Author: editor.udayarashmi@gmail.com

ಮುದ್ದೇಬಿಹಾಳ: ಪುನೀತ್ ರಾಜಕುಮಾರ ಅವರ ಮಾನವೀಯಗುಣಗಳನ್ನು ನಾಡಿಗೆ ಪರಿಚಯಿಸುವ ಉದ್ದೇಶದಿಂದ ಅವರ ಅಭಿಮಾನಿಯೊಬ್ಬರು ೫ ಲಕ್ಷ ಗಿಡಗಳನ್ನು ನೆಡುವ ಸಂಕಲ್ಪ ತೊಟ್ಟು ಜಗತ್ತಿನಾದ್ಯಂತ ಪ್ರವಾಸ ಕೈಗೊಂಡಿದ್ದಾರೆ.೩ ವರ್ಷದ ಸುಧೀರ್ಘ ಪ್ರವಾಸದಲ್ಲಿರುವಾಗ ಪಟ್ಟಣದಲ್ಲಿ ಗುರುವಾರ ಮಾಧ್ಯಮದವರಿಗೆ ಕಾಣಿಸಿಕೊಂಡ ಈ ಅಪ್ಪು ಅಭಿಮಾನಿ ಮೂಲತಃ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಗ್ರಾಮದವರು. ಇವರ ಹೆಸರು ಮುತ್ತು ಸೆಲ್ವಂ. ಇವರ ಸ್ನೇಹಿತರ ಮಡದಿಯೊಬ್ಬರ ಆಪರೇಶನ್ ಸಂದರ್ಭದಲ್ಲಿ ಸಹಾಯ ಕೇಳಿದಾಗ ಗೋಲ್ಡ್ ಚೈನ್‌ಒಂದನ್ನ ಅಪ್ಪು ಸಹಾಯ ಮಾಡಿದ್ದು ಅಂದಿನಿಂದ ಅವರ ಅಭಿಮಾನಿಯಾಗಿದ್ದೇನೆ ಎಂದು ಹೇಳಿಕೊಂಡರು. ಅವರು ಕಾಲವಾದ ನಂತರ ನಾನು ಜಗತ್ತಿನಾದ್ಯಂತ ಸೈಕಲ್ ಮೂಲಕ ಸವಾರಿ ಪ್ರಾರಂಭಿಸಿದ್ದು, ಅಪ್ಪು ಅವರ ಒಳ್ಳೆಯ ಗುಣಗಳನ್ನು ಎಲ್ಲೆಡೆ ಪಸರಿಸುತ್ತ ಪ್ರತೀ ತಾಲೂಕಿನಲ್ಲೊಂದು ಅವರ ಹೆಸರಿನಲ್ಲಿ ಸಸಿ ನೆಡುತ್ತಾ ಸವಾರಿ ನಡೆಸಿದ್ದೇನೆ. ಈಗಾಗಲೇ ೩ಲಕ್ಷ ೫೧ಸಾವಿರ ಸಸಿಗಳನ್ನು ನೆಟ್ಟಿದ್ದು ಒಟ್ಟು ೫ಲಕ್ಷ ಸಸಿ ನೆಡುವ ಯೋಜನೆ ಹಾಕಿಕೊಂಡಿದ್ದೇನೆ. ತಮಿಳುನಾಡಿನಿಂದ ಶುರುವಾದ ನನ್ನ ಸೈಕಲ್ ಸವಾರಿ ಲಡಾಕ್, ಜಮ್ಮು, ಗೋವಾ, ರಾಜಸ್ಥಾನ ರಾಜ್ಯಗಳಲ್ಲಿ…

