Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ನಮ್ಮ ಮಕ್ಕಳನ್ನು ಬಂಡವಾಳದ ಮಕ್ಕಳನ್ನಾಗಿ ಬೆಳೆಸದೇ ಸಮಾಜದ ಮಕ್ಕಳಾಗಿ, ಒಳ್ಳೆಯ ಸಂಸ್ಕಾರಯುತ ಮಕ್ಕಳಾಗಿ ಬೆಳೆಸಬೇಕು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಾಹಾಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಶಾಂತೇಶ್ವರ ಶಿಕ್ಷಣ ಸಂಸ್ಥೆಯ ಶಾರದಾ ವಿದ್ಯಾಮಂದಿರದ ಆವರಣದಲ್ಲಿ ಬುಧವಾರ ಸಂಜೆ ದಿ.ಭೋಜರಾಜ ಬಿರಾದಾರ ಇವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಸಮಾಜದಲ್ಲಿ ಎಲ್ಲರೂ ತಮ್ಮ ಮಕ್ಕಳನ್ನು ದೇಶದ ಉಜ್ವಲ ಭವಿಷ್ಯ ರೂಪಿಸುವ ಪ್ರತಿಭಾನ್ವಿತ ವಿದ್ಯಾರ್ಥಿಯಾಗಬೇಕು ಎಂದು ಯೋಚಿಸುತ್ತಿಲ್ಲ, ಬಂಡವಾಳದ ಮಕ್ಕಳಾಗಿ ಬೆಳೆಸುವ ಪ್ರಯತ್ನ ನಡೆದಿದೆ. ಹಾಗಾಗಿ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಕಾಡುತ್ತಿದೆ. ನಮ್ಮ ಮಕ್ಕಳು ಡಾಕ್ಟರ್, ಇಂಜಿನೀಯರ ಆಗದೇ ಇದ್ದರೂ ಪರವಾಗಿಲ್ಲ ದೇಶಕ್ಕೆ ಮಾರಕವಾಗವಾರದು ಎಂದರು.ಹುನಗುಂದ ಮತಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಜೀವಂತವಾಗಿದ್ದಾಗ ತಮ್ಮ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳನ್ನು ಇಂದಿನ ಸಮಾಜದಲ್ಲಿ ನಾವು ಕಾಣುತ್ತೇವೆ. ದಿವಂಗತರ ಸ್ಮರಣಾರ್ಥ ಪ್ರತಿಭಾನ್ವಿತರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಪುಣ್ಯಸ್ಮರಣೆ ಆಚರಿಸುತ್ತಿರೋದು ಶ್ಲಾಘನೀಯ ಎಂದರು.ಕುಂಟೋಜಿ…
ವಿಜಯಪುರ: ಬಿತ್ತನೆ ಬೀಜಗಳ ದರ ಕಡಿಮೆ ಮಾಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ (ರಿ) ಜಿಲ್ಲಾ ಘಟಕದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕೆ. ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಹಿಂದೆದೂ ಕಂಡರಿಯದಂತ ಭೀಕರ ಬರಗಾಲ ಆವರಿಸಿ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಹಾಳಾಗಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹದರ ಮಧ್ಯ ಸರ್ಕಾರ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ. ರಾಜ್ಯ ಸರ್ಕಾರ ಜನ ವಿರೋಧಿ ಹಾಗೂ ರೈತ ವಿರೋಧಿ ಅನುಪಯುಕ್ತ ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡುತ್ತಿಲ್ಲ. ಈಗ ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಿದ್ದ ರೈತರಿಗೆ ಬಿತ್ತನೆ ಬೀಜದ ದರ ಹೆಚ್ಚಿಸುವ ಮೂಲಕ ರೈತರಿಗೆ ಮತ್ತಷ್ಟು ಸಾಲದ ಬರೆ ಹಾಕಲು ಮುಂದಾಗಿದೆ. ಕಳೆದ ವರ್ಷ ಐದು ಕೆ.ಜಿ. ತೊಗರಿ ಬೀಜಕ್ಕೆ ೫೨೫ ರೂ.ಗಳವರೆಗೆ ಇದ್ದ ದರವನ್ನು ೭೭೦…
೧೧ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ | ಯುವ ಘರ್ಜನೆ ರಾಜ್ಯಾಧ್ಯಕ್ಷ ಖಂಡೇಕರ ಎಚ್ಚರಿಕೆ ವಿಜಯಪುರ: ನಗರದ ಮನಗೂಳಿ ಅಗಸಿ ಹತ್ತಿರದ ಡಾ. ಬಿ.ಆರ್. ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ ೧೦ ದಿನ ಪೂರೈಸಿದೆ.ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ ಕರ್ನಾಟಕ ಯುವ ಘರ್ಜನೆ ರಾಜ್ಯಾಧ್ಯಕ್ಷ ಬಸವರಾಜ ಖಂಡೇಕರ ಮಾತನಾಡಿ, ಅಂಬೇಡ್ಕರ ಭವನ ಸಮಸ್ಯೆ ಇತ್ಯರ್ಥಪಡಿಸುವಂತೆ ಒತ್ತಾಯಿಸಿ ಇಲ್ಲಿಯವರೆಗೆ ನಿರಂತರ ೧೦ ದಿನಗಳ ವರೆಗೆ ಧರಣಿ ನಡೆಸುತ್ತಿರುವ ಹೋರಾಟಗಾರರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಬೇಕು. ಇಲ್ಲವಾದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಬೇಕಾಗುತ್ತದೆ. ಡಾ. ಬಾಬಾಸಾಹೇಬರು ದೇಶದ ಅತ್ಯುನ್ನತವಾದ ಸಂವಿಧಾನವನ್ನು ಭಾರತಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಸಂವಿಧಾನದ ಅಡಿಯಲ್ಲಿ ನಾವೆಲ್ಲರು ಸುರಕ್ಷಿತವಾಗಿದೆ. ಅಂತಹ ಮಹಾತ್ಮರ ಹೆಸರಿನಲ್ಲಿ ನಿರ್ಮಾಣಮಾಡುತ್ತಿರುವ ಭವನಕ್ಕೆ ಅಡ್ಡಿಪಡಿಸುತ್ತಿರುವುದು ದುರಂತದ ಸಂಗತಿ ಎಂದರು.ದಲಿತರಿಗೆ ನ್ಯಾಯ ಒದಗಿಸಲು ಜಿಲ್ಲಾಧಿಕಾರಿಗಳು…
ಚಿಮ್ಮಡ: ವಿಶ್ವ ಆರೋಗ್ಯ ಸಂಸ್ಥೆಯವರ ಮಾರ್ಗದರ್ಶನದಲ್ಲಿ ಕಾಲಕಾಲಕ್ಕೆ ಆಚರಿಸಲಾಗುವ ಮಲೇರಿಯಾ, ಡೆಂಗ್ಯೂ, ದಿನಾಚರಣೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ ಎಂದು ತಾಲೂಕಾ ವ್ಹಿಬಿಡಿ ಮೇಲ್ವಿಚಾರಕ ನರಸಿಂಹ ಗಲಗಲಿ ಹೇಳಿದರು.