ಮುದ್ದೇಬಿಹಾಳ: ಪಟ್ಟಣದ ಸೇರಿದಂತೆ ತಾಲೂಕಿನ ಕೆಲವೆಡೆ ಗುರುವಾರ ಗಾಳಿ, ಗುಡುಗು, ಸಿಡಿಲು ಮತ್ತು ಭಾರಿ ಮಳೆಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ತಾಲೂಕಿನ ಅಡವಿ ಹುಲಗಬಾಳ ಗ್ರಾಮದ ಹಣಮಂತ್ರಾಯ ಕಂಬಾರ ಅವರಿಗೆ ಸೇರಿದ ಎತ್ತು, ಗೋನಾಳ ಎಸ್.ಎಚ್ ಗ್ರಾಮದಲ್ಲಿ ಬಸವರಾಜ ಪಾಟೀಲರಿಗೆ ಸೇರಿದ ಒಂದು ಆಕಳು ಇದೇ ಗ್ರಾಮದ ಬಸವರಾಜ ಉಪಲದಿನ್ನಿಯವರಿಗೆ ಸೇರಿದ ಒಂದು ಎತ್ತು, ಹಡಲಗೇರಿ ಗ್ರಾಮದಲ್ಲಿ ನಾಗಪ್ಪ ಹುರುಳಿಯವರಿಗೆ ಸೇರಿದ್ದ ಎಮ್ಮೆ ಸಿಡಿಲಿಗೆ ಬಲಿಯಾದರೆ, ತಾಲೂಕಿನ ಗೆದ್ದಲಮರಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಬೃಹದಾಕಾರದ ಬೇವಿನ ಮರವೊಂದು ನೆಲಕ್ಕುರುಳಿ ರಸ್ತೆಯನ್ನು ಆವರಿಸಿಕೊಂಡು ಸುಮಾರು ಹೊತ್ತು ವಾಹನ ಸವಾರರು ಪರದಾಡುವಂತಾಯಿತು.
ಪಟ್ಟಣದ ತಾಲೂಕು ಪಂಚಾಯತ ಕಾರ್ಯಾಲಯದ ಆವರಣದಲ್ಲಿ ನೀರು ನಿಂತು ಕೆಲಹೊತ್ತು ತೊಂದರೆಯನ್ನುಂಟು ಮಾಡಿತು. ಕೆಲ ಅಂಗಡಿಗಳೊಳಗೆ ಮಳೆ ನೀರು ಹೊಕ್ಕಿದ್ದವು. ಆ ನೀರನ್ನು ಹೊರಚೆಲ್ಲಲು ಅಂಗಡಿಕಾರರು ಹೆಣಗಾಡಿದ ಸಂದರ್ಭಗಳು ಕಂಡುಬಂದವು. ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಬೃಹತ್ ಮರವೊಂದು ನಿಲ್ದಾಣದ ಫುಟ್ ಪಾತ್ ಮೇಲಿನ ಹೂ ಮತ್ತು ಹಣ್ಣಿನ ಅಂಗಡಿಗಳ ಮೇಲೆ ಬಿದ್ದು ನೆಲಕ್ಕುರುಳಿದ್ದು ಅಂಗಡಿಕಾರರು ಮಳೆ ನೀರಿನಿಂದ ರಕ್ಷಣೆಗಾಗಿ ಬಸ್ ನಿಲ್ದಾಣದ ಒಳಗೆ ನಿಂತಿರುವ ಭಾರಿ ಅನಾಹುತದಿಂದ ಪಾರಾಗಿದ್ದು, ಸುಮಾರು ನಾಲ್ಕೈದು ತಾಸು ರಸ್ತೆಯ ಒಂದು ಬದಿ ಸಂಚಾರ ಸ್ಥಗಿತಗೊಂಡಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

