Author: editor.udayarashmi@gmail.com

ಬಸವನಬಾಗೇವಾಡಿ: ಮಹಿಳೆ ಕುಟುಂಬದ ಆಸ್ತಿಯಾಗಿ ವಿದ್ಯಾವಂತರಾಗಬೇಕು. ಶಿಕ್ಷಣ ಸಂಸ್ಕೃತಿ, ಸಂಸ್ಕಾರ ಪಡೆದುಕೊಳ್ಳಬೇಕು. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ ಸಾಕ್ಷಿಯಾಗಿದ್ದಾರೆ ಎಂದು ಹೂವಿನಹಿಪ್ಪರಗಿಯ ಪತ್ರಿಮಠದ ದ್ರಾಕ್ಷಾಯಿಣಿ ಮಾತಾಜಿ ಹೇಳಿದರು.ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಲಿಂ.ಸಿದ್ದಲಿಂಗ ಶಿವಯೋಗಿಗಳ 90 ನೇ ಜಾತ್ರಾಮಹೋತ್ಸವದಂಗವಾಗಿ ಶ್ರೀಮಠ, ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಪುರುಷರು ಆತ್ಮ ಶುದ್ಧೀಕರಣದಿಂದ ಮಹಿಳೆಯರಿಗೆ ಗೌರವ ನೀಡಬೇಕು. ಮಹಿಳೆ ಕುಟುಂಬದ ಆಧಾರ ಸ್ಥಂಭವಾಗಿದ್ದಾಳೆ. ಮಹಿಳೆಯರನ್ನು ಪೂಜ್ಯನೀಯ ಸ್ಥಾನದಲ್ಲಿ ಕಾಣುವ ದೃಷ್ಟಿಕೋನ ಇರಬೇಕು. ಮಹಿಳೆ ದೇವತೆಯ ಸಮಾನಳು ಎಂದರು.ಮಾಜಿ ಸಚಿವ ಲೀಲಾವತಿ ಪ್ರಸಾದ ಮಾತನಾಡಿ, ಇಂಗಳೇಶ್ವರ ವಿರಕ್ತಮಠ ವಚನ ಶಿಲಾಶಾಸನ ಮಂಟಪ ಕಾರ್ಯ ಇತಿಹಾಸ ಪ್ರಸಿದ್ಧವಾಗಿದೆ. ನಾನು ಇಂಗಳೇಶ್ವರ ಗ್ರಾಮದ ಮೊಮ್ಮಗಳಾಗಿದ್ದು ಹೆಮ್ಮೆಯ ವಿಷಯ ಎಂದರು.ಮಹಿಳಾ ಸಬಲೀಕರಣ ಗೋಷ್ಠಿಯಲ್ಲಿ ಸುಖದೇವಿ ಅಲಬಾಳಮಠ ಹಾಗು ರೋಹಿಣಿ ಜತ್ತಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಮಹಿಳೆಯರು ಆಥಿ೯ಕ, ಸಾಮಾಜಿಕ ಧಾರ್ಮಿಕ…

