ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ೧೦ ತಿಂಗಳುಗಳ ಕಾಲ ತೋಟಗಾರಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿ ಯ ಕಾರಣದಿಂದ ತರಬೇತಿ ಅವಧಿಯನ್ನು ಜುಲೈ ೧ರಿಂದ ೨೦೨೫ ರ ಮಾರ್ಚ್ ೩೧ರವವರೆಗೆ ೯ ತಿಂಗಳು ಅವಧಿಕೆ ಪರಿಷ್ಕರಿಸಲಾಗಿದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜೂನ್ ೬ ರಂದು ಸಂದರ್ಶನ ನಿಗದಿಪಡಿಸಲಾಗಿದೆ. ಜೂನ್ ೧೦ ರಂದು ಆಯ್ಕೆ ಪಟ್ಟಿ ಹಾಗೂ ಪ್ರವೇಶ ಪತ್ರ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಜೂನ್ ೧೫ ರಂದು ತರಬೇತಿಗೆ ಹಾಜರಾಗಲು ಸೂಚಿಸಲಾಗುವುದು.
ವಿಜಯಪುರ ಜಿಲ್ಲೆಯಿಂದ ಒಟ್ಟು ೧೭ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಳಗಾವಿಯ ಹಿಡಕಲ್ ಡ್ಯಾಂ ತೋಟಗಾರಿಕೆ ಇಲಾಖೆಯಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
