ಮುದ್ದೇಬಿಹಾಳ: ಪುನೀತ್ ರಾಜಕುಮಾರ ಅವರ ಮಾನವೀಯಗುಣಗಳನ್ನು ನಾಡಿಗೆ ಪರಿಚಯಿಸುವ ಉದ್ದೇಶದಿಂದ ಅವರ ಅಭಿಮಾನಿಯೊಬ್ಬರು ೫ ಲಕ್ಷ ಗಿಡಗಳನ್ನು ನೆಡುವ ಸಂಕಲ್ಪ ತೊಟ್ಟು ಜಗತ್ತಿನಾದ್ಯಂತ ಪ್ರವಾಸ ಕೈಗೊಂಡಿದ್ದಾರೆ.
೩ ವರ್ಷದ ಸುಧೀರ್ಘ ಪ್ರವಾಸದಲ್ಲಿರುವಾಗ ಪಟ್ಟಣದಲ್ಲಿ ಗುರುವಾರ ಮಾಧ್ಯಮದವರಿಗೆ ಕಾಣಿಸಿಕೊಂಡ ಈ ಅಪ್ಪು ಅಭಿಮಾನಿ ಮೂಲತಃ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಗ್ರಾಮದವರು. ಇವರ ಹೆಸರು ಮುತ್ತು ಸೆಲ್ವಂ. ಇವರ ಸ್ನೇಹಿತರ ಮಡದಿಯೊಬ್ಬರ ಆಪರೇಶನ್ ಸಂದರ್ಭದಲ್ಲಿ ಸಹಾಯ ಕೇಳಿದಾಗ ಗೋಲ್ಡ್ ಚೈನ್‌ಒಂದನ್ನ ಅಪ್ಪು ಸಹಾಯ ಮಾಡಿದ್ದು ಅಂದಿನಿಂದ ಅವರ ಅಭಿಮಾನಿಯಾಗಿದ್ದೇನೆ ಎಂದು ಹೇಳಿಕೊಂಡರು. ಅವರು ಕಾಲವಾದ ನಂತರ ನಾನು ಜಗತ್ತಿನಾದ್ಯಂತ ಸೈಕಲ್ ಮೂಲಕ ಸವಾರಿ ಪ್ರಾರಂಭಿಸಿದ್ದು, ಅಪ್ಪು ಅವರ ಒಳ್ಳೆಯ ಗುಣಗಳನ್ನು ಎಲ್ಲೆಡೆ ಪಸರಿಸುತ್ತ ಪ್ರತೀ ತಾಲೂಕಿನಲ್ಲೊಂದು ಅವರ ಹೆಸರಿನಲ್ಲಿ ಸಸಿ ನೆಡುತ್ತಾ ಸವಾರಿ ನಡೆಸಿದ್ದೇನೆ. ಈಗಾಗಲೇ ೩ಲಕ್ಷ ೫೧ಸಾವಿರ ಸಸಿಗಳನ್ನು ನೆಟ್ಟಿದ್ದು ಒಟ್ಟು ೫ಲಕ್ಷ ಸಸಿ ನೆಡುವ ಯೋಜನೆ ಹಾಕಿಕೊಂಡಿದ್ದೇನೆ. ತಮಿಳುನಾಡಿನಿಂದ ಶುರುವಾದ ನನ್ನ ಸೈಕಲ್ ಸವಾರಿ ಲಡಾಕ್, ಜಮ್ಮು, ಗೋವಾ, ರಾಜಸ್ಥಾನ ರಾಜ್ಯಗಳಲ್ಲಿ ಪ್ರವಾಸ ಮುಗಿಸಿ ಸಧ್ಯ ಕರ್ನಾಟಕಕ್ಕೆ ಬಂದಿದ್ದು, ಮುಂದೆ ಪಾಂಡಿಚೇರಿ, ನೇಪಾಳ, ಬಾಂಗ್ಲಾದೇಶ ಮಾರ್ಗವಾಗಿ ೨೦೨೫ ರ ಹೊತ್ತಿಗೆ ದೆಹೆಲಿಗೆ ಬಂದು ೨೦೨೫ ರ ಜ೧೫ ರಂದು ಅಪ್ಪು ಸಮಾಧಿಯಲ್ಲಿ ಬಾವುಟವನ್ನು ಇಳಿಸಿ ನನ್ನ ಪ್ರವಾಸವನ್ನು ಅಂತ್ಯಗೊಳಿಸುತ್ತೇನೆ. ಯಾವುದೇ ಗೇರ್ ಇಲ್ಲದ ಸಾಧಾರಣ ಸೈಕಲ್ ಇದಾಗಿದ್ದು ನನ್ನ ಹಾಸಿಗೆ, ಹೊದಿಕೆ, ಗ್ಯಾಸ್, ಒಲೆ, ಬಟ್ಟೆ ಸೇರಿ ಒಟ್ಟು ೧೨೨ ಕೆಜಿ ಭಾರ ಹೊಂದಿದೆ. ನನ್ನ ಅಡುಗೆಯನ್ನ ನಾನೇ ತಯಾರಿ ಮಾಡಿಕೊಳ್ಳುತ್ತೇನೆ. ಮಲಗೋದು ಪೆಟ್ರೋಲ್ ಪಂಪ್‌ಗಳಲ್ಲಿ ಸಾರ್ವಜನಿಕರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದು ನನಗೆ ಇನ್ನಷ್ಟು ಪ್ರೋತ್ಸಾಹ ದೊರತಂತಾಗಿದೆ ಎಂದು ವಿವರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

