್ಲಿಯೇ ೬೦ ಜನ ನೋಂದಣಿ ಮಾಡಿಕೊಂಡಿದ್ದು ಅದರಲ್ಲಿ ೨೫ ಜನರಿಗೆ ಈಗಾಗಲೇ ಉದ್ಯೋಗ ನೀಡಲಾಗಿದ್ದು ಅವರೇ ೩೪೨…