Read More

ಮುದ್ದೇಬಿಹಾಳ: ಪಟ್ಟಣದ ಸೇರಿದಂತೆ ತಾಲೂಕಿನ ಕೆಲವೆಡೆ ಗುರುವಾರ ಗಾಳಿ, ಗುಡುಗು, ಸಿಡಿಲು ಮತ್ತು ಭಾರಿ ಮಳೆಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.ತಾಲೂಕಿನ ಅಡವಿ ಹುಲಗಬಾಳ ಗ್ರಾಮದ ಹಣಮಂತ್ರಾಯ ಕಂಬಾರ ಅವರಿಗೆ ಸೇರಿದ ಎತ್ತು, ಗೋನಾಳ ಎಸ್.ಎಚ್ ಗ್ರಾಮದಲ್ಲಿ ಬಸವರಾಜ ಪಾಟೀಲರಿಗೆ ಸೇರಿದ ಒಂದು ಆಕಳು ಇದೇ ಗ್ರಾಮದ ಬಸವರಾಜ ಉಪಲದಿನ್ನಿಯವರಿಗೆ ಸೇರಿದ ಒಂದು ಎತ್ತು, ಹಡಲಗೇರಿ ಗ್ರಾಮದಲ್ಲಿ ನಾಗಪ್ಪ ಹುರುಳಿಯವರಿಗೆ ಸೇರಿದ್ದ ಎಮ್ಮೆ ಸಿಡಿಲಿಗೆ ಬಲಿಯಾದರೆ, ತಾಲೂಕಿನ ಗೆದ್ದಲಮರಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಬೃಹದಾಕಾರದ ಬೇವಿನ ಮರವೊಂದು ನೆಲಕ್ಕುರುಳಿ ರಸ್ತೆಯನ್ನು ಆವರಿಸಿಕೊಂಡು ಸುಮಾರು ಹೊತ್ತು ವಾಹನ ಸವಾರರು ಪರದಾಡುವಂತಾಯಿತು.ಪಟ್ಟಣದ ತಾಲೂಕು ಪಂಚಾಯತ ಕಾರ್ಯಾಲಯದ ಆವರಣದಲ್ಲಿ ನೀರು ನಿಂತು ಕೆಲಹೊತ್ತು ತೊಂದರೆಯನ್ನುಂಟು ಮಾಡಿತು. ಕೆಲ ಅಂಗಡಿಗಳೊಳಗೆ ಮಳೆ ನೀರು ಹೊಕ್ಕಿದ್ದವು. ಆ ನೀರನ್ನು ಹೊರಚೆಲ್ಲಲು ಅಂಗಡಿಕಾರರು ಹೆಣಗಾಡಿದ ಸಂದರ್ಭಗಳು ಕಂಡುಬಂದವು. ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಬೃಹತ್ ಮರವೊಂದು ನಿಲ್ದಾಣದ ಫುಟ್ ಪಾತ್ ಮೇಲಿನ ಹೂ ಮತ್ತು ಹಣ್ಣಿನ…

Read More

ಬರ ಪರಿಸ್ಥಿತಿ ನಿರ್ವಹಣೆ-ಕುಡಿಯುವ ನೀರಿನ ಸ್ಥಿತಿಗತಿ ಕುರಿತು ವಿವರಣೆ ವಿಜಯಪುರ: ಜಿಲ್ಲೆಯಲ್ಲಿ ಸಮರ್ಪಕವಾಗಿ ಬರ ಪರಿಸ್ಥಿತಿ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸ್ಥಿತಿಗತಿ ಕುರಿತು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಇಂದು ವಿಡಿಯೋ ಸಂವಾದದ ಮೂಲಕ ಮಾಹಿತಿ ಒದಗಿಸಿದರು.ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಮಾರ್ಚ್-೨೦೨೪ರಿಂದ ಮೇ. ತಿಂಗಳ೨೨ರವರೆಗೆ ವಾಡಿಕೆ ಮಳೆ ೪೧.೦೦ ಮಿ.ಮೀ. ಇದ್ದು, ೬೯.೦೦ ಮೀ.ಮೀ. ಮಳೆಯಾಗುವ ಮೂಲಕ ಶೇ.೬೬ ರಷ್ಟು ಹೆಚ್ಚಿನ ಮಳೆಯಾಗಿದೆ. ಪ್ರಕೃತಿ ವಿಕೋಪದಡಿ ಹಾನಿಗೊಳಗಾದ ತೊಗರಿ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ, ಹತ್ತಿ ಮತ್ತು ಕಬ್ಬು, ಉಳ್ಳಾಗಡ್ಡಿ, ಮೆಣಸಿನಕಾಯಿ, ಟೊಮೆಟೊ ಬದನೆ, ಬೀನ್ಸ್, ನಿಂಬೆ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಬೆಳೆಯ ಒಟ್ಟು ೨೬೭೭೨೦ ಫಲಾನುಭವಿಗಳ ಪೈಕಿ ೨,೫೦,೦೬೩ ರೈತರಿಗೆ ೪೧೩೪೮.೭೬ ಲಕ್ಷ ರೂ. ಪರಿಹಾರ ಧನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಒದಗಿಸಲಾಗಿದೆ. ೩೨೭೮ ವಿವಿಧ ಪ್ರಕರಣಗಳು ಬಾಕಿ ಉಳಿದಿದ್ದು, ಮೇ.೨೨ ರಂದು ೧೩೨೯ ಫಲಾನುಭವಿಗಳ ಪಟ್ಟಿಯನ್ನು ಅನುಮೋದಿಸಿ ಸಲ್ಲಿಸಲಾಗಿದೆ. ಜಿಲ್ಲೆಗೆ…

