Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ಪಟ್ಟಣದ ಹುಡಕೋ ಬಡಾವಣೆಯ ಚಿನ್ಮಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರಿಯಾಂಕ ರಾಠೋಡ ಮತ್ತು ರುದ್ರೇಶ ಕಿತ್ತೂರ ವಿದ್ಯಾರ್ಥಿಗಳನ್ನ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಶಾಲೆಯ ಅಧ್ಯಕ್ಷ ರವಿ ತಡಸದ, ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ, ಡಾ.ವಿರೇಶ ಪಾಟೀಲ, ಶ್ರೀನಿವಾಸ ಇಲ್ಲೂರ ಸೇರಿದಂತೆ ಮತ್ತೀತರರು ಇದ್ದರು.
ಸಿಂದಗಿ: ಮಕ್ಕಳಲ್ಲಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಲಿಂಗ ಅಸಮಾನತೆ ಹೋಗಲಾಡಿಸಲೂ ಮತ್ತು ಕ್ರಿಯಾಶೀಲವಾಗಿರಲೂ ಸಹಕಾರಿಯಾಗುವುದು ಎಂದು ತಾಪಂ ಇಒ ರಾಮು ಅಗ್ನಿ ಹೇಳಿದರು.ತಾಲೂಕಿನ ಬ್ಯಾಕೋಡ ಗ್ರಾಪಂಯ ಗ್ರಂಥಾಲಯದಲ್ಲಿ ಹಮ್ಮಿಕೊಂಡ ಅಂತರ ರಾಷ್ಟ್ರೀಯ ಆಟದ ದಿನ ಮಕ್ಕಳ ಜೊತೆಗೆ ಕೇರಂ ಆಡುವ ಮೂಲಕ ತಾಪಂ ಇಒ ರಾಮು ಅಗ್ನಿ ಚಾಲನೆ ನೀಡಿ ಮಕ್ಕಳೊಂದಿಗೆ ಚೆಸ್, ಮತ್ತು ಕೇರಂ ಆಟವನ್ನಾಡಿ ಮಕ್ಕಳೊಂದಿಗೆ ಹರ್ಷ ವ್ಯಕ್ತಪಡಿಸಿದರು.ನಂತರ ಶಾಲಾ ಆವರಣದಲ್ಲಿ ಖೋಖೋ, ಕಬಡ್ಡಿ ಆಡಿ ಮಕ್ಕಳು ಕೂಡ ಸೋಲು ಗೆಲುವಿನೊಂದಿಗೆ ಸಂಭ್ರಮಿಸಿದರು.ಇದೇ ಸಂದರ್ಭದಲ್ಲಿ ಗ್ರಾಪಂ ಪಿಡಿಒ ಅಣ್ಣರಾಯ ರೂಗಿ, ಕಾರ್ಯದರ್ಶಿ ರಮೇಶ ಚಟ್ಟರಕಿ, ನರೇಗಾ ಐಇಸಿ ಸಂಯೋಜಕರು ಭೀಮರಾಯ ಚೌಧರಿ, ಗ್ರಂಥಾಲಯ ಮೇಲ್ವಿಚಾರಕ ಶಂಕರ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಿಂದಗಿ: ಜೂ.೧೨ ರಂದು ಬೆಳಗ್ಗೆ ೧೦ ಗಂಟೆಗೆ ಕನಕದಾಸ ವೃತ್ತದಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಪುತ್ಥಳಿಗಳು ಆಗಮಿಸಲಿದ್ದು, ಕನಕದಾಸ ವೃತ್ತದಿಂದ ಅರ್ಥಪೂರ್ಣವಾಗಿ ಮೆರವಣಿಗೆ ಮಾಡುವ ಮೂಲಕ ಸ್ವಾಮಿ ವಿವೇಕಾನಂದ ವೃತ್ತಕ್ಕೆ ಆಗಮಿಸಿ ಅಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿಯನ್ನು ನಿಲ್ಲಿಸಲಾಗುವುದು. ಮತ್ತು ಎಚ್.ಜಿ.ಕಾಲೇಜು ಮಾರ್ಗವಾಗಿ ಶ್ರೀ ಬಸವೇಶ್ವರ ವೃತ್ತ, ಕನ್ನಡಾಂಬೆ ವೃತ್ತದ ಮಾರ್ಗವಾಗಿ ಚೆನ್ನಮ್ಮ ವೃತ್ತದಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮಳ ಪುತ್ಥಳಿಯನ್ನು ನಿಲ್ಲಿಸಲಾಗುವುದು. ಈ ಮೆರವಣಿಗೆಯಲ್ಲಿ ಹರ ಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ. ಕಾರಣ ಈ ಎರಡು ಪುತ್ಥಳಿಗಳ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಂದಗಿ ಮತ್ತು ಸುತ್ತಮುತ್ತಲಿನ ನಾಗರಿಕರು, ಹಿರಿಯರು, ರಾಜಕೀಯ ಮುಖಂಡರು ಭಾಗವಹಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ತಿಳಸಿದ್ದಾರೆ.
