ಸಿಂದಗಿ: ಪ್ರತಿಯೊಬ್ಬರೂ ನಿಮ್ಮ ನಿಮ್ಮ ಮನೆಯ ಮುಂದೆ, ಸಾರ್ವಜನಿಕ ಸ್ಥಳ, ಜಮೀನಿನಲ್ಲಿ ಸಸಿ ನಡುವುದರ ಮೂಲಕ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ ಹೇಳಿದರು.
ತಾಲೂಕಿನ ರಾಂಪೂರ ಪಿಎ ಗ್ರಾಮದ ವ್ಯಾಪ್ತಿಯ ನರೇಗಾ ಅಡಿಯಲ್ಲಿ ನಿರ್ಮಾಣವಾದ ಅಮೃತ ಸರೋವರ ದಡದಲ್ಲಿ ಹಮ್ಮಿಕೊಂಡ ಸಸಿ ನಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ಅಮೃತ ಸರೋವರದಲ್ಲಿ ೧೦೦ಕ್ಕೂ ಅಧಿಕ ಸಸಿಗಳನ್ನು ನಡುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ದಸ್ತಗೀರಸಾಬ್ ನದಾಫ್, ಐಇಸಿ ಸಂಯೋಜಕರು ಭೀಮರಾಯ ಚೌಧರಿ, ಕಾರ್ಯದರ್ಶಿ ಬಸವರಾಜ್ ಪಟ್ಟಣಶೆಟ್ಟಿ, ಸಂಪತ್, ನಾಗು ವಾಲೀಕಾರ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಮತ್ತು ಸಿಬ್ಬಂದಿಗಳು ನರೇಗಾ ಕೂಲಿಕಾರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

