ಮುದ್ದೇಬಿಹಾಳ: ಪಟ್ಟಣದ ತಾಲೂಕು ಆಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರ ಜನ್ಮದಿನಾಚರಣೆಯನ್ನು ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದರು.
ಈ ವೇಳೆ ಬಳಗದ ಪ್ರಮುಖರಾದ ಅವ್ವಣ್ಣ ಗ್ವಾತಗಿ ಮಾತನಾಡಿ, ಅತ್ಯಂತ ಸರಳ ವ್ಯಕ್ತಿತ್ವ, ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿರುವ ಪ್ರಭುಗೌಡ ದೇಸಾಯಿ ಅವರು ಸಹಾಯ ಕೇಳಿ ಬಂದವರಿಗೆ ಯಾವತ್ತೂ ಮರಳಿ ಕಳಿಸಿದವರಲ್ಲ. ಕೋವಿಡ್ ಸಂದರ್ಭದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಎಲ್ಲ ವಾರಿಯರ್ಸಗಳಿಗೆ ಕಿಟ್ ನೀಡುವ ಸಾಮಾಜಿಕ ಕಳಕಳಿ ಮೆರೆದಿದ್ದರು. ಅವರ ಜನ್ಮದಿನದ ನಿಮಿತ್ಯ ನಾವು ಸ್ವಯಂ ಪ್ರೇರಿತರಾಗಿ ವಿಶೇಶ ಪೂಜೆ ಸಲ್ಲಿಸಿ, ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಅವರ ರಾಜಕೀಯ ಭವಿಷ್ಯ ಉಜ್ವಲವಾಗಿರಲೆಂದು ಪ್ರಾರ್ಥಿಸಿದ್ದೇವೆ ಎಂದರು.
ಈ ವೇಳೆ ಶಿವು ದಡ್ಡಿ ವಕೀಲರು, ಮಹಾಂತೇಶ ಹಡಪದ, ಪ್ರಕಾಶಗೌಡ ಪಾಟೀಲ, ಭೀಮನಗೌಡ ಟಕ್ಕಳಕಿ, ಶಿವು ಚಿನಿವಾರ, ರಾಹುಲ ಮಡಿವಾಳರ, ಪ್ರಕಾಶ ತೋಳದಿನ್ನಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

