Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಪ್ರತಿಯೊಬ್ಬರೂ ನಿಮ್ಮ ನಿಮ್ಮ ಮನೆಯ ಮುಂದೆ, ಸಾರ್ವಜನಿಕ ಸ್ಥಳ, ಜಮೀನಿನಲ್ಲಿ ಸಸಿ ನಡುವುದರ ಮೂಲಕ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ ಹೇಳಿದರು.ತಾಲೂಕಿನ ರಾಂಪೂರ ಪಿಎ ಗ್ರಾಮದ ವ್ಯಾಪ್ತಿಯ ನರೇಗಾ ಅಡಿಯಲ್ಲಿ ನಿರ್ಮಾಣವಾದ ಅಮೃತ ಸರೋವರ ದಡದಲ್ಲಿ ಹಮ್ಮಿಕೊಂಡ ಸಸಿ ನಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ಅಮೃತ ಸರೋವರದಲ್ಲಿ ೧೦೦ಕ್ಕೂ ಅಧಿಕ ಸಸಿಗಳನ್ನು ನಡುತ್ತಿದ್ದೇವೆ ಎಂದರು.ಇದೇ ಸಂದರ್ಭದಲ್ಲಿ ದಸ್ತಗೀರಸಾಬ್ ನದಾಫ್, ಐಇಸಿ ಸಂಯೋಜಕರು ಭೀಮರಾಯ ಚೌಧರಿ, ಕಾರ್ಯದರ್ಶಿ ಬಸವರಾಜ್ ಪಟ್ಟಣಶೆಟ್ಟಿ, ಸಂಪತ್, ನಾಗು ವಾಲೀಕಾರ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಮತ್ತು ಸಿಬ್ಬಂದಿಗಳು ನರೇಗಾ ಕೂಲಿಕಾರರು ಇದ್ದರು.
ತಿಕೋಟಾ: ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಳ್ಳ ಕೊಳ್ಳ ಬಾಂದಾರಗಳು ತುಂಬಿ ಹರಿಯುತ್ತಿದ್ದು ತಾಲ್ಲೂಕಿನ ಲೋಹಗಾಂವ ಗ್ರಾಮದ ವಿಜಯಪುರ ರಸ್ತೆಯು ಹಳ್ಳದಿಂದ ಹರಿಯುವ ನೀರಿನ ರಭಸಕ್ಕೆ ಸೇತುವೆ ಕಿತ್ತು ಹೋಗಿದೆ. ಬೆಳ್ಳಂಬೆಳಗ್ಗೆ ವಾಹನ ಸವಾರರು ತೊಂದರೆ ಅನುಭವಿಸಿದ್ದು ರಸ್ತೆ ಬಂದ್ ಆಗಿ ಸಾಲುಗಟ್ಟಲೆ ವಾಹನಗಳು ರಸ್ತೆಯುದ್ದಕ್ಕೂ ನಿಂತಿದ್ದವು.ರಸ್ತೆ ಬಂದ್ ಆಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವ ವಿಷಯ ತಿಳಿದ ಸಚಿವ ಎಂ.ಬಿ.ಪಾಟೀಲ್ ಅವರು ತಮ್ಮ ಆಪ್ತಸಹಾಯಕ ಸಂತೋಷ ಲೋಕುರೆ ಹಾಗೂ ಪಿಡಬ್ಲುಡಿ ಎಇಇ ರವಿ ಪವಾರ ಅವರನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ತಿಳಿಸಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಎಇಇ ಹಾಳಾದ ಸೇತುವೆ ಹತ್ತಿರ ತಾತ್ಕಾಲಿಕವಾಗಿ ಗರಸು ಹಾಕಿ ಜೆಸಿಬಿ ಮೂಲಕ ಮುಳ್ಳುಕಂಟಿ ತೆಗೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ತಾತ್ಕಾಲಿಕ ಪೈಪ್ ಹಾಕಿ ಕಾಮಗಾರಿ ಮಾಡಲಾಗುವದು. ಸೇತುವೆ ಹಾನಿ ಕುರಿತು ಸರ್ಕಾರಕ್ಕೆ ವರದಿ ನೀಡುತ್ತೇವೆ. ಶಾಶ್ವತ ಸೇತುವೆ ಮಂಜೂರಿಗೆ ವರದಿ ನೀಡುತ್ತೇವೆ. ಅನುದಾನ ಮಂಜೂರಾದ ನಂತರ ಶಾಶ್ವತ ಸೇತುವೆ ನಿರ್ಮಿಸಲಾಗುವದು ಎಂದು…
