ಸಿಂದಗಿ: ಮಕ್ಕಳಲ್ಲಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಲಿಂಗ ಅಸಮಾನತೆ ಹೋಗಲಾಡಿಸಲೂ ಮತ್ತು ಕ್ರಿಯಾಶೀಲವಾಗಿರಲೂ ಸಹಕಾರಿಯಾಗುವುದು ಎಂದು ತಾಪಂ ಇಒ ರಾಮು ಅಗ್ನಿ ಹೇಳಿದರು.
ತಾಲೂಕಿನ ಬ್ಯಾಕೋಡ ಗ್ರಾಪಂಯ ಗ್ರಂಥಾಲಯದಲ್ಲಿ ಹಮ್ಮಿಕೊಂಡ ಅಂತರ ರಾಷ್ಟ್ರೀಯ ಆಟದ ದಿನ ಮಕ್ಕಳ ಜೊತೆಗೆ ಕೇರಂ ಆಡುವ ಮೂಲಕ ತಾಪಂ ಇಒ ರಾಮು ಅಗ್ನಿ ಚಾಲನೆ ನೀಡಿ ಮಕ್ಕಳೊಂದಿಗೆ ಚೆಸ್, ಮತ್ತು ಕೇರಂ ಆಟವನ್ನಾಡಿ ಮಕ್ಕಳೊಂದಿಗೆ ಹರ್ಷ ವ್ಯಕ್ತಪಡಿಸಿದರು.
ನಂತರ ಶಾಲಾ ಆವರಣದಲ್ಲಿ ಖೋಖೋ, ಕಬಡ್ಡಿ ಆಡಿ ಮಕ್ಕಳು ಕೂಡ ಸೋಲು ಗೆಲುವಿನೊಂದಿಗೆ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಗ್ರಾಪಂ ಪಿಡಿಒ ಅಣ್ಣರಾಯ ರೂಗಿ, ಕಾರ್ಯದರ್ಶಿ ರಮೇಶ ಚಟ್ಟರಕಿ, ನರೇಗಾ ಐಇಸಿ ಸಂಯೋಜಕರು ಭೀಮರಾಯ ಚೌಧರಿ, ಗ್ರಂಥಾಲಯ ಮೇಲ್ವಿಚಾರಕ ಶಂಕರ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