Read More

ಬಸವನಬಾಗೇವಾಡಿ: ರಾಜ್ಯದ ಸಾಂಸ್ಕ್ರತಿಕ ನಾಯಕ ಬಸವೇಶ್ವರರ ತತ್ವಗಳನ್ನು ಪ್ರತಿಯೊಬ್ಬರೂ ಮನಸಾಕ್ಷಿಯಾಗಿ ಅಳವಡಿಸಿಕೊಳ್ಳುವ ಮೂಲಕ ಅವರನ್ನು ಮನದ ಒಡೆಯನನ್ನಾಗಿ ಮಾಡಿಕೊಳ್ಳುವ ಅಗತ್ಯವಿದೆ ಎಂದು ಬಸವ ಸಮಿತಿಯ ಅರವಿಂದ ಜತ್ತಿ ಹೇಳಿದರು.ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಬಸವೇಶ್ವರ ವಚನ ಶಿಲಾ ಮಂಟಪದಲ್ಲಿ ಗುರುವಾರ ಸಂಜೆ ಶ್ರೀಮಠದ ಹಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿಗಳ ಅಭಿನಂದನಾ ಗ್ರಂಥ ನಿರಂಜನ ಜ್ಯೋತಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಅಂತರಂಗ-ಬಹಿರಂಗ ಶುದ್ಧಿ ಇಟ್ಟುಕೊಳ್ಳಬೇಕು. ನಮ್ಮೆಲ್ಲರ ಬದುಕು ಬಸವಮಯವಾಗಬೇಕು. ವಚನ ಸಾಹಿತ್ಯದ ತಾತ್ಪರ್ಯವನ್ನು ಅರಿತುಕೊಳ್ಳಬೇಕು. ವಚನ ಸಾಹಿತ್ಯ ವಿಜ್ಞಾನವಾಗಿದೆ. ಇಂದಿನ ಜನಾಂಗಕ್ಕೆ ಲಿಂಗಧಾರಣೆ ಮಾಡಿ ಲಿಂಗದ ಕಲ್ಪನೆ ಕೊಡಬೇಕು. ಅಂತರಂಗ ಶುದ್ಧಿಯಾಗಿ, ಲಿಂಗಸಾಕ್ಷಿಯಾಗಿ ಮಾತನಾಡುವ ಮೂಲಕ ಎಲ್ಲರೂ ಸಾರ್ಥಕ ಬದುಕನ್ನು ಸಾಗಿಸುವಂತಾಗಬೇಕು. ಬಸವ ಜಯಂತಿ ಆಚರಣೆ ರಾಷ್ಟ್ರಮಟ್ಟಕ್ಕೆ ಮುಟ್ಟುವಂತಾಗಬೇಕಿದೆ. ರಾಜ್ಯದ ಸಾಂಸ್ಕ್ರತಿಕ ನಾಯಕ ಬಸವೇಶ್ವರರರು ಪ್ರಜಾಪ್ರಭುತ್ವ ನಾಯಕನೂ ಆಗಿದ್ದಾನೆ ಎಂದರು.ಗ್ರಂಥ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ಇಂಗಳೇಶ್ವರ ವಿರಕ್ತಮಠದಲ್ಲಿ ಹಿರಿಯ ಶ್ರೀಗಳಾದ ಚನ್ನಬಸವ ಸ್ವಾಮೀಜಿಗಳು ವಿಶ್ವಕ್ಕೆ…

Read More

ದೇವರಹಿಪ್ಪರಗಿ: ಬಸ್ ನಿಲ್ದಾಣ ಕಂಪೌಂಡಿಗೆ ಹೊಂದಿಕೊಂಡಿರುವ ಕೊಳಚೆ ಗುಂಡಿ ಮುಚ್ಚಿ ಸ್ವಚ್ಛ ಪರಿಸರಕ್ಕೆ ಸಹಕಾರ ನೀಡುವುದರ ಜೊತೆಗೆ ಸೊಳ್ಳೆಗಳ ಕಾಟದಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರನ್ನು ಮುಕ್ತಗೊಳಿಸುವಂತೆ ಸ್ಥಳೀಯ ವ್ಯಾಪಾರಸ್ಥರು ಆಡಳಿತಾಧಿಕಾರಿ ಪ್ರಕಾಶ ಸಿಂದಗಿ ಹಾಗೂ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಅವರಲ್ಲಿ ಆಗ್ರಹಿಸಿದ್ದಾರೆ.ಪಟ್ಟಣದ ಸ್ಥಳೀಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಶನಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕೊಳಚೆಗುಂಡಿ ಮುಚ್ಚಿ ರೋಗದಿಂದ ಕಾಪಾಡುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಚೇತನ ಇಂಡಿ, ರಮೇಶ ಮಾಳನೂರ ಮಾತನಾಡಿ, ಕಟ್ಟಡ ಕಟ್ಟಲು ಅಗೆದ ಗುಂಡಿ ಕಳೆದ ಒಂದು ವರ್ಷದಿಂದ ತ್ಯಾಜ್ಯದ ತಿಪ್ಪೆಯಾಗಿ ಬದಲಾಗಿದ್ದು, ಕಳೆದ ವರ್ಷವೇ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಅವರಿಗೆ ಮನವಿ ಸಲ್ಲಿಸಿದ್ದೇವು. ಆಗ ಮುಖ್ಯಾಧಿಕಾರಿ ಖಾಲಿ ಜಾಗೆ ಖಾಸಗಿ ಅವರದ್ದಾಗಿದೆ ನಾವು ಏನೂ ಮಾಡುವಂತಿಲ್ಲ ಎಂಬ ಮಾತು ಹೇಳಿದ್ದರು. ಈಗ ಇಲ್ಲಿ ಮಳೆ ನೀರು ತುಂಬಿ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಜೊತೆಗೆ ಇಂಥ ನೀರಿನಲ್ಲಿಯೇ ಸತ್ತ ಪ್ರಾಣಿಗಳನ್ನು ಎಸೆಯುತ್ತಿದ್ದಾರೆ. ಇದರಿಂದ ಇಡೀ ಪ್ರದೇಶ ಕೊಳಚೆಯಿಂದ…