ವಿಜಯಪುರ: ನಗರದ ಡಾ.ಬಿ.ಆರ್. ಅಂಬೇಡ್ಕರ ಕ್ರೀಡಾಂಗಣ ಹತ್ತಿರವಿರುವ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿ ವಿಜಯಪುರ ಕಚೇರಿಯಲ್ಲಿರುವ ಹಳೆಯ ಅನುಪಯುಕ್ತ ವಸ್ತುಗಳನ್ನು ಬರುವ ಜುಲೈ ೧೧ರ ೨೦೨೪ರಂದು ಬೆಳಿಗ್ಗೆ ೧೧ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ವಿಲೇವಾರಿ ಮಾಡಲಾಗುವುದು.ಆಸಕ್ತ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ವಿಜಯಪುರ ಇವರ ಕಚೇರಿಯ ಸಮಯದಲ್ಲಿ ಭೇಟಿಯಾಗಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಬಿ.ಎಲ್.ಡಿ.ಈ ವಿಜಯಪುರ ಇವರ ಸಹಯೋಗದೊಂದಿಗೆ ಜೂ.೧೦ ರಂದು ಬೆಳಿಗ್ಗೆ ೯ ಗಂಟೆಗೆ ಟಾಟಾ ಪಾವರ ಸೋಲಾರ ಲಿ, ಬೆಂಗಳೂರು ವತಿಯಿಂದ ಐ.ಟಿ ಐ. ಪಾಸಾದಂತಹ ಹಾಗೂ ಅಂತಿಮ ವರ್ಷದ ಪರೀಕೇಗೆ ಹಾಜರಾಗುತ್ತಿರುವ, ೨೩ ವರ್ಷದೊಳಗಿನ ಅಭ್ಯರ್ಥಿಗಳಿಗೆ ಅಪ್ರೆಂಟಿಶಿಪ್‌ಗಾಗಿ ಕ್ಯಾಂಪಸ್ ಸಂದರ್ಶನವನ್ನು ಬಿ.ಎಲ್.ಡಿ.ಈ ಐ.ಟಿ.ಐ/ಪಾಲಿಟೆಕ್ನಿಕ್ ಕಾಲೇಜು ಆವರಣ, ಆಶ್ರಮ ರಸ್ತೆ ವಿಜಯಪುರದಲ್ಲಿ ಆಯೋಜಿಸಲಾಗಿದೆ.ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಎಲ್ಲಾ ಸೆಮಿಸ್ಟರಗಳ ಮೂಲಪ್ರತಿ ಹಾಗೂ ಜೆರಾಕ್ಸ ಪ್ರತಿಗಳು, ಎರಡು ಭಾವಚಿತ್ರ ಮತ್ತು ರೆಸ್ಯೂಮ್ ನೋಂದಿಗೆ ಭಾಗವಹಿಸಬೇಕು,ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೯೯೧೬೮೫೩೬೦೫-೯೯೪೫೦೦೦೭೯೩ ಗೆ ಸಂಪರ್ಕಿಸಲು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಎಸ್ ಎಸ್ ಎಲ್ ಸಿ ೨ ಪರೀಕ್ಷೆಯನ್ನು ಪಾರದರ್ಶಕ ಹಾಗೂ ನಕಲು ಮುಕ್ತವಾಗಿ ನಡೆಸಲು ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಶುಕ್ರವಾರ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯ:೨ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜೂನ್ ೧೪ ರಿಂದ ೨೨ರ ವರೆಗೆ ಜಿಲ್ಲೆಯಲ್ಲಿ ಒಟ್ಟು ೨೬ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಸುಮಾರು ೮,೦೬೦ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಕುಡಿಯುವ ಶುದ್ಧ ನೀರು, ಬೆಂಚ್, ಮಧ್ಯಾöಹ್ನ ಬಿಸಿಯೂಟ, ಸಾರಿಗೆ ವ್ಯವಸ್ಥೆ ಹಾಗೂ ವೈಧ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.