Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಪಟ್ಟಣದ ತಾಲೂಕು ಆಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರ ಜನ್ಮದಿನಾಚರಣೆಯನ್ನು ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದರು.ಈ ವೇಳೆ ಬಳಗದ ಪ್ರಮುಖರಾದ ಅವ್ವಣ್ಣ ಗ್ವಾತಗಿ ಮಾತನಾಡಿ, ಅತ್ಯಂತ ಸರಳ ವ್ಯಕ್ತಿತ್ವ, ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿರುವ ಪ್ರಭುಗೌಡ ದೇಸಾಯಿ ಅವರು ಸಹಾಯ ಕೇಳಿ ಬಂದವರಿಗೆ ಯಾವತ್ತೂ ಮರಳಿ ಕಳಿಸಿದವರಲ್ಲ. ಕೋವಿಡ್ ಸಂದರ್ಭದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಎಲ್ಲ ವಾರಿಯರ್ಸಗಳಿಗೆ ಕಿಟ್ ನೀಡುವ ಸಾಮಾಜಿಕ ಕಳಕಳಿ ಮೆರೆದಿದ್ದರು. ಅವರ ಜನ್ಮದಿನದ ನಿಮಿತ್ಯ ನಾವು ಸ್ವಯಂ ಪ್ರೇರಿತರಾಗಿ ವಿಶೇಶ ಪೂಜೆ ಸಲ್ಲಿಸಿ, ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಅವರ ರಾಜಕೀಯ ಭವಿಷ್ಯ ಉಜ್ವಲವಾಗಿರಲೆಂದು ಪ್ರಾರ್ಥಿಸಿದ್ದೇವೆ ಎಂದರು.ಈ ವೇಳೆ ಶಿವು ದಡ್ಡಿ ವಕೀಲರು, ಮಹಾಂತೇಶ ಹಡಪದ, ಪ್ರಕಾಶಗೌಡ ಪಾಟೀಲ, ಭೀಮನಗೌಡ ಟಕ್ಕಳಕಿ, ಶಿವು ಚಿನಿವಾರ, ರಾಹುಲ ಮಡಿವಾಳರ, ಪ್ರಕಾಶ ತೋಳದಿನ್ನಿ ಸೇರಿದಂತೆ ಮತ್ತೀತರರು ಇದ್ದರು.
ಬಸವನಬಾಗೇವಾಡಿ: ಅಗ್ನಿಶಾಮಕ ಠಾಣೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಅಗ್ನಿಶಾಮಕ ಠಾಣಾಧಿಕಾರಿ ಸಂಗಮೇಶ ಶಿವಪೂಜಿ ಸಸಿ ನೆಟ್ಟು ನೀರುಣಿಸಿದರು.ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿಗಳಾದ ಭೀಮಾಶಂಕರ ಮಾದರ, ಬಸಪ್ಪ ಜಾಲಗೇರಿ, ನಾರಾಯಣ ರಾಠೋಡ, ಸುಭಾಸ ಹಾದಿಮನಿ, ಇಮಾಮಸಾಬ ಕುಷ್ಟಗಿ, ಮುತ್ತಣ್ಣ ಲಮಾಣಿ, ಅಶೋಕ ನಾಯಕ, ಮಹಮ್ಮದ್ ತಾಂಬೋಳಿ ಇದ್ದರು.
