ಆಲಮೇಲ: ಯೋಗ ಪ್ರಾಣಾಯಂ ಜ್ಞಾನ ಪ್ರತಿಯೊಬ್ಬರಿಗೂ ಅವಶ್ಯಕತೆ ಇದ್ದು ಮನೆ ಮನೆ ಅಂಗಳದಲ್ಲಿ ಯೋಗಮಯವಾಗಬೇಕಾಗಿದೆ ಎಂದು ಯೋಗೋತ್ಸವ ಸಮಿತಿಯ ಮುಖಂಡ ಡಾ.ಶ್ರೀಶೈಲ ಪಾಟೀಲ ಹೇಳಿದರು.
ಪಟ್ಟಣದ ಯೋಗೋತ್ಸವ ಸಮಿತಿ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ ಉಚಿತ ಯೋಗ ಶಿಬಿರದ ಪೂರ್ವ ಭಾವಿ ಸಭೆ ಉದ್ದೇಶಿಸಿ ಮಾತನಾಡುತ್ತ ಹೇಳಿದರು.
ಮನುಷ್ಯನ ಆರೋಗ್ಯ ದೃಷ್ಠಿಯಿಂದ ಪ್ರತಿಯೊಬ್ಬರಿಗೂ ಯೋಗ ಪ್ರಾಣಾಯಂ ಅವಶಕತೆ ಇದ್ದು, ಇಂದಿನ ಯುವ ಜನ ದುಶ್ಚಟಗಳಿಗೆ ಅಂಟಿಕೊಳ್ಳುತ್ತಿದ್ದು ಅದರಿಂದ ದೂರ ಮಾಡಬೇಕು ಎಂದರೆ ಪ್ರತಿನಿತ್ಯ ಯೋಗ ಪ್ರಾಣಾಯಾಂ, ಆದ್ಯತ್ಮಿಕ ಚಿಂತನೆಗಳು ಅವಶಕತೆ ಇದೆ ಅದಕ್ಕೆ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾಗಿದೆ. ಯೋಗದ ಬಗ್ಗೆ ಇಂದಿನ ಯುವಜನಕ್ಕೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಅದಕ್ಕಾಗಿ ಯೋಗೋತ್ಸವ ಸಮಿತಿಯಿಂದ ವಿವಿದ ಸಂಘ ಸಂಸ್ಥೆ, ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ಪಟ್ಟಣದಲ್ಲಿ ಪ್ರಬಾತಪೇರೆ ಮಾಡಲಾಗುವದು ಮತ್ತು ದ್ವನಿ ವರ್ಧಕದ ಮೂಲಕವು ಆಲಮೇಲ ಪಟ್ಟಣ ಸೇರಿದಂತೆ ಸೂತ್ತಮೂತ್ತಲಿನ ಹಳ್ಳಿಗಳಿಗೂ ಪ್ರಚಾರ ಮಾಡಲಾಗುತ್ತೆ. ಯುವಜನತೆಯಿಂದ ವಯೋವೃದ್ದದವರು ಈ ಯೋಗ ಶಿಬಿರದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಈ ವರ್ಷದ ೧೦ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಆಲಮೇಲ ಪಟ್ಟಣದ ಸಿಂದಗಿ ರಸ್ತೆಯ ಯುಕೆಪಿ ಕ್ಯಾಂಪಿನಲ್ಲಿ ೨೧ ದಿನಗಳ ಕಾಲ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜೂನ್ ೨ ರಂದು ಪ್ರಾರಂಭಗಳ್ಳೊಲಿದೆ ಪ್ರತಿನಿತ್ಯ ಬೆಳಗ್ಗೆ ೫:೩೦ ರಿಂದ ೬:೩೦ರ ವರೆಗೆ ಯೋಗೋತ್ಸವ, ಸಾಯಂಕಾಲ ೭ ಗಂಟೆಯಿಂದ ೮ ಗಂಟೆವರೆಗೆ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ.
ಈ ಕಾರ್ಯಕ್ರಮವನ್ನು ಹಿಮಾಲಯದ ಯೋಗ ಸಾಧನೆ ಮಾಡಿರುವ ಯೋಗ ಗುರು ನಿರಂಜನ ಶ್ರೀಗಳು ನಡೆಸಿಕೊಡಲಿದ್ದಾರೆ. ನಿರಂಜನ ಪೂಜ್ಯರಿಂದಲೆ ನಿರಂತರವಾಗಿ ಮೂರನೇ ವರ್ಷ ಯೋಗೋತ್ಸವ ನಡೆಯಲಿದೆ. ಆಲಮೇಲ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಪೂರ್ವಬಾವಿ ಸಭೆಯಲ್ಲಿ ಡಾ| ಸಂದೀಪ ಪಾಟೀಲ, ನಿವೃತ ಪ್ರಾಚಾಯ್ ಎನ್.ಎ. ಬಿರಾದಾರ. ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಶ್ರೀಶೈಲ ಮಠಪತಿ, ಡಾ| ಚನ್ನಬಸು ನಿಂಬಾಳ, ಶೇಷಾದ್ರಿ ಜೋಶಿ, ಅಶೋಕ ಕೊಳಾರಿ, ಅಶೋಕ ಸದ್ಲಾಪೂರ, ಸಂತೋಷ ಅಮರಗೊಂಡ, ಸಿದ್ದಪ್ಪ ಉಪ್ಪಿನ, ಬಸವರಾಜ ಕಾಳಶೆಟ್ಟಿ, ಸುನಿಲ ನಾರಯಣಕರ, ಬಾಬುಗೌಡ ಬಿರಾದಾರ, ಬಸುಗೌಡ ಪಾಟೀಲ, ಈರಣ್ಣ ಕಲಶೆಟ್ಟಿ, ರಾಜೇಂದ್ರ ರಾಠೋಡ ಮುಂತಾದವರು ಇದ್ದರು.

