ಮುದ್ದೇಬಿಹಾಳ: ಯುವಕನೋರ್ವನಿಗೆ ಕಬ್ಬಿಣದ ರಾಡ್ ನಿಂದ ಮನಸೋ ಇಚ್ಛೆ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪಟ್ಟಣದ ನ್ಯಾಯಾಲಯದ ಎದುರು ಮಂಗಳವಾರ ಮಧ್ಯಾಹ್ನ ನಡೆದಿದೆ.
ಕಾನೂನು ನೆರವಿಗೆ ನ್ಯಾಯಾಲಯಕ್ಕೆ ವಕೀಲರ ಭೇಟಿಗಾಗಿ ಆಗಮಿಸಿದ್ದ ತಾಲೂಕಿನ ಯರಝರಿ ಗ್ರಾಮದ ಯುವಕ ಸಂತೋಷ ಕಾಡಮೆಗೇರಿ ಹಲ್ಲೆಗೊಳಗಾಗ ಯುವಕ. ಇಲ್ಲಿನ ನ್ಯಾಯಾಲಯದ ಎದುರು ಟೀ ಕುಡಿಯುತ್ತ ಕುಳಿತ ಈತನ ಮೇಲೆ ನಾಲ್ಕೈದು ಜನರ ತಂಡ ಏಕಾಏಕಿ ದಾಳಿ ನಡೆಸಿ ಟ್ರ್ಯಾಕ್ಟರ್ ಗೆ ಸಂಬಂಧಿಸಿದ ದಪ್ಪನೆಯ ಕಬ್ಬಿಣದ ರಾಡ್‌ನಿಂದ ಹೊಡೆಯಲು ಆರಂಭಿಸಿದ್ದಾರೆ. ಸ್ಥಳದಲ್ಲಿದ್ದ ವಕೀಲರು, ಸಾರ್ವಜನಿಕರು ಬಿಡಿಸಲು ಮುಂದಾದರೂ ಬಿಡದೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಇನ್ನೇನು ಕೊಲೆ ಮಾಡುತ್ತಾರೆ ಅನ್ನುವಷ್ಟರಲ್ಲಿ ಘಟನಾಸ್ಥಳದಲ್ಲಿ ಕೆಲವರು ಧರ್ಮದೇಟು ನೀಡಿ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ರಾಡ್ ಒಗೆದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಘಟನೆಗೆ ಹಿನ್ನೆಲೆ ತಿಳಿದು ಬಂದಿಲ್ಲ. ಗಾಯಾಳು ಸ್ಥಳೀಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

