ಬಸವನಬಾಗೇವಾಡಿ: ಸ್ಕಿಜೋಫ್ರೀನಿಯಾ ಖಾಯಿಲೆಯು ಮಾನಸಿಕ ಖಾಯಿಲೆಯ ಒಂದು ಭಾಗವಾಗಿದೆ. ಇದನ್ನು ಆರಂಭಿಕ ಹಂತದಲ್ಲಿಯೇ ಆಪ್ತ ಸಮಾಲೋಚನೆ ಹಾಗು ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖವಾಗುತ್ತದೆ ಎಂದು ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞೆ ಡಾ. ಹಜರಾಬೇಗಂ ಇಂಡಿಕರ ಹೇಳಿದರು.
ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಲಯ ಹಾಗು ತಾಲೂಕು ಆಸ್ಪತ್ರೆ ರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕಗ ಮಟ್ಟದ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮಷ್ಟಕ್ಕೆ ತಾವೇ ಮಾತನಾಡುವುದು, ನಗುವುದು. ಸಾಮಾಜಿಕ ಜೀವನದಿಂದ ದೂರ ಉಳಿಯುವುದು. ಸ್ನಾನ,ಊಟ ಇತ್ಯಾದಿ ಕೆಲಸಗಳಲ್ಲಿ ನಿರಾಸಕ್ತಿ. ವಿಪರಿತ ಕೋಪ. ದಾರಿಯಲ್ಲಿ ಓಡಾಡುವುದು. ವೈಯಕ್ತಿಕ ಸ್ವಚ್ಛತೆ ಇಲ್ಲದಿರುವುದು. ವಿಚಿತ್ರವಾಗಿ ವರ್ತಿಸುವುದು ಮತ್ತು ಅತಿಯಾದ ಅನುಮಾನ. ಯಾರಿಗೂ ಕೇಳಿಸದ ಶಬ್ದಗಳು ಕೇಳಿಸುವುದು. ಇಂತಹ ಲಕ್ಷಣಗಳು ತಮಗೆ ಪರಿಚಿತರಲ್ಲಿ ಬಂಧುಗಳಲ್ಲಿ ಹಾಗೂ ತಮ್ಮ ಕುಟುಂಬದಲ್ಲಿ ಯಾರಿಗಾದರೂ ಕಂಡು ಬಂದರೆ ಅವರಿಗೆ ಆಸ್ಪತ್ರೆಗೆ ಹೋಗುವಂತೆ ಪ್ರೇರೆಪಿಸುವುದು ಸಮಾಜದ ಹಾಗು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಎಸ್. ಮೇಟಿ ಮಾತನಾಡಿ, ಭಾರತಿಯರಲ್ಲಿ ಹಾಗು ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಜನರಿಗೆ ಮಾನಸಿಕ ಖಾಯಿಲೆಗಳಿಗೆ, ಇತರೆ ಖಾಯಿಲೆಗಳಿಗೆ ಹೇಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತದೆ. ಹಾಗಯೇ ಮಾನಸಿಕ ಖಾಯಿಲೆಗಳಿಗೆ ಆಸ್ಪತ್ರೆಗಳಲ್ಲಿ ಹಾಗು ಮಾನಸಿಕ ತಜ್ಞರಿಂದ ಚಿಕಿತ್ಸೆ ಹಾಗು ಸೈಕ್ರಿಯಾಟಿಕ್ ಗಳಿಂದ ಆಪ್ತ ಸಮಾಲೋಚನೆಯ ಮೂಲಕ ಚಿಕಿತ್ಸೆ ದೊರೆಯುತ್ತದೆ. ಈ ಬಗ್ಗೆ ಮಾಹಿತಿಯಲ್ಲದೇ ಶೇ.85 ರಷ್ಟು ಜನರು ಆಸ್ಪತ್ರೆಗಳಿಗೆ ಹೋಗದೆ ಮಾಟ, ಮಂತ್ರ, ಹಾಗು ಅವೈಜ್ಞಾನಿಕ ಚಿಕಿತ್ಸೆಯ ಮೋರೆ ಹೊಗುತ್ತಾರೆ,.ಇದರಿಂದ ರೋಗ ಉಲ್ಬಣಗೊಳ್ಳುತ್ತದೆ. ಆದ್ದರಿಂದ ಯಾವುದೇ ಮಾನಸಿಕ ಖಾಯಿಲೆ ಬಂದರೂ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿದಿನ ಹಾಗು ಜಿಲ್ಲಾ ಮಾನಸಿಕ ಕಾರ್ಯಕ್ರಮ ಅಧಿಕಾರಿಗಳ ಕಾರ್ಯಾಲಯದಲ್ಲಿ ಮಂಗಳವಾರ ಬಿಟ್ಟು ಉಳಿದ ಎಲ್ಲ ದಿನಗಳು ಹಾಗೂ ಜಿಲ್ಲಾ ಮಾನಸಿಕ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ತಿಂಗಳು ಮೂರನೇ ಮಂಗಳವಾರ ತಾಲೂಕು ಆಸ್ಪತ್ರೆಯಲ್ಲಿ ಮಾನಸಿಕ ತಜ್ಞರು ಹಾಗು ಸೈಕ್ರೀಯಾಟಿಕ್ ರವರು ಲಭ್ಯ ಇರುತ್ತಾರೆ. ಇದನ್ನು ಅವಶ್ಯವಿರುವವರಿಗೆ ಮಾಹಿತಿ ನೀಡಬೇಕೆಂದರು.
ಹಿರಿಯ ಶುಶೂಷ್ರ ಅಧಿಕಾರಿ ಅಯ್ಯಮ್ಮ ಕೊಣ್ಣೂರ ಮಾತನಾಡಿ, ಚಿಕಿತ್ಸೆ ಆಪ್ತ ಸಮಾಲೋಚನೆಯ ಜೊತೆಗೆ ಕುಟುಂಬದವರ ಸಂಬಂಧಿಕರು ಹಾಗು ಅಕ್ಕಪಕ್ಕದವರ ಸಹಾಯ ಸಹಕಾರವು ರೋಗ ಗುಣಮುಖ ಹೊಂದಲು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.
ಶುಶೂಷ್ರಕ ಅಧಿಕಾರಿ ದೀಪಾ ಕೋರವಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

