ತಾಳಿಕೋಟಿ: ರೈತ ಸಂಪರ್ಕ ಕೇಂದ್ರದಲ್ಲಿ ಸನ್ 2024- 25 ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣಾ ಕಾರ್ಯಕ್ರಮಕ್ಕೆ ಕೃಷಿ ಅಧಿಕಾರಿ ಮಹೇಶ ಜೋಶಿ ಚಾಲನೆ ನೀಡಿದರು.
ಬುಧವಾರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು ರೈತ ಸಂಪರ್ಕ ಕೇಂದ್ರದಲ್ಲಿ TS-BR. GRG-152 ತೊಗರಿ ಬೀಜ. ಹೆಸರು ಬೀಜ BGS-9 ರಿಯಾಯಿತಿ ದರದಲ್ಲಿ ಲಭ್ಯವಿದ್ದು ರೈತ ಬಾಂಧವರು ಇದರ ಸಂಪೂರ್ಣ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದ ಅವರು ಇದಕ್ಕಾಗಿ ರೈತರು ಕಡ್ಡಾಯವಾಗಿ ತಮ್ಮ ಆಧಾರ ಕಾರ್ಡ್. ಪಹಣಿ.ಎಫ್ಐಡಿ ಸಂಖ್ಯೆ ಹೊಂದಿರಬೇಕು. ರೈತರು ಬಿತ್ತನೆ ಬೀಜಕ್ಕೆ ಬೀಜೋಪಚಾರ ಮಾಡಬೇಕು ಪ್ರತಿ ಕೆಜಿ ಬಿಜಕ್ಕೆ 4 -5 ಗ್ರಾಂ.ಟೈರೋಡರಮಾ ಪೌಡರ ಹಚ್ಚಿ ಬೀಜೋಪಚಾರ ಮಾಡಬೇಕು ಎಂದು ತಿಳಿಸಿದರು.
ಈ ಸಮಯದಲ್ಲಿ ಕೃಷಿ ಅಧಿಕಾರಿ ಎಂ.ಎಚ್.ಬೀಳಗಿ, ತಾಂತ್ರಿಕ ಅಧಿಕಾರಿ ಸಂಗಮೇಶ ಪಾಟೀಲ, ಅಕೌಂಟೆಡ್ ವಿನೋದ ನಾಯಕ, ಸಂಜೀವಿನಿ ಸಿಬ್ಬಂದಿಗಳಾದ ಕಿರಣ ಬೊಮ್ಮನಹಳ್ಳಿ, ಹನುಮಂತರಾಯ ಕುಂಟರೆಡ್ಡಿ, ಅನವುಗಾರರಾದ ಅಮರೇಶ ಅಂಗಡಿ, ರವಿ ಹೊಸಮನಿ, ನಂದಿಕೋಲಮಠ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