Read More

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ವಿಜಯಪುರ: ಕಳೆದ ಏಳು ವರ್ಷಗಳಿಂದ ಜಿಲ್ಲೆಯ ನೊಂದಣಾಧಿಕಾರಿಗಳು ವಿಜಯಪುರ ನಗರದಲ್ಲಿ ಕಾರ್ಯನಿರ್ವಹಿಸಿದ್ದು ಇಂಥ ಪ್ರಕರಣಗಳಿಗೆ ಕುಮಕ್ಕು ನೀಡುತ್ತಿದ್ದಾರೆ. ಇವರ ಜೊತೆ ಹಲವಾರು ಜನ ಕೈಜೋಡಿಸಿ ಅಮಾಯಕ ಬಡ ಜನರ ನಕಲಿ ದಾಖಲೆ ಸೃಷ್ಟಿಸಿ ಕೊಳ್ಳೆ ಹೊಡೆಯುತ್ತಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಗಂಭೀರವಾಗಿ ಈ ಪ್ರಕರಣವನ್ನು ಪರಿಗಣಿಸಬೇಕು. ಇದಕ್ಕೆ ತಾಲೂಕು ಮತ್ತು ಜಿಲ್ಲೆಯಲ್ಲಿ ವಿಶೇಷ ತಂಡವನ್ನು ರಚನೆ ಮಾಡಿ ತಕ್ಷಣದಿಂದ ಕಾರ್ಯ ಪ್ರವೃತ್ತರಾಗಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಲಾಯಿತು.ಶನಿವಾರ ನಗರದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಮತ್ತು ಜಿಲ್ಲೆಯಲ್ಲಿ ಅಕ್ರಮವಾಗಿ ನಕಲಿ ಭೂ-ದಾಖಲೆ ಸೃಷ್ಟಿ ಮಾಡಿ ಜನರನ್ನು ವಂಚಿಸುತ್ತಿರುವ ದೊಡ್ಡ ಪ್ರಮಾಣದಲ್ಲಿ ಬೀಡುಬಿಟ್ಟಿದ್ದು ಇದನ್ನು ಜಿಲ್ಲಾಡಳಿತ ತಕ್ಷಣವೇ ಮಟ್ಟಹಾಕಬೇಕು. ಇದರಲ್ಲಿ ನೂರಾರು ಜನ ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇವತ್ತಿನ ದಿನಮಾನದಲ್ಲಿ ಇದರ…

Read More

“ವೀಣಾಂತರಂಗ” – ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ದೇವರನ್ನು ಮತ್ತು ಬೆರಳೆಣಿಕೆಯ ಒಬ್ಬಿಬ್ಬರನ್ನು ಹೊರತುಪಡಿಸಿ ವ್ಯಕ್ತಿ ಪೂಜೆ ಮಾಡಲೇಬಾರದು ಎಂಬ ಭಾವ ನನ್ನದು. ತಂದೆ ತಾಯಿಯನ್ನು ಪ್ರೀತಿಸಬೇಕು, ಅವರಲ್ಲೂ ಕೂಡ ಮನುಷ್ಯ ಸಹಜವಾದ ರಾಗ ದ್ವೇಷಗಳಿರುವುದರಿಂದ ಅವರ ವ್ಯಕ್ತಿತ್ವದ ಎಲ್ಲ ಒಳಿತು ಕೆಡುಕುಗಳೊಂದಿಗೆ ಅವರನ್ನು ಗೌರವಿಸಬೇಕು. – ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