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಹಿರೇಮಠದ ಶತಾಯುಷಿ ಸಂಗನಬಸವ ಶಿವಾಚಾರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಬುಧವಾರ ಪರಿಸರ ದಿನಾಚರಣೆಯಂಗವಾಗಿ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಸಸಿ ನೆಟ್ಟು ನೀರುಣಿಸಿದರು.ನಂತರ ಮಾತನಾಡಿದ ಶ್ರೀಗಳು, ಸಮಾಜದಲ್ಲಿರುವ ಪ್ರತಿಯೊಬ್ಬರೂ ಗಿಡಗಳನ್ನು ಹಚ್ಚುವಂತಹ ಕೆಲಸ ಮಾಡಬೇಕು. ಗಿಡಗಳ ಹಚ್ಚುವುದರಿಂದ ನಮ್ಮ ಸುತ್ತಮುತ್ತಲಿನ ವಾತಾವರಣ ಬಹಳ ಸುಂದರವಾಗಿ ಕಾಣುತ್ತದೆ. ಹೊಲದಲ್ಲಿರುವ ಗಿಡಗಳನ್ನು ಕಡೆದು ಹೊಲ ಉಳಿಮೆ ಮಾಡ್ತಾ ಇದ್ದೀವಿ.ಎಷ್ಟು ಗಿಡಗಳು ಇರುತ್ತವೆ ಅಷ್ಟು ಊರಿಗೆ ಒಳ್ಳೇದು. ಸುಮಾರು 25-30 ವರ್ಷ ಹಿಂದೆ ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸುತ್ತಿದ್ದರು. ಈಗ ಯಾರು ಗಿಡಗಳನ್ನು ಬೆಳೆಸುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯನ್ನು ನಾವೆಲ್ಲ ಅನುಭವಿದ್ದೇವೆ. ಮನುಷ್ಯ ಉಸಿರಾಡಬೇಕಾದರೆ ಗಾಳಿ ಬೇಕು. ಈ ನಿಟ್ಟಿನಲ್ಲಿ ಮರ-ಗಿಡಗಳನ್ನು ಹೆಚ್ಚು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕೆಂದರು.ಹೊಲವನ್ನು ಖರೀದಿ ಮಾಡುವಾಗ ಪ್ರತಿಯೊಬ್ಬರೂ 10 ಗಿಡಗಳನ್ನು ನೀವು ಹಚ್ಚಬೇಕು ಅನ್ನುವಂತಹ ಆದೇಶ ಸರ್ಕಾರ ಮಾಡಿದರೆ ಹೆಚ್ಚು ಮರ-ಗಿಡಗಳು ಬೆಳೆಯುವ ಮೂಲಕ ನಮ್ಮ ನಾಡು ಸಮೃದ್ಧಿಯಾಗುತ್ತದೆ. ನಮ್ಮ ಶ್ರೀಮಠದ ಆವರಣದಲ್ಲಿ…
ಬಸವನಬಾಗೇವಾಡಿ: ಸ್ಕಿಜೋಫ್ರೀನಿಯಾ ಖಾಯಿಲೆಯು ಮಾನಸಿಕ ಖಾಯಿಲೆಯ ಒಂದು ಭಾಗವಾಗಿದೆ. ಇದನ್ನು ಆರಂಭಿಕ ಹಂತದಲ್ಲಿಯೇ ಆಪ್ತ ಸಮಾಲೋಚನೆ ಹಾಗು ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖವಾಗುತ್ತದೆ ಎಂದು ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞೆ ಡಾ. ಹಜರಾಬೇಗಂ ಇಂಡಿಕರ ಹೇಳಿದರು.ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಲಯ ಹಾಗು ತಾಲೂಕು ಆಸ್ಪತ್ರೆ ರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕಗ ಮಟ್ಟದ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮಷ್ಟಕ್ಕೆ ತಾವೇ ಮಾತನಾಡುವುದು, ನಗುವುದು. ಸಾಮಾಜಿಕ ಜೀವನದಿಂದ ದೂರ ಉಳಿಯುವುದು. ಸ್ನಾನ,ಊಟ ಇತ್ಯಾದಿ ಕೆಲಸಗಳಲ್ಲಿ ನಿರಾಸಕ್ತಿ. ವಿಪರಿತ ಕೋಪ. ದಾರಿಯಲ್ಲಿ ಓಡಾಡುವುದು. ವೈಯಕ್ತಿಕ ಸ್ವಚ್ಛತೆ ಇಲ್ಲದಿರುವುದು. ವಿಚಿತ್ರವಾಗಿ ವರ್ತಿಸುವುದು ಮತ್ತು ಅತಿಯಾದ ಅನುಮಾನ. ಯಾರಿಗೂ ಕೇಳಿಸದ ಶಬ್ದಗಳು ಕೇಳಿಸುವುದು. ಇಂತಹ ಲಕ್ಷಣಗಳು ತಮಗೆ ಪರಿಚಿತರಲ್ಲಿ ಬಂಧುಗಳಲ್ಲಿ ಹಾಗೂ ತಮ್ಮ ಕುಟುಂಬದಲ್ಲಿ ಯಾರಿಗಾದರೂ ಕಂಡು ಬಂದರೆ…
ಬಸವನಬಾಗೇವಾಡಿ: ಪಟ್ಟಣದ ನಂದಿ ಬಡಾವಣೆಯ ಉದ್ಯಾನವನದಲ್ಲಿ ವಿವೇಕ ಬ್ರಿಗೇಡ್ ದಿಂದ ಬುಧವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸಸಿ ನೆಟ್ಟು ನೀರುಣಿಸುವ ಮೂಲಕ ಸಸಿಗಳ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂದಿ ಬಡಾವಣೆ ಉದ್ಯಾವನದ ಆವರಣದಲ್ಲಿ ವಿವೇಕ ಬ್ರಿಗೇಡ್ ದಿಂದ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಯಲ್ಲಾಲಿಂಗ ಮಠದ ಪೂಜ್ಯರು, ಮುಖಂಡರಾದ ರವಿಗೌಡ ಚಿಕ್ಕೊಂಡ, ವಿನುತ ಕಲ್ಲೂರ, ಮಲ್ಲಿಕಾರ್ಜುನ ಅವಟಿ, ಸಂಗಮೇಶ ಹುಜರತಿ, ಸಚಿನ್ ಕಲ್ಲೂರ, ಶ್ರೀಕಾಂತ್ ಕೊಟ್ರಶೆಟ್ಟಿ, ಕುಮಾರ್ ಕಲ್ಲೂರ, ಪ್ರಭಾಕರ ಖೇಡ, ಸಂಗಮೇಶ ಕುಂಬಾರ, ಶಿವಾನಂದ ತೋಳನೂರ, ಪೃಥ್ವಿರಾಜ ನಾಯ್ಕೋಡಿ, ಕುಶಾಲ ಕೊಟ್ರಶೆಟ್ಟಿ ಇದ್ದರು.
ಬಸವನಬಾಗೇವಾಡಿ: ತಾಲೂಕಿನ ಮುತ್ತಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಾಣವಾದ ಅಮೃತ ಸರೋವರ ಕಾಮಗಾರಿ ಸ್ಥಳದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ ಮತ್ತು ಮುತ್ತಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಾ ಪಾಟೀಲ ಅವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ತಾಪಂ ಇಓ ಪ್ರಕಾಶ ದೇಸಾಯಿ ಮಾತನಾಡಿ, ಪರಿಸರ ದಿನಾಚರಣೆಯ ಮಹತ್ವ ಮತ್ತು ಗ್ರಾಮದಲ್ಲಿನ ಜನರು ತಮ್ಮ ಜಮೀನಿನಲ್ಲಿ ಸಸಿ ನೆಡುವದರಿಂದ ಆಗುವ ಪ್ರಯೋಜನಗಳ ಬಗ್ಗೆ ಪರಿಸರ ದಿನಾಚರಣೆಯ ಬಗ್ಗೆ ಸೂಕ್ತವಾದ ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕವಿತಾ ಬಡಿಗೇರ, ಗ್ರಾಮ ಪಂಚಾಯಿತಿ ಸದಸ್ಯರಾದ ಕನಕಪ್ಪ ಬಂಡಿವಡ್ಡರ, ಮಹಿಬೂಬ ಚಪ್ಪರಬಂದ, ಕರಿಯಪ್ಪ ಗುಡಿಮನಿ, ಅರ್ಜುನ ಶಿಲ್ಪಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಎಸ್. ಬಡಿಗೇರ, ಗ್ರಾಮ ಪಂಚಾಯತ ಎಲ್ಲ ಸಿಬ್ಬಂದಿ ವರ್ಗ ಇತರರು ಇದ್ದರು.