ಮುದ್ದೇಬಿಹಾಳ: ಯುವಕನೋರ್ವನಿಗೆ ಕಬ್ಬಿಣದ ರಾಡ್ ನಿಂದ ಮನಸೋ ಇಚ್ಛೆ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪಟ್ಟಣದ ನ್ಯಾಯಾಲಯದ ಎದುರು ಮಂಗಳವಾರ ಮಧ್ಯಾಹ್ನ ನಡೆದಿದೆ.ಕಾನೂನು ನೆರವಿಗೆ ನ್ಯಾಯಾಲಯಕ್ಕೆ ವಕೀಲರ ಭೇಟಿಗಾಗಿ ಆಗಮಿಸಿದ್ದ ತಾಲೂಕಿನ ಯರಝರಿ ಗ್ರಾಮದ ಯುವಕ ಸಂತೋಷ ಕಾಡಮೆಗೇರಿ ಹಲ್ಲೆಗೊಳಗಾಗ ಯುವಕ. ಇಲ್ಲಿನ ನ್ಯಾಯಾಲಯದ ಎದುರು ಟೀ ಕುಡಿಯುತ್ತ ಕುಳಿತ ಈತನ ಮೇಲೆ ನಾಲ್ಕೈದು ಜನರ ತಂಡ ಏಕಾಏಕಿ ದಾಳಿ ನಡೆಸಿ ಟ್ರ್ಯಾಕ್ಟರ್ ಗೆ ಸಂಬಂಧಿಸಿದ ದಪ್ಪನೆಯ ಕಬ್ಬಿಣದ ರಾಡ್‌ನಿಂದ ಹೊಡೆಯಲು ಆರಂಭಿಸಿದ್ದಾರೆ. ಸ್ಥಳದಲ್ಲಿದ್ದ ವಕೀಲರು, ಸಾರ್ವಜನಿಕರು ಬಿಡಿಸಲು ಮುಂದಾದರೂ ಬಿಡದೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಇನ್ನೇನು ಕೊಲೆ ಮಾಡುತ್ತಾರೆ ಅನ್ನುವಷ್ಟರಲ್ಲಿ ಘಟನಾಸ್ಥಳದಲ್ಲಿ ಕೆಲವರು ಧರ್ಮದೇಟು ನೀಡಿ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ರಾಡ್ ಒಗೆದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.ಘಟನೆಗೆ ಹಿನ್ನೆಲೆ ತಿಳಿದು ಬಂದಿಲ್ಲ. ಗಾಯಾಳು ಸ್ಥಳೀಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಸಿಂದಗಿ: ದೇವರ ಹಿಪ್ಪರಗಿ ತಾಲೂಕಿನ ಹರನಾಳ ಗ್ರಾಪಂ ವ್ಯಾಪ್ತಿಯ ಇಂಗಳಗಿ ಪಿಎ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ಮಾರಟಗಾರರ ಮೇಲೆ ಸಂಬಂಧಿಸಿ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಿಂದಗಿ ತಾಲೂಕು ಭಾರತೀಯ ದಲಿತ ಪ್ಯಾಂಥರ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ರತ್ನಾಕರ ಆಗ್ರಹಿಸಿದರು.ಪಟ್ಟಣದ ಅಬಕಾರಿ ಇಲಾಖೆಯ ಕಛೇರಿ ಮುಂಭಾಗದಲ್ಲಿ ಅಕ್ರಮ ಸಾರಾಯಿ ಮಾರಟಗಾರರ ವಿರುದ್ದ ಘೋಷಣೆ ಕೂಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಮಧ್ಯ ಮಾರಾಟ ಇಂಗಳಗಿ ಪಿಎ ಗ್ರಾಮದಲ್ಲಿ ಸುಮಾರ ವರ್ಷಗಳಿಂದ ಮನೆ, ಕಿರಾಣಿ ಅಂಗಡಿ, ಪಾನ್ ಶಾಪ್‌ಗಳಲ್ಲಿ ರಾಜಾರೋಷವಾಗಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದರು ಸಂಬAಧಿಸಿ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಈಗಾಗಲೇ ಈ ವಿಷಯದ ಕುರಿತಾಗಿ ಅಬಕಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ಮಾರಾಟಗಾರರ ಮೇಲೆ ಸೂಕ್ತ ಕ್ರಮಗೈಗೊಳ್ಳಬೇಕು. ತಡೆಗಟ್ಟದೇ ಹೊದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಗ್ರಾಮದ ಮಹಿಳೆಯರೆಲ್ಲರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ…