Read More

ವಿಜಯಪುರ: ಎನ್.ಆರ್. ಕುಲಕರ್ಣಿ ಅವರ “ಬಕುಲ ಪುಷ್ಪ” ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಗ್ರಂಥ ತುಲಾಭಾರ ಸಮಾರಂಭವನ್ನು ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರ, ಸ್ಟೇಷನ್ ರಸ್ತೆ, ವಿಜಯಪುರದಲ್ಲಿ ೧೬-೦೬-೨೦೨೪ ರಂದು ರವಿವಾರ ಬೆಳಿಗ್ಗೆ ೧೦.೦೦ ಗಂಟೆಗೆ ಜರುಗಲಿದೆ.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀಕಂಠ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಗುರು ಬಮ್ಮಲಿಂಗೇಶ್ವರ ಬೃಹನ್ಮಠ, ನಾಗಣಸೂರ ವಹಿಸುವರು. ಮಾಜಿ ಸಚಿವರಾದ ಅಪ್ಪಾಸಾಹೇಬ ಎಮ್. ಪಟ್ಟಣಶೆಟ್ಟಿ ಉದ್ಘಾಟನೆ ಮಾಡುವರು. ಅಧ್ಯಕ್ಷತೆಯನ್ನು ಹಿರಿಯ ಸಂಶೋಧಕ ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ ವಹಿಸುವರು. ವಿಶ್ರಾಂತ ಇಂಗ್ಲೀಷ ಪ್ರಾಧ್ಯಾಪಕರಾದ ಡಾ.ಆರ್.ಕೆ. ಕುಲಕರ್ಣಿ ಇವರು ಗ್ರಂಥ ಬಿಡುಗಡೆ ಮಾಡುವರು. ವಿಶ್ರಾಂತ ಪ್ರಾಚಾರ್ಯರಾದ ಜಿ.ಆರ್. ಕುಲಕರ್ಣಿ ಗ್ರಂಥಾವಲೋಕನ ನೆರವೇರಿಸುವರು ಎಂದು ಎನ್.ಆರ್. ಕುಲಕರ್ಣಿ ಅವರ ಅಭಿನಂದನ ಸಮಿತಿ ಹಾಗೂ ಅಭಿನಂದನ ಗ್ರಂಥ ಸಂಪಾದಕ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ನಗರದ ಮನಗೂಳಿ ಅಗಸಿ ಬಡಾವಣೆಯ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ೨೫ನೇ ದಿನ ಹಾಗೂ ೩ನೇ ದಿನ ಸರದಿ ಉಪವಾಸ ಸತ್ಯಾಗ್ರಹ ಪೂರೈಸಿದೆ. ಇಂದು ಹೋರಾಟಗಾರರಾದ ರೋಹಿತ ಮಲಕಣ್ಣನವರ ಹಾಗೂ ಮಂಜುನಾಥ ಶಿವಶರಣ ಅವರು ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.ಈ ಸಂದರ್ಭದಲ್ಲಿ ಮುಖಂಡ ಮಹೇಶ ಚಲವಾದಿ ಮಾತನಾಡಿ, ಕಳೆದ ೨೫ ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಾಗೂ ಕಳೆದ ೩ ದಿನಗಳಿಂದ ಸರದಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡಾ, ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷö್ಯ ತೋರುವ ಮೂಲಕ ದಲಿತ ಜನಾಂಗಕ್ಕೆ ಘೋರ ಅನ್ಯಾಯವೆಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇಲ್ಲಿಯವರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ರಾಜ್ಯ ಸರ್ಕಾರದ ಯಾವೊಬ್ಬ ಪ್ರತಿನಿಧಿಯು ಕೂಡ ನಮ್ಮ ಸಮಸ್ಯೆಯನ್ನು ಆಲಿಸಲು ಬಾರದೆ ಇರುವುದು ಇವರ ದಲಿತ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದರು.ಈ ಸಂದರ್ಭದಲ್ಲಿ ರಾಜು ಕಾಖಂಡಕಿ,…

Read More

ವಿಜಯಪುರ: ಸಂಸದ ರಮೇಶ ಜಿಗಜಿಣಗಿಯವರನ್ನು ಕೇಂದ್ರ ಸಂಪುಟ ದರ್ಜೆಯ ಸಚಿವ ಸ್ಥಾನಕ್ಕೆ ಪರಿಗಣಿಸಬೇಕೆಂದು ಭಾರತಿಯ ಜನತಾ ಪಕ್ಷದ ಎಸ್.ಸಿ.ಮೋರ್ಚಾ ಉಪಾದ್ಯಕ್ಷ ವಿಠ್ಠಲ ನಡುವಿನಕೇರಿ ಮನವಿ ಮಾಡಿದ್ದಾರೆ.ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ರಮೇಶ ಜಿಗಜಿಣಗಿಯವರು ರಾಜಕೀಯ ಜೀವನದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಕಂದಾಯ ಅಬಕಾರಿ, ಸಮಾಜ ಕಲ್ಯಾಣ ಸಚಿವರಾಗಿ, ಗೃಹ ಸಚಿವರಾಗಿ ಹಲವಾರು ಮಹತ್ತರ ಅಭಿವೃದ್ದಿ ಕೆಲಸಗಳನ್ನು ಮಾಡಿದ ಹೆಮ್ಮೆ ಇವರದು ಇನ್ನು ಸತತವಾಗಿ ೭ ಬಾರಿ ಸಂಸದರಾಗಿ ಆಯ್ಕೆಯಾಗಿ ಬಿಜೆಪಿಗೆ ತಮ್ಮ ಆದ ಕೊಡುವೆಯನ್ನು ನೀಡಿದ್ದಾರೆ. ದಕ್ಷಿಣ ಭಾರತದಲ್ಲಿಯೇ ದಲಿತ ನಾಯಕರಾಗಿ ಇವರು ಆಯ್ಕೆಗೊಂಡಿರುವದು ಎಲ್ಲ ದಲಿತ ಸಮುದಾಯಕ್ಕೆ ಹಾಗೂ ಇನ್ನುಳಿದ ಸಮದಾಯಕ್ಕೆ ಹರ್ಷವನ್ನುಂಟು ಮಾಡಿದೆ.ಇವರು ತಮ್ಮ ರಾಜಕೀಯ ಜೀವನದಲ್ಲಿ ಅಜಾತ ಶತ್ರು ಆಗಿ ಹೊರಹೊಮ್ಮಿದ ನಾಯಕರಾಗಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಕಟ್ಟಿ ಬೆಳೆಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಈ ಹಿಂದೆ ಕೇಂದ್ರ ಸಚಿವರಾದ ಸಮಯದಲ್ಲಿ ೧ ಲಕ್ಷ ಕೋಟಿ…