ಬಸವನಬಾಗೇವಾಡಿ: ನಮಗೆ ಇರುವುದೊಂದೇ ಭೂಮಿ. ಅದರ ರಕ್ಷಣೆಯು ನಮ್ಮೆಲ್ಲರ ಹೊಣೆಗಾರಿಕೆ ಎಂಬುದು ಸಾರ್ವತ್ರಿಕವಾದ ಆಶಯ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ಪರಿಸರ ಮಾಲಿನ್ಯ ಜಗತ್ತನ್ನು ಅತ್ಯಂತ ತೀವ್ರವಾಗಿ ಕಾಡುತ್ತಿರುವ ಈ ಸಂದರ್ಭದಲ್ಲಿ ಪ್ರಕೃತಿಯನ್ನು ಉಳಿಸಿಕೊಳ್ಳುವುದೇ ಮಹತ್ವದ ಕರ್ತವ್ಯವಾಗಿದೆ. ಈ ಆಶಯದೊಂದಿಗೆ ಜನಜಾಗೃತಿ ಅಭಿಯಾನಕ್ಕೆ ಪ್ರತಿವರ್ಷ ಜೂನ್ 5ರಂದು ಆಚರಣೆಯಾಗುವ ವಿಶ್ವ ಪರಿಸರ ದಿನವೂ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿರುವ ಸಂದರ್ಭದಲ್ಲಿ. ಗಿಡಮರಗಳನ್ನು ಬೆಳೆಸುವುದರ ಮೂಲಕ ಸುಂದರವಾದ ಪರಿಸರವನ್ನು ಬೆಳೆಸುವುದು ಹಾಗೂ ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ. ಮಾನವ ಸೇರಿದಂತೆ ಇತರೇ ಪ್ರಾಣಿ, ಪಕ್ಷಿಗಳು…
ಬಸವನಬಾಗೇವಾಡಿ: ಇಂದು ಮರಗಳ ಸಂಖ್ಯೆ ಕಡಿಮೆಯಾಗಿರುವದರಿಂದ ಉಷ್ಣತೆ ಪ್ರಮಾಣ ಹೆಚ್ಚಳವಾಗಿದೆ. ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ನೀಡುವದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಿವ್ಹಿಲ್ ನ್ಯಾಯಾಧೀಶೆ ತೇಜಶ್ವಿನಿ ಸೊಗಲದ ಹೇಳಿದರು.ತಾಲೂಕಿನ ಇವಣಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯತ, ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮರ-ಗಿಡಗಳನ್ನು ನಾಶ ಮಾಡುತ್ತಿರುವದರಿಂದ ಬಿಸಿಲಿನ ತೀವ್ರತೆ ಹೆಚ್ಚಳವಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಜಮೀನಿನ ಬದುಗಳಲ್ಲಿ ಮರ-ಗಿಡಗಳನ್ನು ಬೆಳೆಸಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳ ಮುಂದೆಯೂ ಮರ-ಗಿಡಗಳನ್ನು ಬೆಳೆಸುವಂತಾಗಬೇಕು. ಮರಗಳನ್ನು ಬೆಳೆಸುವದರಿಂದ ಎಲ್ಲರಿಗೂ ಆಮ್ಲಜನಕ ಸಿಗುವ ಮೂಲಕ ಎಲ್ಲರೂ ಆರೋಗ್ಯವಂತರಾಗಿ ಇರಲು ಸಾಧ್ಯ.ದೇವರ ಸೇವೆಯ ಜೊತೆಗೆ ಸಮಾಜದಲ್ಲಿ ತೊಡಗಿ ಗಿಡಮರಗಳನ್ನು ಬೆಳೆಸಿದಾಗ ದೇವರಿಗೆ ಸಂತೋಷವಾಗುತ್ತದೆ. ಪ್ರತಿಯೊಬ್ಬರೂ ಆರೋಗ್ಯವಂತರಾಗಿ ನೆಮ್ಮದಿ ಜೀವನ ಮಾಡಲು ಸಾಧ್ಯ ಎಂದರು.ನ್ಯಾಯವಾದಿ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ.…