Read More

ಸಿಂದಗಿ: ಪ್ರಸಕ್ತ ಸಾಲಿನಿಂದ ಪಟ್ಟಣದ ಸಾರಂಗಮಠದ ಶ್ರೀ ಪದ್ಮರಾಜ ಫ್ರೀ ಬೋರ್ಡಿಂಗ್‌ನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಒದಗಿಸಲಾಗುವುದು. ಗ್ರಾಮೀಣ ಭಾಗದ ೫,೬,೭ ಹಾಗೂ ೮ನೆಯ ತರಗತಿಯ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅವಕಾಶಗಳನ್ನು ಕಾಯ್ದಿರಿಸಲಾಗಿದೆ. ಸಿಬಿಎಸ್‌ಸಿ ಮತ್ತು ರಾಜ್ಯ ಪಠ್ಯಕ್ರಮದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶ. ಗ್ರಾಮೀಣ ಭಾಗದ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯಲು ಸಮಸ್ಯೆಯಿರುವ ಕಾರಣ ಅವರಿಗೆ ಉಚಿತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಶ್ರೀ ಸಾರಂಗಮಠದ ಫ್ರೀ ಬೋರ್ಡಿಂಗ್ ಸಾರಂಗಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ವ್ಯವಸ್ಥೆ ಕಡ್ಡಾಯವಾಗಿ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರಿಗೆ ಮಾತ್ರವಿರುತ್ತದೆ. ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಪರೀಕ್ಷೆ ಬರೆಯುವುದು ಕಡ್ಡಾವಾಗಿದೆ. ಪರೀಕ್ಷೆಯು ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ವಿಯಜಪುರ ರಸ್ತೆಯ ಕಾಲೇಜು ಕ್ಯಾಂಪಸ್‌ನಲ್ಲಿ ಜೂ.೦೯ರಂದು ಬೆಳಿಗ್ಗೆ ೧೧ಗಂಟೆಗೆ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ ಇಚ್ಚೆಯುಳ್ಳವರು ಡಾ.ಶರಣಬಸವ ಜೋಗುರ, ಚನ್ನಬಸವ ಕತ್ತಿ, ವೀರೇಶ ಜೋಗುರ ೯೮೪೫೩೩೩೦೯೩/೯೯೪೫೯೫೨೫೯೯/೯೪೮೩೩೭೬೯೮೪ ಸಂಪರ್ಕಿಸಿ ಮೇಲಿನ…

Read More

ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ & ಕರ್ನಾಟಕ ಛಾಯಾಗ್ರಾಹಕರ ಸಂಘದ ಸಹಯೋಗದಲ್ಲಿ ಸೋನಿ ಅಲ್ಫಾ ಛಾಯಾಗ್ರಹಣ ಕಾರ್ಯಗಾರ ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಕರ್ನಾಟಕ ಛಾಯಾಗ್ರಾಹಕರ ಸಂಘದ ಸಹಯೋಗದಲ್ಲಿ ನಗರದ ಫರ್ನ ಹೋಟೆಲ್ ಸಭಾಂಗಣದಲ್ಲಿ ಸೋನಿ ಅಲ್ಫಾ ಛಾಯಾಗ್ರಹಣ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತುಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಮೇಶ ಬಿದನೂರ, ಆಧುನಿಕ ತಂತ್ರಜ್ಞಾನದೊಂದಿಗೆ ಇವತ್ತಿನ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಆಧುನಿಕ ಜಗತ್ತಿನ ಎಲ್ಲಾ ನೋವು-ನಲಿವುಗಳ ಜೊತೆಯಲ್ಲಿ ಐತಿಹಾಸಿಕ ದಾಖಲೀಕರಣ ಮಾಡುವವರು ಛಾಯಾಗ್ರಾಹಕರು. ಜಗತ್ತಿನಲ್ಲಿ ಎಷ್ಟೇ ಪ್ರಭಾವಶಾಲಿಯಾದ ವ್ಯಕ್ತಿಯನ್ನು ಸ್ಮಾಯಿಲ್ ಪ್ಲೀಸ್ ಅನ್ನುವ ಹಕ್ಕು ಇರುವುದು ಮಾತ್ರ ಛಾಯಾಗ್ರಾಹಕರಿಗೆ. ಅಂತಹ ವೃತ್ತಿ ಇವತ್ತು ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದಿದೆ. ಸಮಾಜದಲ್ಲಿ ಯಾವುದೆ ವೃತ್ತಿಯಿಂದ ಜನ ನನ್ನನ್ನು ಗುರುತಿಸುತಿದ್ದರೂ ನಾನು ಮೂಲತ: ಇದೆ ಛಾಯಾಗ್ರಾಹಕ ವೃತ್ತಿಯಿಂದನೆ ಬೆಳೆದದ್ದು. ಛಾಯಾಗ್ರಾಹಕರಿಗೆ ಕಲಾವಿದರಿಗೆ ನಾವು ಗೌರವಿಸಬೇಕು ಎಂದು ತಮ್ಮ ಉದ್ಘಾಟನಾಪರ ಮಾತುಗಳನ್ನಾಡಿದರು.ಮುಖ್ಯ ಅತಿಥಿಗಳಾಗಿ ಸೋನಿ ಕಂಪನಿಯ ಹಿರಿಯ ಮಾರಾಟಗಾರರಾದ ನಿತೀನಕುಮಾರ…

