ಬಸವನಬಾಗೇವಾಡಿ: ಪಟ್ಟಣದ ನ್ಯಾಯಾಲಯದಲ್ಲಿ ಜು. ೧೩ ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ದಲ್ಲಿ ರಾಜಿ ಸಂಧಾನಕ್ಕೆ ಸಿದ್ದರಿರುವವರು ರಾಜಿ ಸಂಧಾನ ಮಾಡಿಕೊಳ್ಳಬಹುದು ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶೆ ತಯ್ಯಾಬ್ ಸುಲ್ತಾನ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ಸೋಮವಾರ ಸಂಜೆ ಲೋಕ ಅದಾಲತ್ ಕುರಿತು ಮಾಹಿತಿ ನೀಡಲು ವಿವಿಧ ಇಲಾಖೆಯ ಅಧಿಕಾರಿಗಳ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ರಾಜಿ ಸಂಧಾನದ ಮೂಲಕ ರಾಜಿಯಾಗುವಂತಹ ಎಲ್ಲ ರೀತಿಯ ಪ್ರಕರಣಗಳನ್ನು ಹಾಗೂ ವ್ಯಾಜ್ಯಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗುತ್ತಿದ್ದು. ಕಕ್ಷಿದಾರರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಕ್ಷುಲ್ಲಕ ಪ್ರಕರಣ, ಎನ್ಐ ಆಕ್ಟ್, ಎಂವ್ಹಿಸಿ, ಇಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅಗತ್ಯವಾದ ನೆರವು ನೀಡಲು ತಾಲೂಕು ಕಾನೂನು ಸೇವಾ ಸಮಿತಿ ಸಿದ್ದವಿದೆ. ಅಗತ್ಯವಿರುವವರು ಉಚಿತವಾಗಿ ಕಾನೂನು ಸೇವೆ ಪಡೆದುಕೊಳ್ಳಬಹುದು ಎಂದರು.
ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶೆ ಸೌಮ್ಯ ಹೂಲಿ ಮಾತನಾಡಿ, ಕಕ್ಷಿದಾರರು-ವಕೀಲರ ಒಪ್ಪಿಗೆ ಮೇರೆಗೆ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಲಾಗುತ್ತದೆ. ಇಲ್ಲಿ ಇತ್ಯರ್ಥ ಪಡಿಸಲಾಗುವ ಪ್ರಕರಣಗಳನ್ನು ಸಂಪೂರ್ಣವಾಗಿ ಇತ್ಯರ್ಥಗೊಂಡು ಉಭಯ ವ್ಯಕ್ತಿಗಳಿಗೆ ನ್ಯಾಯ ದೊರೆಯುತ್ತದೆ ಎಂದರು.
ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ಬಸವನಬಾಗೇವಾಡಿ, ಕೊಲ್ಹಾರ, ಮನಗೂಳಿ, ನಿಡಗುಂದಿ, ಕೂಡಗಿ ಪೊಲೀಸ್ ಠಾಣೆಯ ಅಧಿಕಾರಿಗಳಾದ ಎಂ.ಎಸ್.ತಳವಾರ, ಎಸ್.ಜಿ.ರಾಠೋಡ, ಶಿವರಾಜ ಧರೆಗೋಣ, ಯತೀಶ ಕೆ.ಎನ್., ಎಂ.ಎಸ್.ಮನಹಳ್ಳಿ, ತಹಸೀಲ್ದಾರ ಕಚೇರಿಯ ಗುರುರಾಜ ಗಡಗಿ, ಲೋಕೋಪಯೋಗಿ ಇಲಾಖೆಯ ಸಿ.ಐ.ಬಡಿಗೇರ, ತಾಲೂಕು ಪಂಚಾಯಿತಿಯ ಆರ್.ಪಿ.ಪಾಟೀಲ, ಪುರಸಭೆಯ ರಾಜು ರಾಠೋಡ, ರಾಜು ಸಾಸನೂರ, ಸಿಪಿಡಿಓ ಇಲಾಖೆಯ ಬಸವರಾಜ ನಿಲುಗಲ್ಲ, ನ್ಯಾಯಾಲಯ ಸಿಬ್ಬಂದಿಗಳಾದ ಮಹೇಶ ಕೆ.ಎಸ್, ಶಿವಾನಂದ ಭಜಂತ್ರಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