ಪರೀಕ್ಷಾ ದಿನಗಳಂದು ಆಯಾ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಿರುವ ತಹಶೀಲ್ಧಾರರು, ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳು, ನರೇಗಾ ಯೋಜನೆಯ ಸಹಾಯಕ ನಿರ್ದೇಶಕರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ವಹಿಸಿಕೊಟ್ಟ ವಿಶೇಷ ವಿಚಕ್ಷಣಾ ದಳದ ಕರ್ತವ್ಯಗಳನ್ನು ತಪ್ಪದೆ ನಿರ್ವಹಿಸಬೇಕು ತಪ್ಪಿದಲ್ಲಿ ಪರೀಕ್ಷಾ ಮಂಡಳಿಯ ನಿಯಮಾನುಸಾರ ಶಿಸ್ತು…
ವಿಜಯಪುರ: ನಗರದ ಕನಕದಾಸ ಬಡಾವಣೆಯ ಹತ್ತಿರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕೀಯರ ವಸತಿ ನಿಲಯಕ್ಕೆ ಇಂದು ಜಿಲ್ಲಾಧಿಕಾರಿ ಟಿ.ಬೂಬಾಲನ್ ಭೇಟಿ ನೀಡಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.ಈ ಸಂದರ್ಭದಲ್ಲಿ ಪರಿಸರದ ಮಹತ್ವದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಜಿಲ್ಲೆಯಲ್ಲಿ ಸುಮಾರು 101 ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು ಎಲ್ಲ ವಸತಿ ನಿಲಯಗಳಲ್ಲಿ ಗಿಡ ಮರಗಳನ್ನು ಬೆಳೆಸಬೇಕು ಹಾಗೂ ಅವುಗಳನ್ನು ಸಂರಕ್ಷಿಸಬೇಕು ಗಿಡಮರಗಳು ನಮಗೆ ಉತ್ತಮ ಗಾಳಿ, ಪರಿಸರ, ನೆರಳು ಹಾಗೂ ಉತ್ತಮ ಆರೋಗ್ಯವನ್ನು ಒದಗಿಸುತ್ತವೆ ನಾವೆಲ್ಲರೂ ಗಿಡ ಮರಗಳನ್ನು ಬೆಳೆಸೋಣ ಉಳಿಸೋಣ ಎಂದು ಅವರು ಹೇಳೀದರು.ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಶೋಕ ಕಲ್ಯಾಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮೆಹಬೂಬ ತುಂಬರಮಟ್ಟಿ, ಹಾಗೂ ಇಲಾಖೆಯ ಇತರೇ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು
ದೇವರಹಿಪ್ಪರಗಿ: ಪಟ್ಟಣದ ವಿದ್ಯುತ್ ವ್ಯವಸ್ಥೆಯಲ್ಲಿ ನಿರಂತರ ನಿಲುಗಡೆಯಾಗುತ್ತಿದ್ದು, ಸಾರ್ವಜನಿಕರು ಬೇಸತ್ತಿದ್ದು, ಕೂಡಲೇ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಪಟ್ಟಣ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಸಾರ್ವಜನಿಕರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಗೂ ಬೀಗ ಹಾಕಿ ಪ್ರತಿಭಟಿಸಿದರು.