ಸ್ಥಳಿಯ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅವರು ಮಳೆಗಾಲದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿರುತ್ತದೆ ಅದರಿಂದ ಡೆಂಗ್ಯೂ, ಮಲೇರಿಯ, ಚಿಕುನ್‌ಗುನ್ಯಾ, ಮೆದುಳು ಜ್ವರ, ಆನೆಕಾಲಿನರೋಗ ಸೇರಿದಂತೆ ಹಲವು ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ ಅದಕ್ಕೆ ಗಲೀಜು ನೀರು ಸಂಗ್ರಹವಾಗಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಮನೆ, ಅಂಗಳಗಳನ್ನು ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು ಎಂದರು.ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ; ಕೆ.ಎಸ್. ತಳ್ಳಿ ಮಾತನಾಡಿ ಖಾಯಿಲೆ ಬಂದಮೇಲೆ ಚಿಕಿತ್ಸೆಗೆ ಪರದಾಡುವುದಕ್ಕಿಂತ ಖಾಯಿಲೆ ಬಾರದಂತೆ ಮುನ್ಯಚ್ಚರಿಕೆ ವಹಿಸುವುದೇ ಜಾಣ ನಡೆಯಾಗಿದೆ ಎಂದರು.ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ಬಿ.ಸಣ್ಣಕ್ಕಿ, ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಭಾಗ್ಯವಂತ ಪಿಎಚ್‌ಸಿ ಮೇಲ್ವಿಚಾರಕ ಜಿ.ಎಸ್. ಮುಸಳಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಮಾಲಾ ಅಶೋಕ…
ಆಲಮೇಲ: ಯೋಗ ಪ್ರಾಣಾಯಂ ಜ್ಞಾನ ಪ್ರತಿಯೊಬ್ಬರಿಗೂ ಅವಶ್ಯಕತೆ ಇದ್ದು ಮನೆ ಮನೆ ಅಂಗಳದಲ್ಲಿ ಯೋಗಮಯವಾಗಬೇಕಾಗಿದೆ ಎಂದು ಯೋಗೋತ್ಸವ ಸಮಿತಿಯ ಮುಖಂಡ ಡಾ.ಶ್ರೀಶೈಲ ಪಾಟೀಲ ಹೇಳಿದರು.ಪಟ್ಟಣದ ಯೋಗೋತ್ಸವ ಸಮಿತಿ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ ಉಚಿತ ಯೋಗ ಶಿಬಿರದ ಪೂರ್ವ ಭಾವಿ ಸಭೆ ಉದ್ದೇಶಿಸಿ ಮಾತನಾಡುತ್ತ ಹೇಳಿದರು.ಮನುಷ್ಯನ ಆರೋಗ್ಯ ದೃಷ್ಠಿಯಿಂದ ಪ್ರತಿಯೊಬ್ಬರಿಗೂ ಯೋಗ ಪ್ರಾಣಾಯಂ ಅವಶಕತೆ ಇದ್ದು, ಇಂದಿನ ಯುವ ಜನ ದುಶ್ಚಟಗಳಿಗೆ ಅಂಟಿಕೊಳ್ಳುತ್ತಿದ್ದು ಅದರಿಂದ ದೂರ ಮಾಡಬೇಕು ಎಂದರೆ ಪ್ರತಿನಿತ್ಯ ಯೋಗ ಪ್ರಾಣಾಯಾಂ, ಆದ್ಯತ್ಮಿಕ ಚಿಂತನೆಗಳು ಅವಶಕತೆ ಇದೆ ಅದಕ್ಕೆ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾಗಿದೆ. ಯೋಗದ ಬಗ್ಗೆ ಇಂದಿನ ಯುವಜನಕ್ಕೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಅದಕ್ಕಾಗಿ ಯೋಗೋತ್ಸವ ಸಮಿತಿಯಿಂದ ವಿವಿದ ಸಂಘ ಸಂಸ್ಥೆ, ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ಪಟ್ಟಣದಲ್ಲಿ ಪ್ರಬಾತಪೇರೆ ಮಾಡಲಾಗುವದು ಮತ್ತು ದ್ವನಿ ವರ್ಧಕದ ಮೂಲಕವು ಆಲಮೇಲ ಪಟ್ಟಣ ಸೇರಿದಂತೆ ಸೂತ್ತಮೂತ್ತಲಿನ ಹಳ್ಳಿಗಳಿಗೂ ಪ್ರಚಾರ ಮಾಡಲಾಗುತ್ತೆ. ಯುವಜನತೆಯಿಂದ ವಯೋವೃದ್ದದವರು ಈ ಯೋಗ ಶಿಬಿರದಲ್ಲಿ…
ತಾಳಿಕೋಟಿ: ರೈತ ಸಂಪರ್ಕ ಕೇಂದ್ರದಲ್ಲಿ ಸನ್ 2024- 25 ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣಾ ಕಾರ್ಯಕ್ರಮಕ್ಕೆ ಕೃಷಿ ಅಧಿಕಾರಿ ಮಹೇಶ ಜೋಶಿ ಚಾಲನೆ ನೀಡಿದರು.ಬುಧವಾರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು ರೈತ ಸಂಪರ್ಕ ಕೇಂದ್ರದಲ್ಲಿ TS-BR. GRG-152 ತೊಗರಿ ಬೀಜ. ಹೆಸರು ಬೀಜ BGS-9 ರಿಯಾಯಿತಿ ದರದಲ್ಲಿ ಲಭ್ಯವಿದ್ದು ರೈತ ಬಾಂಧವರು ಇದರ ಸಂಪೂರ್ಣ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದ ಅವರು ಇದಕ್ಕಾಗಿ ರೈತರು ಕಡ್ಡಾಯವಾಗಿ ತಮ್ಮ ಆಧಾರ ಕಾರ್ಡ್. ಪಹಣಿ.ಎಫ್ಐಡಿ ಸಂಖ್ಯೆ ಹೊಂದಿರಬೇಕು. ರೈತರು ಬಿತ್ತನೆ ಬೀಜಕ್ಕೆ ಬೀಜೋಪಚಾರ ಮಾಡಬೇಕು ಪ್ರತಿ ಕೆಜಿ ಬಿಜಕ್ಕೆ 4 -5 ಗ್ರಾಂ.ಟೈರೋಡರಮಾ ಪೌಡರ ಹಚ್ಚಿ ಬೀಜೋಪಚಾರ ಮಾಡಬೇಕು ಎಂದು ತಿಳಿಸಿದರು.ಈ ಸಮಯದಲ್ಲಿ ಕೃಷಿ ಅಧಿಕಾರಿ ಎಂ.ಎಚ್.ಬೀಳಗಿ, ತಾಂತ್ರಿಕ ಅಧಿಕಾರಿ ಸಂಗಮೇಶ ಪಾಟೀಲ, ಅಕೌಂಟೆಡ್ ವಿನೋದ ನಾಯಕ, ಸಂಜೀವಿನಿ ಸಿಬ್ಬಂದಿಗಳಾದ ಕಿರಣ ಬೊಮ್ಮನಹಳ್ಳಿ, ಹನುಮಂತರಾಯ ಕುಂಟರೆಡ್ಡಿ, ಅನವುಗಾರರಾದ ಅಮರೇಶ ಅಂಗಡಿ, ರವಿ ಹೊಸಮನಿ,…
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಸಚಿವ ಡಾ.ಎಂ.ಬಿ. ಪಾಟೀಲ ಭರವಸೆ ವಿಜಯಪುರ: ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಭೂ ಹಗರಣ ಕುರಿತು ಸಿಓಡಿ ತನಿಖೆ ನಡೆಸಲು ಸರ್ಕಾರಕ್ಕೆ ನಾನು ಸಹ ಮನವಿ ಮಾಡಿಕೊಳ್ಳುವೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಭರವಸೆ ನೀಡಿದರು.ಭೂ ಹಗರಣದ ವಿರುದ್ದ ಸಮರ ಸಾರಿರುವ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಬೆಂಗಳೂರಿನಲ್ಲಿ ಸಚಿವ ಡಾ.ಎಂ.ಬಿ. ಪಾಟೀಲರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಭರವಸೆಯನ್ನು ಸಚಿವ ಪಾಟೀಲ ನೀಡಿದರು.ಭೂಗರಣಗಳ ಕುರಿತು ವಿವರಿಸಿದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಜಯಪುರ ನಗರದಲ್ಲಿ ನಕಲಿ ಭೂ-ದಾಖಲೆ ಸೃಷ್ಟಿ ಮಾಡಿ ಜನರನ್ನು ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡುತ್ತಿರುವ ಅನೇಕ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಬಡಜನರು ನಿತ್ಯ ಶೋಷಣೆಗೊಳಗಾಗುತ್ತಿದ್ದಾರೆ. ಜಮೀನು ಹಾಗೂ ನಿವೇಶನಗಳ ಖೊಟ್ಟಿ ದಾಖಲೆ ಸೃಷ್ಟಿ ಮಾಡಿ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಖರೀದಿ ಹಾಗೂ ಮಾರಾಟ ಮಾಡುವ ಕಾನೂನು ಬಾಹಿರ ಕೃತ್ಯಗಳು ಅವ್ಯಾಹತವಾಗಿ ನಡೆದಿವೆ ಎಂದರು. ಜನರನ್ನು ವಂಚಿಸುವ ವ್ಯವಸ್ಥಿತ ಜಾಲವೇ…
ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ೧೦ ತಿಂಗಳುಗಳ ಕಾಲ ತೋಟಗಾರಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿ ಯ ಕಾರಣದಿಂದ ತರಬೇತಿ ಅವಧಿಯನ್ನು ಜುಲೈ ೧ರಿಂದ ೨೦೨೫ ರ ಮಾರ್ಚ್ ೩೧ರವವರೆಗೆ ೯ ತಿಂಗಳು ಅವಧಿಕೆ ಪರಿಷ್ಕರಿಸಲಾಗಿದೆ.ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜೂನ್ ೬ ರಂದು ಸಂದರ್ಶನ ನಿಗದಿಪಡಿಸಲಾಗಿದೆ. ಜೂನ್ ೧೦ ರಂದು ಆಯ್ಕೆ ಪಟ್ಟಿ ಹಾಗೂ ಪ್ರವೇಶ ಪತ್ರ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಜೂನ್ ೧೫ ರಂದು ತರಬೇತಿಗೆ ಹಾಜರಾಗಲು ಸೂಚಿಸಲಾಗುವುದು.ವಿಜಯಪುರ ಜಿಲ್ಲೆಯಿಂದ ಒಟ್ಟು ೧೭ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಳಗಾವಿಯ ಹಿಡಕಲ್ ಡ್ಯಾಂ ತೋಟಗಾರಿಕೆ ಇಲಾಖೆಯಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಸರ್ಕಾರಿ ಸೌಲಭ್ಯಗಳು, ಬ್ಯಾಂಕ್ ಸೌಲಭ್ಯಗಳು, ಕೃಷಿ ಇಲಾಖೆ ಸೌಲಭ್ಯಗಳು ಮತ್ತು ಬೆಳೆ ಪರಿಹಾರಗಳನ್ನು ಪಡೆಯಲು ಜಮೀನಿನ ಪಹಣಿ ಪತ್ರಕ್ಕೆ ಆಧಾರ ಕಾರ್ಡ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪಹಣಿ ಪತ್ರಕ್ಕೆ ಆಧಾರ್ ಜೋಡಣೆ ಮಾಡಲು ಅನುಕೂಲವಾಗುವಂತೆ ಹೊಸದಾದ ತಂತ್ರಾಂಶವನ್ನು ಸಿದ್ಧಗೊಳಿಸಿದ್ದು, ಈ ಕಾರ್ಯವನ್ನು ಮಾಡಲು ಗ್ರಾಮ ಆಡಳಿತ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿರುತ್ತದೆ.