ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ & ಕರ್ನಾಟಕ ಛಾಯಾಗ್ರಾಹಕರ ಸಂಘದ ಸಹಯೋಗದಲ್ಲಿ ಸೋನಿ ಅಲ್ಫಾ ಛಾಯಾಗ್ರಹಣ ಕಾರ್ಯಗಾರ
ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಕರ್ನಾಟಕ ಛಾಯಾಗ್ರಾಹಕರ ಸಂಘದ ಸಹಯೋಗದಲ್ಲಿ ನಗರದ ಫರ್ನ ಹೋಟೆಲ್ ಸಭಾಂಗಣದಲ್ಲಿ ಸೋನಿ ಅಲ್ಫಾ ಛಾಯಾಗ್ರಹಣ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು
ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಮೇಶ ಬಿದನೂರ, ಆಧುನಿಕ ತಂತ್ರಜ್ಞಾನದೊಂದಿಗೆ ಇವತ್ತಿನ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಆಧುನಿಕ ಜಗತ್ತಿನ ಎಲ್ಲಾ ನೋವು-ನಲಿವುಗಳ ಜೊತೆಯಲ್ಲಿ ಐತಿಹಾಸಿಕ ದಾಖಲೀಕರಣ ಮಾಡುವವರು ಛಾಯಾಗ್ರಾಹಕರು. ಜಗತ್ತಿನಲ್ಲಿ ಎಷ್ಟೇ ಪ್ರಭಾವಶಾಲಿಯಾದ ವ್ಯಕ್ತಿಯನ್ನು ಸ್ಮಾಯಿಲ್ ಪ್ಲೀಸ್ ಅನ್ನುವ ಹಕ್ಕು ಇರುವುದು ಮಾತ್ರ ಛಾಯಾಗ್ರಾಹಕರಿಗೆ. ಅಂತಹ ವೃತ್ತಿ ಇವತ್ತು ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದಿದೆ. ಸಮಾಜದಲ್ಲಿ ಯಾವುದೆ ವೃತ್ತಿಯಿಂದ ಜನ ನನ್ನನ್ನು ಗುರುತಿಸುತಿದ್ದರೂ ನಾನು ಮೂಲತ: ಇದೆ ಛಾಯಾಗ್ರಾಹಕ ವೃತ್ತಿಯಿಂದನೆ ಬೆಳೆದದ್ದು. ಛಾಯಾಗ್ರಾಹಕರಿಗೆ ಕಲಾವಿದರಿಗೆ ನಾವು ಗೌರವಿಸಬೇಕು ಎಂದು ತಮ್ಮ ಉದ್ಘಾಟನಾಪರ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಸೋನಿ ಕಂಪನಿಯ ಹಿರಿಯ ಮಾರಾಟಗಾರರಾದ ನಿತೀನಕುಮಾರ ಮಾತನಾಡುತ್ತಾ, ರಾಜ್ಯದಲ್ಲಿ ಛಾಯಾಗ್ರಾಹಕರ ಬೆಳವಣಿಗೆಗೆ ಕಂಪನಿಯಿಂದ ಹಲವಾರು ಉಪಯುಕ್ತವಾದ ಮಾಹಿತಿಯ ಜೊತೆಗೆ ಅವಶ್ಯಕ ಕಾರ್ಯಗಾರ ಹಮ್ಮಿಕೊಳ್ಳಲಾಗುತಿದ್ದು ಇದಕ್ಕೆ ವಿಜಯಪುರ ಛಾಯಾಗ್ರಾಹಕರು ಅತ್ಯಂತ ಹರ್ಷದಿಂದ ಇಲ್ಲಿ ಭಾಗವಹಿಸಿದ್ದಾರೆ. ಇದಕ್ಕೆ ಸಹಕರಿಸಿದ ಸಂಘದ ಎಲ್ಲ ಪದಾಧಿಕಾರಿಗಳಿಗೆ ಕಂಪನಿಯ ಪರವಾಗಿ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸ್ಕ್ವೆಯರ್ ಕಲರ್ ಲ್ಯಾಬನ ಮುರಾರಿ ಕರ್ವಾ, ಸೋನಿ ಕಂಪನಿಯ ಹಿರಿಯ ಮಾರಾಟ ವ್ಯವಸ್ಥಾಪಕ ನಿತೀನ ಕುಮಾರ, ಹಿರಿಯ ವಿತರಕ ವಸಂತ ಕುಮಾರ, ಉಪಸ್ಥಿತರಿದ್ದರು.
ಉದ್ಘಾಟನೆ ಕಾರ್ಯಕ್ರಮದ ನಂತರ ಸೋನಿ ಕಂಪನಿಯ ಮೆಂಟರಾದ ಮುಸ್ತಫಾ ಬಾಷಾ ಇವರಿಂದ ನೂತನ ಕ್ಯಾಮರಾ ಮಾಡೆಲ್‌ಗಳು ಮತ್ತು ಕ್ಯಾಮೆರಾ ಟೆಕ್ನಿಕ್‌ಗಳ ಬಗ್ಗೆ ಕಾರ್ಯಗಾರ ನಡೆಯಿತು.
ಸಂಘದ ಕಾರ್ಯದರ್ಶಿ ಸತೀಶ್ ಕಲಾಲ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಹಕರ ಸಂಘದ ಪದಾಧೀಕಾರಿಗಳಾದ ಸುರೇಶ್ ರಾಠೋಡ್, ರಾಜುಸಿಂಗ್ ರಜಪೂತ್, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ್ ಪಾರ್ವತಿ, ಪವನ ಅಂಗಡಿ, ಮಹೇಶ್ ಕುಂಬಾರ್, ಛಾಯಾಗ್ರಾಹಕರಾದ ವಝೀರಭಾಷಾ ಮುಜಾವರ, ಮೌನೇಶ್ ಬಡಿಗೇರ್, ಸಂಗಯ್ಯ ಮಠಪತಿ, ಬಿ.ಎಸ್. ಪಾಟೀಲ, ಬಾಳು ಕಲಾಲ, ಪ್ರಮೋದ್ ಕಾಜಗಾರ್, ಸುರೇಶ್ ಗುಲ್ಪಿ, ವಿಠ್ಠಲ್ ಗುಜ್ಜರ, ಕೀಶೋರ ಖಂಡಾಗಳೆ, ನಾಗಯ್ಯಾ ಗಣಾಚಾರಿ, ಸಂಗನಗೌಡ ಬಿರಾದಾರ ಗೌಡಪ್ಪಗೌಡ ಬೀರಾದಾರ, ಅನಂತ ಭೋಸಲೆ ಸಹಿತ ೧೦೦ ಜನ ಕ್ಕೂ ಹೆಚ್ಚು ಛಾಯಾಗ್ರಾಹಕರು ಭಾಗವಹಿಸಿ ಕಾರ್ಯಾಗಾರ ಯಶಸ್ವಿಗೊಳಿಸಿದರು.