ಶುಕ್ರವಾರ ಹೆಸ್ಕಾಂ ಕಚೇರಿ ಆವರಣಕ್ಕೆ ಬಂದ ಪಟ್ಟಣಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ವಿದ್ಯುತ್ ಪೂರೈಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿ ಶಾಖಾಧಿಕಾರಿ ಯು.ಎಲ್.ಪಟ್ಟಣ, ಅವರ ಜೊತೆ ವಾಗ್ವಾದಕ್ಕಿಳಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಬಶೀರ್‌ಅಹ್ಮದ್ ಬೇಪಾರಿ ಮಾತನಾಡಿ, ನಾವು ಕಳೆದ ಮೂರು ತಿಂಗಳಿಂದ ಸತತ ವಿದ್ಯುತ್ ನಿಲುಗಡೆ ಸಮಸ್ಯೆಯಿಂದ ಬಳಲುತ್ತಿದ್ದೇವೆ. ಮಾರ್ಚ ತಿಂಗಳಿಂದ ರಾತ್ರಿ ಆಗುವುದೇ ತಡ ಗಾಳಿ, ಮಳೆ ಇರದೇ ಇದ್ದರೂ ಕರೆಂಟ್ ತೆಗೆಯಲಾಗುತ್ತದೆ. ಹೆಸ್ಕಾಂ ಸಿಬ್ಬಂದಿಗೆ ಫೋನ್ ಮಾಡಿ ವಿಚಾರಿಸಿದರೆ ಮೇನ್ ಲೈನ್ ಹೋಗಿದೆ ಎಂಬ ಸಿದ್ಧ ಉತ್ತರ ಬರುತ್ತದೆ. ಈ ಮೊದಲು ಬರದ ಮೇನ್ ಲೈನ್ ಸಮಸ್ಯೆ ಈಗ ಮಾತ್ರ ಯಾಕೆ ಬರುತ್ತಿದೆ? ಎಂದು ಪ್ರಶ್ನಿಸಿ ವಿದ್ಯುತ್ ಸರಿಯಾಗಿ ನೀಡದೇ ಇರುವುದರಿಂದ ಸಣ್ಣ ಕೈಗಾರಿಕೆಗಳು…
ವಿಜಯಪುರ: ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪರ ೮೮ನೇ ಜನ್ಮ ದಿನಾಚರಣೆಯ ಅಂಗವಾಗಿ ಪ್ರೊ. ಬಿ.ಕೆ. ಸಂಘರ್ಷ ದಿನ ಎಂಬ ಘೋಷವಾಕ್ಯದೊಂದಿಗೆ ಜೂ. ೯ ರಂದು ಬೆಳಗ್ಗೆ ೧೧:೩೦ ಕ್ಕೆ ಪುರಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಪ್ರಧಾನ ಸಂಚಾಲಕರಾದ ಸಂಜು ವೈ. ಕಂಬಾಗಿ ತಿಳಿಸಿದ್ದಾರೆ.ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಶೋಷಿತ ಸಮುದಾಐಗಳ ಹೋರಾಟಗಾರ, ದಲಿತ ಚೇತನ ಬಿ. ಕೃಷ್ಣಪ್ಪ ಭದ್ರಾವತಿಯಲ್ಲಿ ಆರಂಭಮಾಡಿದ ಚಳವಳಿ, ಕರ್ನಾಟಕದ ಉದ್ದಗಲಕ್ಕೂ ವ್ಯಾಪಿಸಿ ಲಕ್ಷಾಂತರ ತಳ ಸಮುದಾಯ ಬಡವರ ವಿಮೋಚನೆಗಾಗಿ ದಸಂಸ ಹೋರಾಟ ಮಾಡುತ್ತಾ ಬಂದಿದೆ ಎಂದರು.ಕೃಷ್ಣಪ್ಪ ತಮ್ಮ ಬದುಕಿನುದ್ದಕ್ಕೂ ಸರಳ ಜೀವನ ನಡೆಸಿದ್ದಾರೆ. ರಾಜಕೀಯವಾಗಿ ಶೋಷಿತರು ಸಬಲಾಗಬೇಕೆನ್ನುವ ಕನಸು ಹೊಂದಿದ್ದರು. ಜಾತೀಯತೆ, ಅಸ್ಪೃಶ್ಯತೆ, ವರ್ಗ ಅಸಮಾನತೆಗಳ ವಿರುದ್ಧ ಹೋರಾಟ ರೂಪಿಸಿದವರು. ಇಂದು ದಲಿತ ಶೋಷಿತ ಸಮುದಾಯದವರಿಗೆ ಅಲ್ಪ-ಸ್ವಲ್ಪ ಭೂಮಿ ಸಿಕ್ಕಿದೆ ಎಂದರೆ ಅದು ಬಿ. ಕೃಷ್ಣಪ್ಪರ ಹೋರಾಟದಿಂದಲೇ ಎಂದರು.ವಿಜಯಪುರ ಜಿಲ್ಲೆಯಿಂದ ೧೦೦ ಕ್ಕೂ ಹೆಚ್ಚು ಜನ ಕಾರ್ಯಕರ್ತರು ರೇಲ್ವೆ…
