ಚಡಚಣ: ಸಮೀಪದ ಕರ್ನಾಟಕ-ಮಹಾರಾಷ್ಟ್ರ ಗಡಿಗ್ರಾಮ ಉಮದಿಯಲ್ಲಿರುವ ಸರ್ವೋದಯ ಶಿಕ್ಷಣ ಸಂಸ್ಥೆಯ ಸಮತಾ ಮಾಧ್ಯಮಿಕ ಆಶ್ರಮ ಶಾಲೆ ಮತ್ತು ಜೂನಿಯರ್ ಕಾಲೇಜಿನ 12 ನೇ ತರಗತಿ ವಾರ್ಷಿಕ ಪರೀಕ್ಷೆಯ
ವಿಜ್ಞಾನ ವಿಭಾಗದ ಫಲಿತಾಂಶದಲ್ಲಿ100% ರಷ್ಟು ಹಾಗೂ ಕಲಾ ವಿಭಾಗದಲ್ಲಿ 93% ರಷ್ಟು ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಐಶ್ವರ್ಯ ಗಡದೆ- 87.17%(ಪ್ರಥಮ ಸ್ಥಾನ), ಪೃಥ್ವಿ ಹೋರ್ತಿಕರ-83.50%(ದ್ವಿತೀಯ ಸ್ಥಾನ), ಪ್ರಶಾಂತ್ ಪಡುವಳೆ-83.17%(ತೃತೀಯ ಸ್ಥಾನ) ಮತ್ತು ಕಲಾ ವಿಭಾಗದಲ್ಲಿ ಸೋನಾಲಿ ಬೆಳ್ಳುಂಡಗಿ-87.67%(ಪ್ರಥಮ ಸ್ಥಾನ), ಅಶ್ವಿನಿ ಕಕಮರಿ-87.50%(ದ್ವಿತೀಯ ಸ್ಥಾನ), ಶಶಿಕಾಂತ್ ಹೊನಮುರ್ಗಿ-86.33%(ತೃತೀಯ ಸ್ಥಾನ) ಈ ರೀತಿ ಉನ್ನತ ಶ್ರೇಣಿಯಲ್ಲಿ ಅಂಕ ಗಳಿಸುವ ಮೂಲಕ ಕಾಲೇಜಿನ ಕೀರ್ತಿ ಇಮ್ಮಡಿಗೊಳಿಸಿದ್ದಾರೆ. ಇವರ ಸಾಧನೆ ಹೀಗೆ ಹೆಚ್ಚಿಸಲೆಂದು ಸಂಸ್ಥೆಯ ಅಧ್ಯಕ್ಷ ಮಹಾದೇವಪ್ಪಣ್ಣ ಹೋತಿಕರ, ಉಪ ಅಧ್ಯಕ್ಷ ರೇವಪ್ಪಣ್ಣ ಲೋಣಿ, ಕಾರ್ಯದರ್ಶಿ ಎಸ್.ಕೆ ಹೊರ್ತಿಕರ ಹಾಗೂ ಆಡಳಿತ ಮಂಡಳಿ ಸೇರಿ ಬೋಧಕ-ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಪಿಯುಸಿ: ಸರ್ವೋದಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಉತ್ತಮ ಸಾಧನೆ
Related Posts
Add A Comment