Read More

ನೀಟ್ ಪರೀಕ್ಷೆ ಅವ್ಯವಹಾರ ಕುರಿತು ನ್ಯಾಯಾಂಗ ತನಿಖೆಗೆ ದವಿಪ ಆಗ್ರಹ ವಿಜಯಪುರ: ನಗರದಲ್ಲಿರುವ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ರ್‍ಯಾಲಿ ಮೂಲಕ ನೀಟ್ ಪ್ರವೇಶ ಪರೀಕ್ಷೆಯಲ್ಲಿ ನಡೆದ ಭ್ರಷ್ಟಾಚಾರವನ್ನು ವಿರೋಧಿಸಿ ದಲಿತ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳ ಮೂಲಕ ಜಿಲ್ಲಾ ಅಧಿಕಾರಿಗಳಿಗೆ ಮನವಿ ಮಾಡಿದರು.ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಅಕ್ಷಯ್ ಕುಮಾರ್ ಮಾತನಾಡಿ, ಜೂನ್ ೪ ರಂದು ಪ್ರಕಟಗೋಂಡ ನೀಟ್ ಪರೀಕ್ಷೆ ಫಲಿತಾಂಶದ ಭ್ರಷ್ಟಾಚಾರದ ಪಾರದರ್ಶಕತೆಯ ಕುರಿತು ದೇಶವ್ಯಾಪ್ತಿ ವಿದ್ಯಾರ್ಥಿಗಳು ಹಾಗೂ ಪಾಲಕರು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಯು.ಜಿ.ಸಿ. ಪರೀಕ್ಷಾ ಮಾರ್ಗಸೂಚಿ ಅನ್ವಯ ಅಂಕಗಳನ್ನು ನೀಡಿದ್ದಲ್ಲಿ ವಿದ್ಯಾರ್ಥಿಗಳು ಪಡೆಯಬಹುದಾದ ಅಂಕಗಳೊಂದಿಗೆ ಪ್ರಸ್ತುತ ಒಂದಿಷ್ಟು ವಿದ್ಯಾರ್ಥಿಗಳು ಪಡೆದಿರುವ ಅಂಕಗಳು ಹೊಂದಾಣಿಕೆ ಆಗುತ್ತಿಲ್ಲ.ಕೆಲವು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡಿರುಹುದಾಗಿ ಎನ್.ಟಿ.ಎ ಸಮಾಜಿಸಿ ನೀಡಿದೆ. ಆದರೆ ಹೆಚ್ಚುವರಿ ಶುಲ್ಕಗಳನ್ನು ನೀಡಿರುವ ಮಾನದಂಡವು ಸಂಪೂರ್ಣವಾಗಿ ಪಕ್ಷಪಾತಿಯಾಗಿದೆ. ಈ ವರ್ಷ ಪ್ರಕತಿಸಲಾಗಿದ್ದ ಮಾರ್ಗಸುಚಿ ಅನ್ವಯ ಹೆಚ್ಚುವರಿ ಅಂಕಗಳನ್ನು ನೀಡಲು ಅವಕಾಶವಿಲ್ಲ ಆಚರ್ಯಕರವೇಂಬಂತೆ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸಮಾನ…

Read More