ಮುದ್ದೇಬಿಹಾಳ: ಮಧ್ಯ ಮಾರಾಟದ ವಿರುದ್ಧ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ತಾಲೂಕಿನ ಆಲೂರ-ಕೇಸಾಪೂರ ಗ್ರಾಮಗಳ ನಿವಾಸಿಗಳು ಸೋಮುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.ಈ ವೇಳೆ ಶಿಕ್ಷಕ ವಾಯ್.ಬಿ.ತಳವಾರ ಮಾತನಾಡಿ, ಸಾರಾಯಿ ದುಶ್ಚಟಕ್ಕೆ ಇಂದಿನ ಯುವ ಪೀಳಿಗೆ ಹಾಳಾಗುತ್ತಿದೆ. ಆ ನಿಟ್ಟಿನಲ್ಲಿ ನಮ್ಮ ಗ್ರಾಮವನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ನಾವೆಲ್ಲರು ಸೇರಿ ಸಂಕಲ್ಪ ತೊಟ್ಟಿದ್ದೇವೆ. ಸಾರಾಯಿ ಮಾರಾಟದ ವಿರುದ್ದ ಸಮರ ಸಾರಿದ್ದೇವೆ. ಇವತ್ತಿಗೆ ಸಾರಾಯಿ ಮಾರಾಟ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾದ ಹೋರಾಟ ಮಾಡಲು ನಾವೆಲ್ಲರು ಸಿದ್ದರಿದ್ದೇವೆ ಎಂದರು.ಈ ವೇಳೆ ಮಾತನಾಡಿದ ನಿವಾಸಿಗಳು ದುಡಿದು ಮನೆ ಸಾಗಿಸಬೇಕಾದ ಸಾಕಷ್ಟು ಜನ ಸಾರಾಯಿ ಚಟಕ್ಕೆ ಅಂಟಿಕೊಂಡು ಹಾಳಾಗುತ್ತಿದ್ದಾರೆ. ಗ್ರಾಮದಲ್ಲಿ ಬಹುತೇಕ ಅಂಗಡಿಗಳಲ್ಲಿ ಖುಲ್ಲಂ ಖುಲ್ಲಾ ಸಾರಾಯಿ ಲಭ್ಯವಾಗುತ್ತದೆ. ನಿಯಂತ್ರಿಸಬೇಕಾದ ಅಧಿಕಾರಿಗಳು ಎಂಥವರೆಂದು ನಾವು ಇನ್ನು ನೋಡಿಲ್ಲ. ವ್ಯವಸ್ಥೆ ಹೀಗೆ ಮುಂದು ವರೆಗೆದರೆ ಬಹಳಷ್ಟ ಕುಟುಂಬಗಳು ಬೀದಿಗೆ ಬರುತ್ತವೆ. ಸಾರಾಯಿ ಚಟಕ್ಕಾಗಿ ಸಾಲ ಮಾಡುವುದು, ಮಹಿಳೆಯರ ಮೇಲೆ ದೌರ್ಜನ್ಯ ಮಾಡುತ್ತಿರುವ ಘಟನೆಗಳು ಹೆಚ್ಚಾಗಿವೆ. ನಮ್ಮ…
ದೇವರಹಿಪ್ಪರಗಿ: ಎರಡು ದಿನಗಳ ಕಾಲ ಸುರಿದ ಮಳೆಯಿಂದಾಗಿ ಕೊಟ್ಟಿಗೆಯ ಗೋಡೆ ಕುಸಿದು ಎರಡು ಎಮ್ಮೆಕರುಗಳು ಸಾವಿಗೀಡಾದ ಘಟನೆ ಪಟ್ಟಣದಲ್ಲಿ ಜರುಗಿದೆ.ಪಟ್ಟಣದ ಬಸಪ್ಪ ಕೋಟಿನ್ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆ ಭಾನುವಾರ ರಾತ್ರಿ ಸುರಿದ ಮಳೆಗೆ ಕುಸಿದಿದ್ದು, ಗೋಡೆಯ ಹತ್ತಿರದಲ್ಲಿ ಕಟ್ಟಿದ ಅಂದಾಜು ೨೫ ಸಾವಿರ ಮೌಲ್ಯದ ಎರಡು ಎಮ್ಮೆ ಕರುಗಳು ಗೋಡೆಯಡಿ ಸಿಕ್ಕು ಸಾವಿಗೀಡಾಗಿವೆ. ಘಟನೆಯ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಕಳೆದ ೨ ದಿನಗಳ ರಾತ್ರಿ ಸತತವಾಗಿ ಸುರಿದ ಮಳೆಯಿಂದ ಹಲವು ಮನೆ ಹಾಗೂ ಅಂಗಡಿ ಗೋಡೆಗಳ ಕುಸಿತದ ಪ್ರಕರಣಗಳು ಜರುಗಿವೆ. ಜೊತೆಗೆ ರೈತರ ಜಮೀನಿನ ಒಡ್ಡುಗಳು ಒಡೆದು ಎಲ್ಲೆಂದರಲ್ಲಿ ಕಂದಕಗಳು ನಿರ್ಮಾಣವಾಗಿವೆ.
ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯದಲ್ಲಿ ಜು. ೧೩ ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ದಲ್ಲಿ ರಾಜಿ ಸಂಧಾನಕ್ಕೆ ಸಿದ್ದರಿರುವವರು ರಾಜಿ ಸಂಧಾನ ಮಾಡಿಕೊಳ್ಳಬಹುದು ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶೆ ತಯ್ಯಾಬ್ ಸುಲ್ತಾನ ಹೇಳಿದರು.ಪಟ್ಟಣದ ನ್ಯಾಯಾಲಯದಲ್ಲಿ ಸೋಮವಾರ ಸಂಜೆ ಲೋಕ ಅದಾಲತ್ ಕುರಿತು ಮಾಹಿತಿ ನೀಡಲು ವಿವಿಧ ಇಲಾಖೆಯ ಅಧಿಕಾರಿಗಳ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ರಾಜಿ ಸಂಧಾನದ ಮೂಲಕ ರಾಜಿಯಾಗುವಂತಹ ಎಲ್ಲ ರೀತಿಯ ಪ್ರಕರಣಗಳನ್ನು ಹಾಗೂ ವ್ಯಾಜ್ಯಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗುತ್ತಿದ್ದು. ಕಕ್ಷಿದಾರರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಕ್ಷುಲ್ಲಕ ಪ್ರಕರಣ, ಎನ್ಐ ಆಕ್ಟ್, ಎಂವ್ಹಿಸಿ, ಇಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅಗತ್ಯವಾದ ನೆರವು ನೀಡಲು ತಾಲೂಕು ಕಾನೂನು ಸೇವಾ ಸಮಿತಿ ಸಿದ್ದವಿದೆ. ಅಗತ್ಯವಿರುವವರು ಉಚಿತವಾಗಿ ಕಾನೂನು ಸೇವೆ ಪಡೆದುಕೊಳ್ಳಬಹುದು ಎಂದರು.ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶೆ ಸೌಮ್ಯ ಹೂಲಿ ಮಾತನಾಡಿ, ಕಕ್ಷಿದಾರರು-ವಕೀಲರ ಒಪ್ಪಿಗೆ…
ಬಸವನಬಾಗೇವಾಡಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಈರಕಾರ ಮುತ್ಯಾ ದೇವಸ್ಥಾನದ ಈರಕಾರ ಮುತ್ಯಾರ ಜಡಿ ತೊಳೆಯುವ ಕಾರ್ಯಕ್ರಮ ಹಾಗೂ ಜಾತ್ರಾಮಹೋತ್ಸವ ಭಾನುವಾರ, ಸೋಮವಾರ ಎರಡು ದಿನಗಳ ಕಾಲ ಸಂಭ್ರಮ, ಸಡಗರದಿಂದ ಜರುಗಿತು.ಜಾತ್ರಾಮಹೋತ್ಸವದಂಗವಾಗಿ ಭಾನುವಾರ ಡೊಳ್ಳುವಾದ್ಯಗಳ ಮೇಳಗಳೊಂದಿಗೆ ಪಲ್ಲಕ್ಕಿಯು ಶಿವಪ್ಪ ಈರಕಾರ ಮುತ್ಯಾರ ದೇವರಮನಿಯಿಂದ ಪಟ್ಟಣದ ಪ್ರಮುಖ ಬೀದಿಗಳ ಮೆರವಣಿಗೆ ಮೂಲಕ ಬಸವೇಶ್ವರರ ದೇವಸ್ಥಾನದ ಬಸವ ತೀರ್ಥ ಬಾವಿಗೆ ತೆರಳಿ ಗಂಗಸ್ಥಳ ಪೂಜೆ ನೆರವೇರಿಸಲಾಯಿತು. ನಂತರ ಮೂಲನಂದೀಶ್ವರ(ಬಸವೇಶ್ವರರ) ದೇವರ ದರ್ಶನ ಪಡೆದುಕೊಂಡ ನಂತರ ಪಲ್ಲಕ್ಕಿ ಉತ್ಸವ ಡೊಳ್ಳಿನ ವಾದ್ಯಮೇಳದೊಂದಿಗೆ ಬಸವೇಶ್ವರರ ಭಾವಚಿತ್ರದೊಂದಿಗೆ ಈರಕಾರ ಮುತ್ಯಾರ ದೇವಸ್ಥಾನಕ್ಕೆ ಸಂಜೆ ತಲುಪಿತು. ಭಾನುವಾರ ರಾತ್ರಿ ಇಡೀ ಸುಪ್ರಸಿದ್ದ ಡೊಳ್ಳಿನ ಹಾಡಕಿ ಕಾರ್ಯಕ್ರಮ ಜರುಗಿದವು.ಪಟ್ಟಣದ ಶಿವಪ್ಪ ಮುತ್ಯಾರ ದೇವರಮನಿಯಿಂದ ಸೋಮವಾರ ಸಂಪ್ರದಾಯದಂತೆ ಶಿವಾನಂದ ಈರಕಾರ ಮುತ್ಯಾರನ್ನು ಡೊಳ್ಳಿನ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಈರಕಾರ ಮುತ್ಯಾರ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಶಿವಾನಂದ ಈರಕಾರ ಮುತ್ಯಾ ಅವರು ಈ ವರ್ಷದ ಮಳೆ-ಬೆಳೆ ಕುರಿತಾಗಿ ಹೇಳಿಕೆಗಳನ್ನು ನುಡಿದರು.ಶಿವಾನಂದ ಈರಕಾರ…
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಲಕ್ಷ್ಮಣ ಕಲ್ಲಪ್ಪ ಹಡಪದ ಅವರು ದೆಹಲಿಯಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪಟ್ಟಣದ ಮಾರುತಿ ದೇವಸ್ಥಾನದಿಂದ ರಾಮೇಶ್ವರ ದೇವಸ್ಥಾನದವರೆಗೂ ದೀಡ್ ನಮಸ್ಕಾರ ಹಾಕಿ ತಮ್ಮ ದೀಡ್ ನಮಸ್ಕಾರ ಹರಕೆಯನ್ನು ಭಾನುವಾರ ರಾತ್ರಿ ತೀರಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸಿಹಿ ಹಂಚಿ ಜಯ ಘೋಷ ಹಾಕಿ ಸಂಭ್ರಮಿಸಿದರು.ಲಕ್ಷ್ಮಣ ಹಡಪದ ಅವರನ್ನು ಮಾತನಾಡಿಸಿದಾಗ ಲೋಕಸಭಾ ಚುನಾವಣೆಯ ಫಲಿತಾಂಶ ಏರು-ಪೇರು ನಡೆಯುತ್ತಿರುವಾಗ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯಾಗಲಿ ಎಂದು ದೇವರಲ್ಲಿ ದೀಡ್ ನಮಸ್ಕಾರ ಹಾಕುವದಾಗಿ ಹರಕೆ ಮಾಡಿಕೊಂಡೆ. ಈಗ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ನನ್ನ ಸಂಕಲ್ಪ ಈಡೇರಿದೆ. ಬಿಜೆಪಿ ಮುಖಂಡರೊಂದಿಗೆ, ಕಾರ್ಯಕರ್ತರೊಂದಿಗೆ ಸೇರಿಕೊಂಡು ನನ್ನ ಹರಕೆ ತೀರಿಸಿದೆ ಎಂದರು.ಈ ಸಂದರ್ಭದಲ್ಲಿ ರೇವಣಸಿದ್ದ ಮಣ್ಣೂರ, ಹಣಮಂತ ಬದ್ನೂರ, ಮಾಳು ನಾಗರಾಳ, ಸಿದ್ರಾಯ ಕವಟೇಕರ, ಸುಭಾ ಲೇಸಪ್ಪಗೋಳ, ಪುಟ್ಟು ತೇಲಿ,…
