ಸಿಂದಗಿ: ಪ್ರಸಕ್ತ ಸಾಲಿನಿಂದ ಪಟ್ಟಣದ ಸಾರಂಗಮಠದ ಶ್ರೀ ಪದ್ಮರಾಜ ಫ್ರೀ ಬೋರ್ಡಿಂಗ್‌ನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಒದಗಿಸಲಾಗುವುದು. ಗ್ರಾಮೀಣ ಭಾಗದ ೫,೬,೭ ಹಾಗೂ ೮ನೆಯ ತರಗತಿಯ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅವಕಾಶಗಳನ್ನು ಕಾಯ್ದಿರಿಸಲಾಗಿದೆ. ಸಿಬಿಎಸ್‌ಸಿ ಮತ್ತು ರಾಜ್ಯ ಪಠ್ಯಕ್ರಮದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶ. ಗ್ರಾಮೀಣ ಭಾಗದ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯಲು ಸಮಸ್ಯೆಯಿರುವ ಕಾರಣ ಅವರಿಗೆ ಉಚಿತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಶ್ರೀ ಸಾರಂಗಮಠದ ಫ್ರೀ ಬೋರ್ಡಿಂಗ್ ಸಾರಂಗಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವ್ಯವಸ್ಥೆ ಕಡ್ಡಾಯವಾಗಿ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರಿಗೆ ಮಾತ್ರವಿರುತ್ತದೆ. ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಪರೀಕ್ಷೆ ಬರೆಯುವುದು ಕಡ್ಡಾವಾಗಿದೆ. ಪರೀಕ್ಷೆಯು ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ವಿಯಜಪುರ ರಸ್ತೆಯ ಕಾಲೇಜು ಕ್ಯಾಂಪಸ್‌ನಲ್ಲಿ ಜೂ.೦೯ರಂದು ಬೆಳಿಗ್ಗೆ ೧೧ಗಂಟೆಗೆ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ ಇಚ್ಚೆಯುಳ್ಳವರು ಡಾ.ಶರಣಬಸವ ಜೋಗುರ, ಚನ್ನಬಸವ ಕತ್ತಿ, ವೀರೇಶ ಜೋಗುರ ೯೮೪೫೩೩೩೦೯೩/೯೯೪೫೯೫೨೫೯೯/೯೪೮೩೩೭೬೯೮೪ ಸಂಪರ್ಕಿಸಿ ಮೇಲಿನ ನಂಬರ್‌ಗಳ ವ್ಯಾಟ್ಸ್ಪ್ ಮೂಲಕ ಅರ್ಜಿ ನಮೂನೆ ಪಡೆಯಬೇಕು ಮತ್ತು ಅರ್ಜಿ ಸಲ್ಲಿಸಲು ಜೂ.೦೬ ಕೊನೆಯ ದಿನಾಂಕವಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
