ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಹಿರೇಮಠದ ಶತಾಯುಷಿ ಸಂಗನಬಸವ ಶಿವಾಚಾರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಬುಧವಾರ ಪರಿಸರ ದಿನಾಚರಣೆಯಂಗವಾಗಿ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಸಸಿ ನೆಟ್ಟು ನೀರುಣಿಸಿದರು.
ನಂತರ ಮಾತನಾಡಿದ ಶ್ರೀಗಳು, ಸಮಾಜದಲ್ಲಿರುವ ಪ್ರತಿಯೊಬ್ಬರೂ ಗಿಡಗಳನ್ನು ಹಚ್ಚುವಂತಹ ಕೆಲಸ ಮಾಡಬೇಕು. ಗಿಡಗಳ ಹಚ್ಚುವುದರಿಂದ ನಮ್ಮ ಸುತ್ತಮುತ್ತಲಿನ ವಾತಾವರಣ ಬಹಳ ಸುಂದರವಾಗಿ ಕಾಣುತ್ತದೆ. ಹೊಲದಲ್ಲಿರುವ ಗಿಡಗಳನ್ನು ಕಡೆದು ಹೊಲ ಉಳಿಮೆ ಮಾಡ್ತಾ ಇದ್ದೀವಿ.ಎಷ್ಟು ಗಿಡಗಳು ಇರುತ್ತವೆ ಅಷ್ಟು ಊರಿಗೆ ಒಳ್ಳೇದು. ಸುಮಾರು 25-30 ವರ್ಷ ಹಿಂದೆ ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸುತ್ತಿದ್ದರು. ಈಗ ಯಾರು ಗಿಡಗಳನ್ನು ಬೆಳೆಸುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯನ್ನು ನಾವೆಲ್ಲ ಅನುಭವಿದ್ದೇವೆ. ಮನುಷ್ಯ ಉಸಿರಾಡಬೇಕಾದರೆ ಗಾಳಿ ಬೇಕು. ಈ ನಿಟ್ಟಿನಲ್ಲಿ ಮರ-ಗಿಡಗಳನ್ನು ಹೆಚ್ಚು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕೆಂದರು.
ಹೊಲವನ್ನು ಖರೀದಿ ಮಾಡುವಾಗ ಪ್ರತಿಯೊಬ್ಬರೂ 10 ಗಿಡಗಳನ್ನು ನೀವು ಹಚ್ಚಬೇಕು ಅನ್ನುವಂತಹ ಆದೇಶ ಸರ್ಕಾರ ಮಾಡಿದರೆ ಹೆಚ್ಚು ಮರ-ಗಿಡಗಳು ಬೆಳೆಯುವ ಮೂಲಕ ನಮ್ಮ ನಾಡು ಸಮೃದ್ಧಿಯಾಗುತ್ತದೆ. ನಮ್ಮ ಶ್ರೀಮಠದ ಆವರಣದಲ್ಲಿ ನಾನು ಹನ್ನೊಂದು ನೂರು ಗಿಡಗಳನ್ನು ಹಚ್ಚಿದ್ದೇನೆ. ಮನೆಯಲ್ಲಿ ಮಕ್ಕಳನ್ನು ಹೇಗೆ ನಾವು ಜೋಪಾನ ಮಾಡುತ್ತೇವೆ ಹಾಗೆ ನಾನು ನನ್ನ ಗಿಡಗಳನ್ನು ನನ್ನ ಶ್ರೀಮಠದ ಕುಟುಂಬದ ಭಕ್ತನನ್ನಾಗಿ ಗಿಡಗಳನ್ನು ನೋಡಿಕೊಂಡು ಹೋಗುತ್ತಿದ್ದೇನೆ. ಹೆಚ್ಚು ಮರ-ಗಿಡಗಳಿದ್ದರೆ ತಾಪಮಾನ ಕಡಿಮೆ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಂತೇಶ ಮನಗೂಳಿ, ರಾಜು ಬಿರಾದಾರ, ರವಿ ತಪಶೆಟ್ಟಿ ,ಶ್ರೀಶೈಲ ಜಾಲಗೇರಿ, ಸಂಗಮೇಶ ಹಚ್ಚಡದ, ಶ್ರವಣ ಕೋಟ್ಯಾಳ ,ಶ್ರೀಕಾಂತ್ ಪವಾರ, ಕುಮಾರ ಪಾಟೀಲ, ಶಂಕ್ರು ಗೋಟೆ, ಮಲ್ಲು ಅನಗವಾಡಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

