ವಿಜಯಪುರ: ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪರ ೮೮ನೇ ಜನ್ಮ ದಿನಾಚರಣೆಯ ಅಂಗವಾಗಿ ಪ್ರೊ. ಬಿ.ಕೆ. ಸಂಘರ್ಷ ದಿನ ಎಂಬ ಘೋಷವಾಕ್ಯದೊಂದಿಗೆ ಜೂ. ೯ ರಂದು ಬೆಳಗ್ಗೆ ೧೧:೩೦ ಕ್ಕೆ ಪುರಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಪ್ರಧಾನ ಸಂಚಾಲಕರಾದ ಸಂಜು ವೈ. ಕಂಬಾಗಿ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಶೋಷಿತ ಸಮುದಾಐಗಳ ಹೋರಾಟಗಾರ, ದಲಿತ ಚೇತನ ಬಿ. ಕೃಷ್ಣಪ್ಪ ಭದ್ರಾವತಿಯಲ್ಲಿ ಆರಂಭಮಾಡಿದ ಚಳವಳಿ, ಕರ್ನಾಟಕದ ಉದ್ದಗಲಕ್ಕೂ ವ್ಯಾಪಿಸಿ ಲಕ್ಷಾಂತರ ತಳ ಸಮುದಾಯ ಬಡವರ ವಿಮೋಚನೆಗಾಗಿ ದಸಂಸ ಹೋರಾಟ ಮಾಡುತ್ತಾ ಬಂದಿದೆ ಎಂದರು.
ಕೃಷ್ಣಪ್ಪ ತಮ್ಮ ಬದುಕಿನುದ್ದಕ್ಕೂ ಸರಳ ಜೀವನ ನಡೆಸಿದ್ದಾರೆ. ರಾಜಕೀಯವಾಗಿ ಶೋಷಿತರು ಸಬಲಾಗಬೇಕೆನ್ನುವ ಕನಸು ಹೊಂದಿದ್ದರು. ಜಾತೀಯತೆ, ಅಸ್ಪೃಶ್ಯತೆ, ವರ್ಗ ಅಸಮಾನತೆಗಳ ವಿರುದ್ಧ ಹೋರಾಟ ರೂಪಿಸಿದವರು. ಇಂದು ದಲಿತ ಶೋಷಿತ ಸಮುದಾಯದವರಿಗೆ ಅಲ್ಪ-ಸ್ವಲ್ಪ ಭೂಮಿ ಸಿಕ್ಕಿದೆ ಎಂದರೆ ಅದು ಬಿ. ಕೃಷ್ಣಪ್ಪರ ಹೋರಾಟದಿಂದಲೇ ಎಂದರು.
ವಿಜಯಪುರ ಜಿಲ್ಲೆಯಿಂದ ೧೦೦ ಕ್ಕೂ ಹೆಚ್ಚು ಜನ ಕಾರ್ಯಕರ್ತರು ರೇಲ್ವೆ ಮುಖಾಂತರ ಬೆಂಗಳೂರಿನ ಕಾರ್ಯಕ್ರಮಕ್ಕೆ ತೆರಳಿಲಿದ್ದಾರೆ. ಅತಿ ಹೆಚ್ಚು ಕಾರ್ಯಕರ್ತರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ ಜಾರಕಿಹೋಳಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಎಚ್.ಸಿ. ಮಹಾದೇವಪ್ಪ, ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ನ ಅಧ್ಯಕ್ಷ ಇಂದಿರಾ ಕೃಷ್ಣಪ್ಪ, ಉಪನ್ಯಾಸಕ ಡಾ. ಸಿ.ಜಿ. ಲಕ್ಷ್ಮೀಪತಿ, ದಸಂಸ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ, ದಸಂಸ ಪದಾಧಿಕಾರಿಗಳಾದ ರಮೇಶ ಡಾಕುಳುಕಿ, ಎನ್. ನಾಗರಾಜ್ ಹಾಗೂ ಉಪ ಪ್ರಧಾನ ಸಂಚಾಲಕರಾದ ನಾಗಣ್ಣ ಬಡಿಗೇರ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಸಂಜು ಕಂಬಾಗಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

