೧೧ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ | ಯುವ ಘರ್ಜನೆ ರಾಜ್ಯಾಧ್ಯಕ್ಷ ಖಂಡೇಕರ ಎಚ್ಚರಿಕೆ
ವಿಜಯಪುರ: ನಗರದ ಮನಗೂಳಿ ಅಗಸಿ ಹತ್ತಿರದ ಡಾ. ಬಿ.ಆರ್. ಅಂಬೇಡ್ಕರ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ ೧೦ ದಿನ ಪೂರೈಸಿದೆ.
ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ ಕರ್ನಾಟಕ ಯುವ ಘರ್ಜನೆ ರಾಜ್ಯಾಧ್ಯಕ್ಷ ಬಸವರಾಜ ಖಂಡೇಕರ ಮಾತನಾಡಿ, ಅಂಬೇಡ್ಕರ ಭವನ ಸಮಸ್ಯೆ ಇತ್ಯರ್ಥಪಡಿಸುವಂತೆ ಒತ್ತಾಯಿಸಿ ಇಲ್ಲಿಯವರೆಗೆ ನಿರಂತರ ೧೦ ದಿನಗಳ ವರೆಗೆ ಧರಣಿ ನಡೆಸುತ್ತಿರುವ ಹೋರಾಟಗಾರರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಬೇಕು. ಇಲ್ಲವಾದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಬೇಕಾಗುತ್ತದೆ. ಡಾ. ಬಾಬಾಸಾಹೇಬರು ದೇಶದ ಅತ್ಯುನ್ನತವಾದ ಸಂವಿಧಾನವನ್ನು ಭಾರತಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಸಂವಿಧಾನದ ಅಡಿಯಲ್ಲಿ ನಾವೆಲ್ಲರು ಸುರಕ್ಷಿತವಾಗಿದೆ. ಅಂತಹ ಮಹಾತ್ಮರ ಹೆಸರಿನಲ್ಲಿ ನಿರ್ಮಾಣಮಾಡುತ್ತಿರುವ ಭವನಕ್ಕೆ ಅಡ್ಡಿಪಡಿಸುತ್ತಿರುವುದು ದುರಂತದ ಸಂಗತಿ ಎಂದರು.
ದಲಿತರಿಗೆ ನ್ಯಾಯ ಒದಗಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಮುಂದಾಗಬೇಕೆಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಯುವ ಘರ್ಜನೆ ಸಂಘಟನೆಯ ಮಹೇಶ ವಠಾರ, ಗಣೇಶ ಉಪ್ಪಾರ, ಅನೀಲ ಚಲವಾದಿ ಹಾಗೂ ಸರೋಜಿನ ಕುಬಕಡ್ಡಿ, ಸುಧಾ ಚಲವಾದಿ, ಸರೋಜಿನ ಖತಿಜಾಪೂರ, ಆಶಾ ಮಾನೆ, ದುಂಡವ್ವ ಕಾಖಂಡಕಿ, ರೇಣುಕಾ ಬನಸೋಡೆ, ಶ್ರೀಶೈಲ ಕಾಖಂಡಕಿ, ಶ್ರೀದೇವಿ ವಾಲಿಕಾರ, ಮುದಕವ್ವ ವಾಲಿಕಾರ, ಮೀನಾಕ್ಷಿ ಕಾಖಂಡಕಿ, ರುಕ್ಮೀಣಿ ಕಾಖಂಡಕಿ, ಪಮ್ಮಕ್ಕ ವಾಲಿಕಾರ, ಮಾದೇವಿ ಕಾಖಂಡಕಿ, ಮಂಜುನಾಥ ಶಿವಶರಣ, ಮಲ್ಲಿಕಾರ್ಜುನ ಸಾವಳಗಿ, ಸಚೀನ ಕಾಖಂಡಕಿ, ಶಂಕರ ಕಾಖಂಡಕಿ, ರಾಮು ವಾಲೀಕಾರ, ಕೀರ್ತಿ ಕುಮಾರ ಕಾಖಂಡಕಿ, ಬಸವಕುಮಾರ ಕಾಂಬಳೆ, ಕೃಷ್ಣಾ ಚಲವಾದಿ, ಸತೀಶ ಕಾಖಂಡಕಿ, ಪ್ರತಾಪ ಚಿಕ್ಕಲಕಿ, ರಾಜು ವಾಲಿಕಾರ, ಸಂತೋಷ ಕಾಂಬಳೆ, ಚಂದ್ರಶೇಖರ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