ವಿಜಯಪುರ: ವಿಜಯಪುರ ನಗರದ ಮನಗೂಳಿ ಅಗಸಿ ಬಡಾವಣೆಯ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ೧೮ನೇ ದಿನ ಪೂರೈಸಿದೆ.ಗುರುವಾರ ಸಂಜೆ ಮುಖಂಡರು ರಕ್ತದಲ್ಲಿ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ನೀಡಿ ಬೇಗನೆ ಸಮಸ್ಯೆ ಇತ್ಯರ್ಥಗೊಳಿಸುವಂತೆ ಮನವಿ ಮಾಡಿಕೊಳ್ಳಲು ಹೋದಾಗ ಜಿಲ್ಲಾಧಿಕಾರಿಗಳು ಪ್ರತಿಭಟನಾ ನಿರತರ ಮನವಿ ಸ್ವೀಕರಿಸಲು ನಿರಾಕರಿಸಿದಾಗ ದಲಿತ ಮುಖಂಡರು ಜಿಲ್ಲಾಧಿಕಾರಿಗಳು ರಕ್ತದಲ್ಲಿ ಬರೆದ ಮನವಿಯನ್ನು ಸ್ವೀಕರಿಸುವಂತೆ ಪಟ್ಟು ಹಿಡಿದಾಗ ಪೊಲೀಸರು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂಧಿಗಳ ಹಾಗೂ ಧರಣಿ ನಿರತರ ಮಧ್ಯ ಕೆಲಕಾಲ ಮಾತಿನ ಚಕಮಕಿ ನಡೆಯಿತು.ಈ ಸಂದರ್ಭದಲ್ಲಿ ಮುಖಂಡ ಬಸವಕುಮಾರ ಕಾಂಬಳೆ ಅವರು ಮಾತನಾಡಿ, ಜಿಲ್ಲಾಧಿಕಾರಿಗಳು ನಮಗೆ ಎರಡು ದಿನದಲ್ಲಿ ಜಾಗವನ್ನು ಮಂಜೂರು ಮಾಡಿ ಆದೇಶ ಪತ್ರ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಅವರ ಮಾತನ್ನು ನಂಬಿ ಕಳೆದ ಆದರೆ ಈಗ ಭರವಸೆ ಹುಸಿಯಾಗಿದೆ. ಜಿಲ್ಲಾಧಿಕಾರಿಗಳು ಕಾಣದ ಕೈಗಳ ಕೈಗೊಂಬೆಯಂತೆ ವರ್ತಿಸುವ ಮೂಲಕ ದಲಿತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು…
ವಿಜಯಪುರ: ಬಿತ್ತನೆ ಬೀಜ-ರಸಗೊಬ್ಬರ ಬೆಲೆ ಇಳಿಸಲು ಒತ್ತಾಯಿಸಿ, ನಕಲಿ ಕಳಪೆ ಮಾರಾಟ ತಡೆಗಟ್ಟಲು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆಯ ಮೇರೆಗೆ ಬಿತ್ತನೆ ಬೀಜ-ರಸಗೊಬ್ಬರ ಬೆಲೆಗಳನ್ನು ಇಳಿಸಲು ಆಗ್ರಹಿಸಿ, ಕಳಪೆ ಹಾಗೂ ನಕಲಿ ಬಿತ್ತನೆ ಬೀಜ -ರಸಗೊಬ್ಬರಗಳ ಮಾರಾಟವನ್ನು ತಡೆಗಟ್ಟಲು. ಕೃತಕ ಅಭಾವ ಸೃಷ್ಟಿಸಿ ಕಾಳಸಂತೆ ಮಾರಾಟದ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ವಿಜಯಪುರ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ ಪೂಜಾರಿ ಮಾತನಾಡಿ, ಬಲವಂತದ ಸಾಲ ವಸೂಲಾತಿ ನಿಲ್ಲಬೇಕು. ಬರ ಪರಿಹಾರದ ಹಣವನ್ನು ಸಾಲಕ್ಕೆ ಕಟಾಯಿಸಿಕೊಳ್ಳಬಾರದು. ಸಾಲಕ್ಕೆ ಬರ ಪರಿಹಾರದ ಹಣ ಕಳೆದುಕೊಂಡಿರುವ ರೈತರ ಖಾತೆಗೆ ಹಣ ಮರಳಿಸಲು ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಆತ್ಮಹತ್ಯೆ ತಡೆಗಟ್ಟಬೇಕು. ಕೃಷಿ ಚಟುವಟಿಕೆಗಳಿಗೆ ಅಗತ್ಯ ಬೆಂಬಲ ಒದಗಿಸಬೇಕು ಮತ್ತು ಬೆಳೆ ವಿಮೆ ಪರಿಹಾರ ಇತ್ಯರ್ಥಕ್ಕೆ ಕ್ರಮ ವಹಿಸಬೇಕು ಎಂದು ರಾಜ್ಯ,…
