ದೇವರಹಿಪ್ಪರಗಿ: ಬಸ್ ನಿಲ್ದಾಣ ಕಂಪೌಂಡಿಗೆ ಹೊಂದಿಕೊಂಡಿರುವ ಕೊಳಚೆ ಗುಂಡಿ ಮುಚ್ಚಿ ಸ್ವಚ್ಛ ಪರಿಸರಕ್ಕೆ ಸಹಕಾರ ನೀಡುವುದರ ಜೊತೆಗೆ ಸೊಳ್ಳೆಗಳ ಕಾಟದಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರನ್ನು ಮುಕ್ತಗೊಳಿಸುವಂತೆ ಸ್ಥಳೀಯ ವ್ಯಾಪಾರಸ್ಥರು ಆಡಳಿತಾಧಿಕಾರಿ ಪ್ರಕಾಶ ಸಿಂದಗಿ ಹಾಗೂ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಅವರಲ್ಲಿ ಆಗ್ರಹಿಸಿದ್ದಾರೆ.
ಪಟ್ಟಣದ ಸ್ಥಳೀಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಶನಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕೊಳಚೆಗುಂಡಿ ಮುಚ್ಚಿ ರೋಗದಿಂದ ಕಾಪಾಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚೇತನ ಇಂಡಿ, ರಮೇಶ ಮಾಳನೂರ ಮಾತನಾಡಿ, ಕಟ್ಟಡ ಕಟ್ಟಲು ಅಗೆದ ಗುಂಡಿ ಕಳೆದ ಒಂದು ವರ್ಷದಿಂದ ತ್ಯಾಜ್ಯದ ತಿಪ್ಪೆಯಾಗಿ ಬದಲಾಗಿದ್ದು, ಕಳೆದ ವರ್ಷವೇ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಅವರಿಗೆ ಮನವಿ ಸಲ್ಲಿಸಿದ್ದೇವು. ಆಗ ಮುಖ್ಯಾಧಿಕಾರಿ ಖಾಲಿ ಜಾಗೆ ಖಾಸಗಿ ಅವರದ್ದಾಗಿದೆ ನಾವು ಏನೂ ಮಾಡುವಂತಿಲ್ಲ ಎಂಬ ಮಾತು ಹೇಳಿದ್ದರು. ಈಗ ಇಲ್ಲಿ ಮಳೆ ನೀರು ತುಂಬಿ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಜೊತೆಗೆ ಇಂಥ ನೀರಿನಲ್ಲಿಯೇ ಸತ್ತ ಪ್ರಾಣಿಗಳನ್ನು ಎಸೆಯುತ್ತಿದ್ದಾರೆ. ಇದರಿಂದ ಇಡೀ ಪ್ರದೇಶ ಕೊಳಚೆಯಿಂದ ತುಂಬಿ ಅಸಹನೀಯವಾಗಿದೆ. ಇಲ್ಲಿ ವ್ಯಾಪಾರಕ್ಕೆ ಬರುವ ಸಾರ್ವಜನಿಕರು ಮೂಗು ಹಾಗೂ ಪೂರ್ಣಮೈ ಮುಚ್ಚಿಕೊಂಡು ಬರುವಂತ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸ್ಥಳೀಯ ಆಡಳಿತ ಕೂಡಲೇ ಜಾಗೆಯ ಮಾಲೀಕರಿಗೆ ಸೂಕ್ತ ನಿರ್ದೇಶನ ನೀಡಿ ಕೊಳಚೆ ಗುಂಡಿ ಮುಚ್ಚಲು ಕ್ರಮ ಕೈಗೊಂಡು ಸೊಳ್ಳೆರಹಿತ, ಸ್ವಚ್ಛ ಪರಿಸರಕ್ಕೆ ಸಹಕಾರ ನೀಡಬೇಕು ಎಂದು ವಿನಂತಿಸಿದ್ದಾರೆ
ರಾವುತ ಅಗಸರ, ಸುರೇಶ ಕೊಣ್ಣೂರ, ಆಯ್.ಎಸ್. ಈಜೇರಿ, ವಿಜಯಕುಮಾರ ಹಿರೇಮಠ, ಸಚೀನ್ ಬುದ್ನಿ, ಬಸವರಾಜ್ ಮಣ್ಣೂರ, ಬಸವರಾಜ್ ಬುದ್ನಿ, ಆರೀಫ್ ಹಚ್ಯಾಳ, ರೇವಂತ ಬಿರಾದಾರ, ಬಿಲಾಲ್ ಪಾನಪರೋಷ್, ಮಹಮ್ಮದ್ ಹನೀಫ್ ಯಲಿಗಾರ, ಅಸದ್ ಮಕಾಂದಾರ್, ಮಂಜುನಾಥ ಅಂಗಡಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