ಸರಕಾರದ ವಿವಿಧ ಪ್ರಯೋಜನಗಳನ್ನು ಪಡೆಯಲು ಶಾಶ್ವತ ಪರಿಹಾರದ ಅಂಗವಾಗಿ ಜಮೀನಿನ ಪಹಣಿ ಪತ್ರಕ್ಕೆ ಆಧಾರ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ಗ್ರಾಮ್ ಒನ್ ಕೇಂದ್ರ, ಗ್ರಾಮ ಆಡಳಿತ ಕಚೇರಿ, ಅಥವಾ ಅಥವಾ ಆಧಾರ್ ಕಾರ್ಡ್ ಲಿಂಕ್ ಮಾಡಲು ಆಡಳಿತ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದಾಗ ಅವರಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಿಕೋಟಾ: ಜುಲೈ 31 ರಿಂದ ಶಾಲೆಗಳು ಪುನರಾರಂಭಗೊಳ್ಳುತ್ತಿದ್ದು ಶಿಕ್ಷಕರು ಕರ್ತವ್ಯ ಪ್ರಜ್ಞೆಯಿಂದ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಾ ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರಾಮಾಣಿಕವಾಗಿ ನ್ಯಾಯ ಕೊಡಬೇಕು ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ.ಮೊಸಲಗಿ ಹೇಳಿದರು.ಪಟ್ಟಣದ ಸರಕಾರಿ ಎಂಪಿಎಸ್ ಶಾಲೆಯಲ್ಲಿ ಗುರುವಾರ ನಡೆದ ಮುಖ್ಯಗುರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಕರು ಬೋಧನೆ ಮಾಡಿದ ನಂತರ ಮಕ್ಕಳಿಂದ ಎಷ್ಟು ಕಲಿಕಾ ಪ್ರತಿಫಲ ಬರುತ್ತದೆ ಎಂದು ಆತ್ಮವಲೋಕನ ಮಾಡಿಕೊಳ್ಳಬೇಕು. ಬೋಧನೆ ಯಶಸ್ವಿಯಾಗಬೇಕಾದರೆ ಮಕ್ಕಳ ಕಲಿಕೆಯ ಪ್ರತಿಫಲ ಖಾತ್ರಿಪಡಿಸಿಕೊಳ್ಳಬೇಕು.ಶೈಕ್ಷಣಿಕ ವರ್ಷದ ಆರಂಭೋತ್ಸವವು ಹಬ್ಬದ ವಾತಾವರಣದಂತೆ ಇದ್ದು, ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳಿಗೆ ಆಸಕ್ತಿದಾಯಕ ವಾತಾವರಣ ನಿರ್ಮಿಸಬೇಕು. ನಿರುಪಯುಕ್ತ ವಸ್ತುಗಳ ವಿಲೇವಾರಿ, ಶೌಚಾಲಯ ಮತ್ತು ವರ್ಗಕೋಣೆ ಸ್ವಚ್ಚತೆಯಿರಬೇಕು. ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ದಾಖಲಾತಿ ಮಾಡಬೇಕು. ಶಾಲೆಗಳಲ್ಲಿ ಸಿಗುವ ಸರ್ಕಾರಿ ಸೌಲಭ್ಯಗಳ ಕುರಿತು ಪಾಲಕರಿಗೆ ವಿವರಿಸಬೇಕು. ಅರ್ಹ ಮಕ್ಕಳ ದಾಖಲಾತಿ ಕಡ್ಡಾಯವಾಗಿ ಮಾಡಿಕೊಳ್ಳಬೇಕು. ದಾಖಲಾದ ಮಗು ನಿರಂತರವಾಗಿ ಶಾಲೆಗೆ ಹಾಜರಿರುವಂತೆ ಕ್ರಮ ವಹಿಸಬೇಕು.ಎಲ್ಲ ಮಕ್ಕಳಿಗೆ ಸ್ಪಷ್ಟ ಓದು, ಶುದ್ದ ಬರಹ,…
