ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಲಕ್ಷ್ಮಣ ಕಲ್ಲಪ್ಪ ಹಡಪದ ಅವರು ದೆಹಲಿಯಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪಟ್ಟಣದ ಮಾರುತಿ ದೇವಸ್ಥಾನದಿಂದ ರಾಮೇಶ್ವರ ದೇವಸ್ಥಾನದವರೆಗೂ ದೀಡ್ ನಮಸ್ಕಾರ ಹಾಕಿ ತಮ್ಮ ದೀಡ್ ನಮಸ್ಕಾರ ಹರಕೆಯನ್ನು ಭಾನುವಾರ ರಾತ್ರಿ ತೀರಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಸಿಹಿ ಹಂಚಿ ಜಯ ಘೋಷ ಹಾಕಿ ಸಂಭ್ರಮಿಸಿದರು.
ಲಕ್ಷ್ಮಣ ಹಡಪದ ಅವರನ್ನು ಮಾತನಾಡಿಸಿದಾಗ ಲೋಕಸಭಾ ಚುನಾವಣೆಯ ಫಲಿತಾಂಶ ಏರು-ಪೇರು ನಡೆಯುತ್ತಿರುವಾಗ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯಾಗಲಿ ಎಂದು ದೇವರಲ್ಲಿ ದೀಡ್ ನಮಸ್ಕಾರ ಹಾಕುವದಾಗಿ ಹರಕೆ ಮಾಡಿಕೊಂಡೆ. ಈಗ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ನನ್ನ ಸಂಕಲ್ಪ ಈಡೇರಿದೆ. ಬಿಜೆಪಿ ಮುಖಂಡರೊಂದಿಗೆ, ಕಾರ್ಯಕರ್ತರೊಂದಿಗೆ ಸೇರಿಕೊಂಡು ನನ್ನ ಹರಕೆ ತೀರಿಸಿದೆ ಎಂದರು.
ಈ ಸಂದರ್ಭದಲ್ಲಿ ರೇವಣಸಿದ್ದ ಮಣ್ಣೂರ, ಹಣಮಂತ ಬದ್ನೂರ, ಮಾಳು ನಾಗರಾಳ, ಸಿದ್ರಾಯ ಕವಟೇಕರ, ಸುಭಾ ಲೇಸಪ್ಪಗೋಳ, ಪುಟ್ಟು ತೇಲಿ, ಅಡಿವಯ್ಯ ವಿಭೂತಿ, ಶರಣಯ್ಯ ಗಿಡ್ಡಿ, ಪ್ರವೀಣ ಹಡಪದ, ಉಮೇಶ ನಾವಿ, ಗಡ್ಡೆಪ್ಪ ವಿಲೇರಿ, ಮಾಂತು ಅಗಸರ, ಪುಟ್ಟು ಕೆಂಗಣಗುತ್ತಿ, ವೃಷಭ ಲೇಸಪ್ಪಗೋಳ, ಜಗದೀಶ ಅರುಟಗಿ, ಬಸವರಾಜ ಅಲಗೊಂಡ, ಮಲ್ಲು ನಾಟೀಕಾರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