ಮುದ್ದೇಬಿಹಾಳ: ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಖತರ್‌ನಾಕ್ ಖದೀಮೆಯೊಬ್ಬಳು ದಿನೇ ದಿನೇ ಮನೆಯಲ್ಲಿರುವ ಸಾಮನುಗಳನ್ನು ಕದ್ದ ಘಟನೆ ಪಟ್ಟಣದ ನೇತಾಜಿ ಗಲ್ಲಿಯಲ್ಲಿರುವ ಪರಶುರಾಮ ಗಜಾಕೋಶ ಎಂಬುವವರ ಮನೆಯಲ್ಲಿ ನಡೆದಿದೆ.ಚಿಂದಿ ಆಯುವ ಸೋಗಿನಲ್ಲಿ ಬಂದ ಕಳ್ಳಿ ಸುಮಾರು ವರ್ಷಗಳಿಂದ ಮನೆಯಲ್ಲಿ ವಾಸವಿರದಿದ್ದನ್ನು ಖಚಿತಪಡಿಸಿಕೊಂಡು ಹಿಂದಿನ ಬಾಗಿಲನ್ನು ಮುರಿದು ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ದಿನೇ ದಿನೇ ಕದ್ದಿದ್ದಾಳೆ. ಇದೇ ಮನೆಯ ಪಕ್ಕದಲ್ಲಿರುವ ಕಲಾಲ ಎನ್ನುವವರಿಗೆ ಸೇರಿದ್ದ ಮನೆಯಲ್ಲಿಯೂ ಕಿಟಕಿಯನ್ನು ಮುರಿದು ಒಳನುಗ್ಗಿ ಹಿತ್ತಾಳೆಯ ಕೊಡ ಮತ್ತು ಟಾಕಿಯನ್ನೂ ಕದ್ದಿದ್ದಾಳೆ. ಬುಧವಾರ ಎಂದಿನಂತೆ ಕದ್ದು ಹಿತ್ತಾಳೆ ಸಮಾನುಗಳು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ಹೋಗುತ್ತಿರುವಾಗ ಸಾರ್ವಜನಿಕರ ಕೈಗೆ ಸಿಕ್ಕಿದ್ದು, ಆಕೆಯನ್ನು ಹಿಡಿದು ಥಳಿಸಿ ಸಾಮಾನುಗಳನ್ನು ಕಸಿದುಕೊಂಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಬೇಕು ಅನ್ನುವಷ್ಟರಲ್ಲಿ ಕುಸುರಿಕೊಂಡು ಓಡಿ ಹೋಗಿದ್ದಾಳೆ. ಆಕೆಯ ಬಳಿ ಇದ್ದ ಮೊಬೈಲ್ ಇಲ್ಲಿನ ನಿವಾಸಿಗಳಿಗೆ ಸಿಕ್ಕಿದ್ದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಇಲ್ಲಿನ ನಿವಾಸಿಗಳಾದ ಪರಶುರಾಮ ನಾಲತವಾಡ,…
ಆಲಮಟ್ಟಿ ಹಸರೀಕರಣಕ್ಕೆ ಶ್ಲಾಘನೆ | ೧೦ ಸಾವಿರ ಗಿಡಗಳನ್ನು ನೆಡುವ ಯೋಜನೆಗೆ ಚಾಲನೆ ಆಲಮಟ್ಟಿ: ಇಲ್ಲಿಯ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ವತಿಯಿಂದ ಈ ವರ್ಷ ನಾನಾ ಕಡೆ ಸುಮಾರು ೧೦ ಸಾವಿರ ಗಿಡಗಳನ್ನು ಹಚ್ಚಲು ಉದ್ದೇಶಿಸಲಾಗಿದೆ, ಅದಕ್ಕೆ ಪರಿಸರ ದಿನಾಚರಣೆಯ ದಿನದಂದು ಚಾಲನೆ ನೀಡಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ ಹೇಳಿದರು.ಆಲಮಟ್ಟಿಯ ರಾಕ್ ಉದ್ಯಾನದಲ್ಲಿ ಬುಧವಾರ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.ಕೃಷ್ಣಾ ಭಾಗ್ಯ ಜಲ ನಿಗಮ ಬೆಂಗಳೂರಿನ ಹಣಕಾಸು ವಿಭಾಗದ ಜನರಲ್ ಮ್ಯಾನೇಜರ್ ಬಿ. ಲಕ್ಷ್ಮೀಕಾಂತ ಮಾತನಾಡಿ,ಪರಿಸರ ಮಾಲಿನ್ಯ, ಪ್ಲ್ಯಾಸ್ಟಿಕ್ ಮತ್ತೀತರ ಹಾನಿಕಾರಕ ವಸ್ತುಗಳ ಹೆಚ್ಚು ಬಳಕೆಯಿಂದ ಧ್ರುವ ಪ್ರದೇಶದ ಮಂಜುಗಡ್ಡೆ ಕರಗಿ ಸಮುದ್ರದ ಮಟ್ಟ ಏರಿಕೆಯಾಗಿ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಕೇವಲ ಸಸಿ ನೆಡುವುದು ಮುಖ್ಯವಲ್ಲ , ಆ ಸಸಿ ಮರವಾಗಲು ಶ್ರಮಿಸಬೇಕು ಎಂದರು.ಕೆಬಿಜೆಎನ್ ಎಲ್ ಹಣಕಾಸು ಸಲಹೆಗಾರ ಆರ್.ಎಸ್. ಪಶುಪತಿ ಮಾತನಾಡಿ, ಆಲಮಟ್ಟಿ ಭಾಗದಲ್ಲಿ ನಡೆದಿರುವ ಸಸಿಗಳ ಬೆಳೆಸುವಿಕೆಯಿಂದ ವಿಜಯಪುರ…
