ವಿಜಯಪುರ: ಮಾನವೀಯತೆ ಇದು ಮಾನವರ ಅಸ್ತಿತ್ವದ ಮೂಲತತ್ವವಾಗಿದೆ ಎಂದು ಉದ್ಯಮಿ ಸುಖ್‌ರಾಜ ಪೋರವಾಲ ಹೇಳಿದರು.
ನಗರದ ಬಿಎಲ್‌ಡಿಇ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಪತ್ನಿ ದಿ:ಸುಂದರದೇವಿ ಅವರ ೭ನೇ ಪುಣ್ಯಸ್ಮರಣೆ ನಿಮಿತ್ತ ಆಸ್ಪತ್ರೆಯ ರೋಗಿಗಳ ಸಂಬಂಧಿ ಹಾಗೂ ಸಿಬ್ಬಂದಿಗೆ ಉಪಹಾರ ವಿತರಿಸಿ ಮಾತನಾಡಿದರು.
ನಮ್ಮ ಜೀವನದಲ್ಲಿ ಯಾವುದು ಶಾಶ್ವತವಲ್ಲ. ನಮ್ಮ ಕೆಲವು ಕಾರ್ಯಗಳು ಮಾತ್ರ ಶಾಶ್ವತ ನೆನಪುಗಳಿಗೆ ಕಾರಣವಾಗುತ್ತವೆ. ಕಳೆದ ೭ ವರ್ಷದ ಹಿಂದೆ ಪತ್ನಿ ನಿಧನರಾದ ತಕ್ಷಣ ಅವರ ಎರಡು ಕಣ್ಣು ಸೇರಿದಂತೆ ದೇಹವನ್ನು ಆಸ್ಪತ್ರೆಗೆ ದಾನ ಮಾಡಿ ಅವರ ಜೀವನದ ಸಾರ್ಥಕತೆಯನ್ನು ಸಾರಲಾಯಿತು. ನಾವು ಸಹ ಅಷ್ಟೇ ಇದ್ದಷ್ಟು ದಿನ ಉಳಿದವರ ಸೇವೆಗೆ ಸ್ವಲ್ಪ ಕಾಲಾವಕಾಶ ನೀಡೋಣ ಎಂದು ಹೇಳುತ್ತಾ ಇಂದಿನ ಈ ಕಾರ್ಯಕ್ಕೆ ಹೀರಾಚಂದ್ ಗಾಂಧಿ ಪ್ರೇರಣೆ ನೀಡಿದ್ದು ಅವರ ಮಾರ್ಗದರ್ಶನ ಅತ್ಯಂತ ಸಮಯೋಚಿತ ಎಂದರು.
ರಿತೇಶಕುಮಾರ ಪೋರವಾಲ್, ಹೀರಾಚಂದ ಗಾಂಧಿ, ಇಂದುಮತಿ, ನೇಹಾ, ರಿಷಬ್ ಸೇರಿದಂತೆ ಸಮುದಾಯದ ಪ್ರಮುಖರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

