ಇಂಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸನ್ನಿದಾನದಿಂದ ಇಂಡಿ ಪಟ್ಟಣದ ಬೀರಪ್ಪ ನಗರದಲ್ಲಿರುವ ಶಬರಿಗಿರಿವಾಸ ಶ್ರೀ ಅಯ್ಯಪ್ಪ ಸ್ವಾಮಿ ಕಮೀಟಿ (ರಿ) ಇಂಡಿ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ೧ ಲಕ್ಷ (ಒಂದು ಲಕ್ಷ ರೂ.) ಚಕ್‌ನ್ನು ಯೋಜನಾಧಿಕಾರಿಯಾದ ನಟರಾಜ ಎಲ್.ಎಂ ವಿತರಿಸಿದರು.
ನಟರಾಜ ಮಾತನಾಡಿ, ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕ ಮತ್ತು ದೇವಸ್ಥಾನಗಳು ನೆಮ್ಮದಿಯ ಶ್ರದ್ದಾ ಕೇಂದ್ರಗಳು. ಅದಕ್ಕಾಗಿ ಮಂಜುನಾಥ ಸನ್ನಿಧಾನದಿಂದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹಣ ನೀಡಿರುವದು ನಮ್ಮ ಸಂಸ್ಕೃತಿಯ ಪ್ರತೀಕ ಎಂದರು.
ಪುಣ್ಯ ಕಾರ್ಯಗಳಲ್ಲಿ ಧರ್ಮಸ್ಥಳದ ಕಾರ್ಯ ಶ್ಳಾಘನೀಯ. ಈ ಭಾಗದಲ್ಲಿ ಸ್ತ್ರೀ ಶಕ್ತಿ ಗುಂಪುಗಳನ್ನು ಮಾಡಿ ಸ್ತ್ರೀಯರಿಗೆ ಸ್ವಾವಲಂಬಲನೆಗಾಗಿ ಹಣಕಾಸಿನ ಸಹಾಯ ನೀಡುತ್ತಿರುವದು ಹೆಮ್ಮೆಯ ವಿಷಯ. ಅನೇಕ ಮಹಿಳೆಯರು ಈ ಯೋಜನೆ ಲಾಭ ಪಡೆದಿದ್ದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಪ್ರಕಾಶ ಹೂಗಾರ, ಅಧ್ಯಕ್ಷ ಶಾಂತಕುಮಾರ ಮೇತ್ರಿ, ಕಾರ್ಯದರ್ಶಿ ಶರಣಗೌಡ ಬಿರಾದಾರ., ವಿರೇಶ ಹತ್ತೂರಮಠ, ರವಿ ಗವಳಿ, ಮಲ್ಲಿಕಾರ್ಜುನ ಬಿರಾದಾರ, ಚಂದ್ರಶೇಖರ ಮದರಿ, ಚಿದಾನಂದ ಕುಂಬಾರ, ಮಲ್ಲು ಮಾಳಿ, ಸಿದ್ದು ಅರಕೇರಿ, ರಾಜು ತಲ್ಯಾಳ, ಪುನೀತ ಬಿರಾದಾರ, ರಾಜು ಸಾತಪೂರ, ಲಿಂಬಾಜಿ ರಾಠೋಡ, ಸಿದ್ದು ಶಿವಣಗಿ, ಅಮೋಘಸಿದ್ದ ಬಗಲಿ, ಕೃಷ್ಣಾ ಬಿರಾದಾರ, ಪರುಶುರಾಮ ನಿಂಬರಗಿ, ಶಂಕರ ಪಾಟೀಲ, ಸುಭಾಷ ರಾಠೋಡ, ಸಂತೋಷ ರಾಠೋಡ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

