ಮುದ್ದೇಬಿಹಾಳ: ಮಧ್ಯ ಮಾರಾಟದ ವಿರುದ್ಧ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ತಾಲೂಕಿನ ಆಲೂರ-ಕೇಸಾಪೂರ ಗ್ರಾಮಗಳ ನಿವಾಸಿಗಳು ಸೋಮುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಶಿಕ್ಷಕ ವಾಯ್.ಬಿ.ತಳವಾರ ಮಾತನಾಡಿ, ಸಾರಾಯಿ ದುಶ್ಚಟಕ್ಕೆ ಇಂದಿನ ಯುವ ಪೀಳಿಗೆ ಹಾಳಾಗುತ್ತಿದೆ. ಆ ನಿಟ್ಟಿನಲ್ಲಿ ನಮ್ಮ ಗ್ರಾಮವನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ನಾವೆಲ್ಲರು ಸೇರಿ ಸಂಕಲ್ಪ ತೊಟ್ಟಿದ್ದೇವೆ. ಸಾರಾಯಿ ಮಾರಾಟದ ವಿರುದ್ದ ಸಮರ ಸಾರಿದ್ದೇವೆ. ಇವತ್ತಿಗೆ ಸಾರಾಯಿ ಮಾರಾಟ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾದ ಹೋರಾಟ ಮಾಡಲು ನಾವೆಲ್ಲರು ಸಿದ್ದರಿದ್ದೇವೆ ಎಂದರು.
ಈ ವೇಳೆ ಮಾತನಾಡಿದ ನಿವಾಸಿಗಳು ದುಡಿದು ಮನೆ ಸಾಗಿಸಬೇಕಾದ ಸಾಕಷ್ಟು ಜನ ಸಾರಾಯಿ ಚಟಕ್ಕೆ ಅಂಟಿಕೊಂಡು ಹಾಳಾಗುತ್ತಿದ್ದಾರೆ. ಗ್ರಾಮದಲ್ಲಿ ಬಹುತೇಕ ಅಂಗಡಿಗಳಲ್ಲಿ ಖುಲ್ಲಂ ಖುಲ್ಲಾ ಸಾರಾಯಿ ಲಭ್ಯವಾಗುತ್ತದೆ. ನಿಯಂತ್ರಿಸಬೇಕಾದ ಅಧಿಕಾರಿಗಳು ಎಂಥವರೆಂದು ನಾವು ಇನ್ನು ನೋಡಿಲ್ಲ. ವ್ಯವಸ್ಥೆ ಹೀಗೆ ಮುಂದು ವರೆಗೆದರೆ ಬಹಳಷ್ಟ ಕುಟುಂಬಗಳು ಬೀದಿಗೆ ಬರುತ್ತವೆ. ಸಾರಾಯಿ ಚಟಕ್ಕಾಗಿ ಸಾಲ ಮಾಡುವುದು, ಮಹಿಳೆಯರ ಮೇಲೆ ದೌರ್ಜನ್ಯ ಮಾಡುತ್ತಿರುವ ಘಟನೆಗಳು ಹೆಚ್ಚಾಗಿವೆ. ನಮ್ಮ ಕುಟುಂಬವನ್ನು ಉಳಿಸಿಕೊಳ್ಳಲು ನಾವೆಲ್ಲ ಆಲೂರ ಮತ್ತು ಕೇಸಾಪೂರ ಗ್ರಾಮವನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿ ಮಾಡಲು ಸಂಕಲ್ಪ ತೊಟ್ಟಿದ್ದೇವೆ. ಇದಕ್ಕೆ ಅಧಿಕಾರಿಗಳು ಸಹ ಸಾಥ ನೀಡಬೇಕು ಎಂದರು.
ಪಟ್ಟಿ ಅಂಗಡಿಗಳು ಸೇರಿದಂತೆ ಎಲ್ಲಂದರಲ್ಲಿ ರಾಜಾ ರೋಷವಾಗಿ ಸಾರಾಯಿ ಮಾರಾಟ ದಂಧೆ ನಡೆಯುತ್ತಿದ್ದರೂ ಅಬಕಾರಿ ಅಧಿಕಾರಿಗಳು ಮಾತ್ರ ಮೌನವಾಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಸಾರಾಯಿ ನಿಯಂತ್ರಣ ಮಾಡಬೇಕಾದ ಅಧಿಕಾರಿಗಳೆ ಕಛೇರಿಯಲ್ಲಿ ಕುಳಿತು ಕಾಲಹರಣ ಮಾಡಿದರೆ ಸಾರಾಯಿ ಮುಕ್ತ ಗ್ರಾಮ ಆಗುವದಾದರು ಹೇಗೆ ಎಂದು ಮಹಿಳೆಯರು ಪ್ರಶ್ನಿಸಿದರು.
ಮಧ್ಯದಂಗಡಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಷವನ್ನು ಹೊರಹಾಕಿದ ಗ್ರಾಮಸ್ಥರು, ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ನಮ್ಮ ಹೋರಾಟ ನಿಲ್ಲುವದಿಲ್ಲ ಎಂದು ಎಚ್ಚರಿಸಿದರು.
ಈ ವೇಳೆ ಗದ್ದೆಪ್ಪ ಭೋವೇರ, ಸಂಗನಗೌಡ ಪಾಟೀಲ, ಜಿ.ಜಿ.ಗೌಡರ, ಬಾಲಪ್ಪ ತಳವಾರ, ಸುರೇಶ ಬೈರವಾಡಗಿ, ದ್ಯಾಮಣ್ಣ ಇಂಗಳಗಿ, ಶ್ರೀನಿವಾಸ ಗೌಂಡಿ, ಅಂಬ್ರೇಶ ಸಂಗಮ, ನಾಗೇಶ ಹಡಪದ, ಸಂಗಮ್ಮ ಭೋವೇರ, ಈರಮ್ಮ ಉಪ್ಪಿನಕಾಯಿ, ಗಿರಮ್ಮ ಪೂಜಾರಿ, ಅಯ್ಯಮ್ಮ ಹಿರೇಕುರಬರ, ಗದ್ದೆವ್ವ ಮಾದರ, ತಿಪ್ಪವ್ವ ಮಾದರ, ಹುಲಗಮ್ಮ ಮಾದರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
ಆಲೂರ-ಕೇಸಾಪೂರ ಸಾರಾಯಿ ಮುಕ್ತ ಗ್ರಾಮವಾಗಿಸಲು ಗ್ರಾಮಸ್ಥರ ಪ್ರತಿಭಟನೆ
Related Posts
Add A Comment