Read More

ಸಿಂದಗಿ: ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದರಿಂದ ನಮ್ಮ ಜೀವವನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು. ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಸುರಕ್ಷಿತವಾಗಿ ವಾಹನ ಚಲಿಸುವುದು ನಾವೆಲ್ಲರೂ ರೂಢಿ ಮಾಡಿಕೊಳ್ಳಬೇಕು ಎಂದು ಸಿಂದಗಿ ಪೋಲಿಸ ಠಾಣೆಯ ಆರಕ್ಷಕ ಅಧಿಕಾರಿ ಭೀಮಪ್ಪ ರಬಕವಿ ಹೇಳಿದರು.ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಪದವಿ ಕಾಲೇಜ, ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಸಿಂದಗಿ ಪೋಲಿಸ್ ಠಾಣೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೨೦೨೩-೨೪ನೆಯ ಸಾಲಿನಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ಪರಿಣಾಮ ಸುಮಾರು ೪೧೮ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ನಾವೇಲ್ಲರೂ ನಮ್ಮ ಕುಟುಂಬವನ್ನು ರಕ್ಷಣೆ ಮಾಡುವಂತವರು. ನಾವು ಜಾಗೃತರಾಗಿ ಕಡ್ಡಾಯವಾಗಿ ಹೆಲ್ಮೆಟ್‌ನ್ನು ಧರಿಸಿ ವಾಹನ ಚಲಾಯಿಸಬೇಕು ಎಂದರು.ಈ ವೇಳೆ ಎಚ್.ಜಿ.ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಂ.ಹುರಕಡ್ಲಿ, ಉಪನ್ಯಾಸಕ ಎಸ್.ಆರ್.ಬಿರಾದಾರ, ಎಸ್.ಎ.ಜಾಗಿರದಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.

Read More

ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಗೆ ಚಾಲನೆ | ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ಬೆಂಗಳೂರು: ಹಲವಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ, ಜೆಡಿಎಸ್‌ನಿಂದ ಅಮಾನತುಗೊಂಡಿರುವ ಜೆಡಿಎಸ್ ಸಂಸದ, ಲೋಕಸಭಾ ಚುನಾವಣೆ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಗುರುವಾರ ಹೇಳಿದ್ದು, ‘ಅವರನ್ನು ದೇಶಕ್ಕೆ ಕರೆತರಲು ಕೇಂದ್ರವು ಸಹಕರಿಸಲು ಸಿದ್ಧ” ಎಂದರು.ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಪ್ರಜ್ವಲ್ ವಿದೇಶಕ್ಕೆ ತೆರಳುವ ಮುನ್ನವೇಕೆ ಪ್ರಕರಣ ದಾಖಲಿಸಿ ಬಂಧಿಸಲಿಲ್ಲ” ಎಂದು ಪ್ರಶ್ನಿಸಿದರು. “ಕಾಂಗ್ರೆಸ್ ಪಕ್ಷವು ಕೇಂದ್ರದ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ; ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ” ಎಂದು ಕೇಂದ್ರ ಸಚಿವರು ಆರೋಪಿಸಿದರು.ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ತ್ವರಿತ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ…

