ಮುದ್ದೇಬಿಹಾಳ: ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಖತರ್‌ನಾಕ್ ಖದೀಮೆಯೊಬ್ಬಳು ದಿನೇ ದಿನೇ ಮನೆಯಲ್ಲಿರುವ ಸಾಮನುಗಳನ್ನು ಕದ್ದ ಘಟನೆ ಪಟ್ಟಣದ ನೇತಾಜಿ ಗಲ್ಲಿಯಲ್ಲಿರುವ ಪರಶುರಾಮ ಗಜಾಕೋಶ ಎಂಬುವವರ ಮನೆಯಲ್ಲಿ ನಡೆದಿದೆ.
ಚಿಂದಿ ಆಯುವ ಸೋಗಿನಲ್ಲಿ ಬಂದ ಕಳ್ಳಿ ಸುಮಾರು ವರ್ಷಗಳಿಂದ ಮನೆಯಲ್ಲಿ ವಾಸವಿರದಿದ್ದನ್ನು ಖಚಿತಪಡಿಸಿಕೊಂಡು ಹಿಂದಿನ ಬಾಗಿಲನ್ನು ಮುರಿದು ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ದಿನೇ ದಿನೇ ಕದ್ದಿದ್ದಾಳೆ. ಇದೇ ಮನೆಯ ಪಕ್ಕದಲ್ಲಿರುವ ಕಲಾಲ ಎನ್ನುವವರಿಗೆ ಸೇರಿದ್ದ ಮನೆಯಲ್ಲಿಯೂ ಕಿಟಕಿಯನ್ನು ಮುರಿದು ಒಳನುಗ್ಗಿ ಹಿತ್ತಾಳೆಯ ಕೊಡ ಮತ್ತು ಟಾಕಿಯನ್ನೂ ಕದ್ದಿದ್ದಾಳೆ. ಬುಧವಾರ ಎಂದಿನಂತೆ ಕದ್ದು ಹಿತ್ತಾಳೆ ಸಮಾನುಗಳು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ಹೋಗುತ್ತಿರುವಾಗ ಸಾರ್ವಜನಿಕರ ಕೈಗೆ ಸಿಕ್ಕಿದ್ದು, ಆಕೆಯನ್ನು ಹಿಡಿದು ಥಳಿಸಿ ಸಾಮಾನುಗಳನ್ನು ಕಸಿದುಕೊಂಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಬೇಕು ಅನ್ನುವಷ್ಟರಲ್ಲಿ ಕುಸುರಿಕೊಂಡು ಓಡಿ ಹೋಗಿದ್ದಾಳೆ. ಆಕೆಯ ಬಳಿ ಇದ್ದ ಮೊಬೈಲ್ ಇಲ್ಲಿನ ನಿವಾಸಿಗಳಿಗೆ ಸಿಕ್ಕಿದ್ದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಇಲ್ಲಿನ ನಿವಾಸಿಗಳಾದ ಪರಶುರಾಮ ನಾಲತವಾಡ, ಹಣಮಂತ ಕಲಾಲ ಮಾತನಾಡಿ ಚಿಂದಿ ಆಯುವ ನೆಪದಲ್ಲಿ ಬರುವ ಗೊಲ್ಲರ ಸಮಾಜದ ಮಹಿಳೆಯರು ಮತ್ತು ಯುವಕರು ಇಂತಹ ಕಾರ್ಯ ಮಾಡುತ್ತಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

