ವಿಜಯಪುರ: ಭಾರತದಲ್ಲಿ ಹುಟ್ಟಿ ಇಡೀ ವಿಶ್ವದಲ್ಲಿ ಹರಡಿರುವ ತಥಾಗತ ಗೌತಮ ಬುದ್ಧರ ಬೌದ್ಧ ಧಮ್ಮವನ್ನು ಉಳಿಸಲು ಮತ್ತು ಅದನ್ನು ಬೆಳೆಸಲು ಧಮ್ಮದ ಉಪಾಸಕರ ಮೇಲೆ ಬಹು ದೊಡ್ಡ ಜವಾಬ್ದಾರಿಯಿಂದ ಎಂದು ಚಿಂತಕ ಜೆ. ಎಸ್. ಪಾಟೀಲ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನಗರದ ಸಾರಿಪುತ್ರ ಬುದ್ಧ ವಿಹಾರದಲ್ಲಿ ತಥಾಗತ ಗೌತಮ ಬುದ್ಧರ ೨೫೬೮ ನೇ ಜನ್ಮ ಜಯಂತಿ ಪ್ರಯುಕ್ತ ಆಯೋಜಿಸಿದ ಸಮಾರಂಭದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡಿದ ಅವರು, ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್ ಚೇತನ ಗೌತಮ್ ಬುದ್ಧರನ್ನು ನಮಗೆಲ್ಲ ಪರಿಚಯಿಸಿದವರು ಭೋದಿಸತ್ವ ಬಾಬಾಸಾಹೇಬ ಅಂಬೇಡ್ಕರವರು. ಅವರು ತೋರಿದ ಬುದ್ಧರ ಮಾರ್ಗ ನಮಗೆಲ್ಲ ಇಂದು ವಿಮೋಚನೆಗೆ ಬಹುದೊಡ್ಡ ಸಾಧನವಾಗಿದೆ. ಭಾರತ ಜಗತ್ತಿಗೆ ಬೆಳಕಾಗಿ ವಿಶ್ವಕ್ಕೆ ಗುರುವಾಗಿ ಕಂಡಿದ್ದು ಬುದ್ಧರ ಜ್ಞಾನದ ಕಾರಣಕ್ಕಾಗಿ ಜಗತ್ತಿನ ಪ್ರಥಮ ವಿಜ್ಞಾನಿ ಕಾರಣ ಹಾಗೂ ಪರಿಣಾಮದ ತತ್ವವನ್ನು ತಿಳಿಸಿದ ಮೊದಲ ವಿಜ್ಞಾನಿ ಗೌತಮರು ಎಂದು ಹೇಳಿದರು.
ಬಾಬಾಸಾಹೇಬ್ ಅಂಬೇಡ್ಕರ್ ಕಂಡ ಪ್ರಬುದ್ಧ ಭಾರತ ಕನಸನ್ನು ನನಸು ಮಾಡುವ ಜವಾಬ್ದಾರಿ ಅವರ ಅನುಯಾಯಿಗಳ ಮೇಲೆ ಅಷ್ಟೆ ಅಲ್ಲದೇ ಧಮ್ಮದ ಉಪಾಸಕರ ಮೇಲೆಯೂ ಇದೆ ಎಂದು ಜೆ. ಎಚ್. ಪಾಟೀಲ ಹೇಳಿದರು.
ಈ ವೇಳೆ ಯೊಗ ಗುರುಗಳಾದ ಮಡಿವಾಳಪ್ಪ ದೊಡ್ಡಮನಿಯವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಬೌದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತೀಯ ಬೌದ್ಧ ಮಹಾಸಭೆಯ ಬಸವರಾಜ ಚಲವಾದಿ, ಅನ್ನಪೂರ್ಣ ಬೆಳ್ಳೇನ್ನವರ, ಎಂ. ಪಿ. ದೊಡ್ಡಮನಿ, ಅಲ್ಲದೇ ಹಲವು ಮುಖಂಡರು, ಉಪಾಸಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ವೆಂಕಟೇಶ್ ವಗ್ಗೆನವರ ಅವರು ಸಮಾರಂಭದ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
ಬೌದ್ಧ ಧಮ್ಮ ಉಳಿವಿಗೆ ಉಪಾಸಕರ ಮೇಲೆ ದೊಡ್ಡ ಜವಾಬ್ದಾರಿ :ಜೆ.ಎಸ್.ಪಾಟೀಲ
Related Posts
Add A Comment

