ದೇವರಹಿಪ್ಪರಗಿ: ಪಟ್ಟಣದ ವಿದ್ಯುತ್ ವ್ಯವಸ್ಥೆಯಲ್ಲಿ ನಿರಂತರ ನಿಲುಗಡೆಯಾಗುತ್ತಿದ್ದು, ಸಾರ್ವಜನಿಕರು ಬೇಸತ್ತಿದ್ದು, ಕೂಡಲೇ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಪಟ್ಟಣ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಸಾರ್ವಜನಿಕರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಗೂ ಬೀಗ ಹಾಕಿ ಪ್ರತಿಭಟಿಸಿದರು.
ಶುಕ್ರವಾರ ಹೆಸ್ಕಾಂ ಕಚೇರಿ ಆವರಣಕ್ಕೆ ಬಂದ ಪಟ್ಟಣಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ವಿದ್ಯುತ್ ಪೂರೈಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿ ಶಾಖಾಧಿಕಾರಿ ಯು.ಎಲ್.ಪಟ್ಟಣ, ಅವರ ಜೊತೆ ವಾಗ್ವಾದಕ್ಕಿಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಬಶೀರ್‌ಅಹ್ಮದ್ ಬೇಪಾರಿ ಮಾತನಾಡಿ, ನಾವು ಕಳೆದ ಮೂರು ತಿಂಗಳಿಂದ ಸತತ ವಿದ್ಯುತ್ ನಿಲುಗಡೆ ಸಮಸ್ಯೆಯಿಂದ ಬಳಲುತ್ತಿದ್ದೇವೆ. ಮಾರ್ಚ ತಿಂಗಳಿಂದ ರಾತ್ರಿ ಆಗುವುದೇ ತಡ ಗಾಳಿ, ಮಳೆ ಇರದೇ ಇದ್ದರೂ ಕರೆಂಟ್ ತೆಗೆಯಲಾಗುತ್ತದೆ. ಹೆಸ್ಕಾಂ ಸಿಬ್ಬಂದಿಗೆ ಫೋನ್ ಮಾಡಿ ವಿಚಾರಿಸಿದರೆ ಮೇನ್ ಲೈನ್ ಹೋಗಿದೆ ಎಂಬ ಸಿದ್ಧ ಉತ್ತರ ಬರುತ್ತದೆ. ಈ ಮೊದಲು ಬರದ ಮೇನ್ ಲೈನ್ ಸಮಸ್ಯೆ ಈಗ ಮಾತ್ರ ಯಾಕೆ ಬರುತ್ತಿದೆ? ಎಂದು ಪ್ರಶ್ನಿಸಿ ವಿದ್ಯುತ್ ಸರಿಯಾಗಿ ನೀಡದೇ ಇರುವುದರಿಂದ ಸಣ್ಣ ಕೈಗಾರಿಕೆಗಳು ಕಾರ್ಯ ನಿರ್ವಹಿಸದಂತಾಗಿದೆ. ಜೊತೆಗೆ ಸಾರ್ವಜನಿಕ ಜೀವನಕ್ಕೆ ಸಾಕಷ್ಟು ಕಿರಿಕಿರಿಯಾಗುತ್ತಿದೆ. ಕೂಡಲೇ ಅಗತ್ಯ ಕ್ರಮ ಕೈಗೊಂಡು ನಿರಂತರ ವಿದ್ಯುತ್ ಒದಗಿಸಲು ಆಗ್ರಹಿಸಿದರು.
ಶಾಖಾಧಿಕಾರಿ ಯು.ಎಲ್.ಪಟ್ಟಣ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಸಿಬ್ಬಂದಿಯ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಒಂದು ವಾರದಲ್ಲಿ ಯಥಾ ಪ್ರಕಾರ ವಿದ್ಯುತ್ ಪೂರೈಸಲಾಗುವುದು ಎಂದು ಸಮಜಾಯಿಷಿ ನೀಡಿದರೂ ಕೇಳದ ಸಾರ್ವನಿಕರು ಎಇಇ ಅವರು ಬಂದು ಉತ್ತರಿಸುವಂತೆ ಪಟ್ಟು ಹಿಡಿದರು.
ಕೊನೆಗೆ ಶಾಖಾಧಿಕಾರಿ ವಿದ್ಯುತ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದಾಗ, ಪ್ರತಿಭಟನಾಕಾರರು ೨೦ ದಿನಗಳ ಒಳಗಾಗಿ ವಿದ್ಯುತ್ ಸಮರ್ಪಕವಾಗಿ ಪೂರೈಸಬೇಕು ಇಲ್ಲವಾದಲ್ಲಿ ಮತ್ತೇ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು ನಂತರ ಪ್ರತಿಭಟನೆ ಕೊನೆಗೊಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ರಮೇಶ ಮಸಬಿನಾಳ, ಕಾಶೀನಾಥ ಬಜಂತ್ರಿ, ಸಿಂಧೂರ ಡಾಲೇರ, ಸೇರಿದಂತೆ ಸೋಮು ದೇವೂರ, ಮುದುಕಪ್ಪ ದಾನಗೊಂಡ, ಕಾಶೀನಾಥ ಕೋರಿ, ಸಂಗು ಯಂಭತ್ನಾಳ, ಗುರು ರೂಗಿ, ಸುರೇಶ ಕೊಣ್ಣೂರ, ಸಂಗಮೇಶ ನಂದ್ಯಾಳ, ಕಾಶೀನಾಥ ಕಡ್ಲೇವಾಡ, ಹುಸೇನ್ ಬಿಜಾಪೂರ, ಬಸವರಾಜ ಅತನೂರ, ಅಬ್ದುಲ್ ರಜಾಕ್ ಮಂಡೆ, ಎಮ್.ಎಮ್.ವಗ್ಗರ, ಇಮ್ತಿಯಾಜ್ ಮುಲ್ಲಾ, ಜೆ.ಆಯ್.ಮಿಂಚನಾಳ, ನಾಗರಾಜ್ ಜಮಾದಾರ, ರಾಜು ಮೆಟಗಾರ, ಬಸವರಾಜ ಕುರುಬತಹಳ್ಳಿ, ಕಾಶೀನಾಥ ಅಗಸರ ಇದ್ದರು.
Subscribe to Updates
Get the latest creative news from FooBar about art, design and business.
ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ
Related Posts
Add A Comment