Read More

ರಾಜ್ಯಪಾಲರ ಭೇಟಿ ಮಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗ ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗವು ರಾಜ್ಯಪಾಲ ಥಾಮರ್ ಚಂದ್ ಗೆಹ್ಲೋಟ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿತ್ತು.ಕೆಯುಡಬ್ಲೂೃಜೆ ಹೊರನಾಡಿನ ಘಟಕವಾಗಿರುವ ಕಾಸರಗೋಡು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘವು ಆಯೋಜಿಸಲಿರುವ ಪತ್ರಕರ್ತರ ಸಮಾರಂಭಕ್ಕೆ ಆಗಮಿಸಬೇಕು ಎಂದು ವಿನಂತಿಸಿತು.ಸರ್ಕಾರ ಮತ್ತು ಜನರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಮಾಧ್ಯಮ ಮತ್ತು ಪತ್ರಕರ್ತರು, ತಮ್ಮದೇ ಆದ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದು, ಸಾಮಾಜದ ಸ್ವಾಸ್ತ್ಯ ಕಾಪಾಡುತ್ತಿದ್ದಾರೆ ಎಂದು ಶ್ಲಾಸಿದರು.ಕೆಯುಡಬ್ಲೂೃಜೆ ಹುಟ್ಟು ಹಾಕಿದ ಸಾಹಿತಿ ಮತ್ತು ಪತ್ರಕರ್ತ ಡಿ.ವಿ.ಗುಂಡಪ್ಪ ಅವರ ಬಗ್ಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ನೀಡಿದ ಮಾಹಿತಿ ತಿಳಿದುಕೊಂಡ ರಾಜ್ಯಪಾಲರು, ಅವರ ಆದರ್ಶದಲ್ಲಿ ಈಗಲೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದೆ ಕೆಯುಡಬ್ಲೂೃಜೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.ತಾವು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಕೇರಳ ಮತ್ತು ಕಾಸರಗೋಡು ಭಾಗಕ್ಕೆ ಭೇಟಿ ನೀಡಿದ ನೆನಪುಗಳನ್ನು…

Read More

ಮುದ್ದೇಬಿಹಾಳ: ನಮಗೆ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ಪುರಸಭೆಯ ವಾರ್ಡ ನಂ ೧೫ ರ ನಿವಾಸಿಗಳು ಪುರಸಭೆ ಕಾರ್ಯಾಲಯಕ್ಕೆ ಖಾಲಿ ಕೊಡಗಳನ್ನು ತಂದು ಮುಖ್ಯದ್ವಾರದ ಬಳಿ ಕುಳಿತು ಗುರುವಾರ ದಿಢೀರನೆ ಪ್ರತಿಭಟನೆ ನಡೆಸಿದರು.ಬೇಕೆ ಬೇಕೆ ನ್ಯಾಯ ಬೇಕು ಎಂದು ಪುರಸಭೆಗೆ ಧಿಕ್ಕಾರ ಹಾಕುತ್ತಿದ್ದಂತೆಯೇ ಪ್ರತಿಭಟನಾಕಾರರ ಮನವೊಲಿಸಲು ಮುಖ್ಯಾಧಿಕಾರಿ ಆಗಮಿಸಿದರು. ಆಗಿರುವ ತೊಂದರೆಯನ್ನು ನಾನು ಬಗೆಹರಿಸುವೆ, ಮಧ್ಯಾಹ್ನ ೪ಗಂಟೆ ಹೊತ್ತಿಗೆ ನೀರು ಬಿಡಿಸುವ ವ್ಯವಸ್ಥೆ ಮಾಡುತ್ತೇನೆ ದಯಮಾಡಿ ಪ್ರತಿಭಟಿಸಬೇಡಿ ಎಂದು ಕೇಳಿಕೊಂಡರು. ಮುಖ್ಯಾಧಿಕಾರಿಗಳ ಮಾತಿಗೆ ಜಗ್ಗದ ಪ್ರತಿಭಟನಾಕಾರರು ಸುಮಾರು ದಿನಗಳಿಂದ ನಾವು ಈ ಸಮಸ್ಯೆ ಮಾತ್ರವಲ್ಲದೇ ವಿದ್ಯತ್, ತ್ಯಾಜ್ಯ ವಿಲೇವಾರಿ, ಸ್ವಚ್ಛತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನೀವು ಏನೇ ಹೇಳಿದರೂ ನಾವು ಇಲ್ಲಿಂದ ಕದಲುವದಿಲ್ಲ. ಮೊದಲು ನೀರು ಬಿಡುವ ನೌಕರನನ್ನು ಇಲ್ಲಿಗೆ ಕರೆಯಿಸಿ ಯಾಕೆ ನಮಗೆ ನೀರು ಬಿಡಲು ಹಿಂದೇಟು ಹಾಕುತ್ತಾನೆ ಎಂಬ ಬಗ್ಗೆ ಎಲ್ಲರೆದುರು ಪ್ರಶ್ನಿಸಿ ಆತನಿಂದ ಸೂಕ್ತ ಉತ್ತರ ಬಂದರೆ ಮಾತ್ರ ನಾವು ಇಲ್ಲಿಂದ…

Read More