ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಬಿ.ಎಲ್.ಡಿ.ಈ ವಿಜಯಪುರ ಇವರ ಸಹಯೋಗದೊಂದಿಗೆ ಜೂ.೧೦ ರಂದು ಬೆಳಿಗ್ಗೆ ೯ ಗಂಟೆಗೆ ಟಾಟಾ ಪಾವರ ಸೋಲಾರ ಲಿ, ಬೆಂಗಳೂರು ವತಿಯಿಂದ ಐ.ಟಿ ಐ. ಪಾಸಾದಂತಹ ಹಾಗೂ ಅಂತಿಮ ವರ್ಷದ ಪರೀಕೇಗೆ ಹಾಜರಾಗುತ್ತಿರುವ, ೨೩ ವರ್ಷದೊಳಗಿನ ಅಭ್ಯರ್ಥಿಗಳಿಗೆ ಅಪ್ರೆಂಟಿಶಿಪ್‌ಗಾಗಿ ಕ್ಯಾಂಪಸ್ ಸಂದರ್ಶನವನ್ನು ಬಿ.ಎಲ್.ಡಿ.ಈ ಐ.ಟಿ.ಐ/ಪಾಲಿಟೆಕ್ನಿಕ್ ಕಾಲೇಜು ಆವರಣ, ಆಶ್ರಮ ರಸ್ತೆ ವಿಜಯಪುರದಲ್ಲಿ ಆಯೋಜಿಸಲಾಗಿದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಎಲ್ಲಾ ಸೆಮಿಸ್ಟರಗಳ ಮೂಲಪ್ರತಿ ಹಾಗೂ ಜೆರಾಕ್ಸ ಪ್ರತಿಗಳು, ಎರಡು ಭಾವಚಿತ್ರ ಮತ್ತು ರೆಸ್ಯೂಮ್ ನೋಂದಿಗೆ ಭಾಗವಹಿಸಬೇಕು,
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೯೯೧೬೮೫೩೬೦೫-೯೯೪೫೦೦೦೭೯೩ ಗೆ ಸಂಪರ್ಕಿಸಲು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
