ವಿಜಯಪುರ: ಸಂಸದ ರಮೇಶ ಜಿಗಜಿಣಗಿಯವರನ್ನು ಕೇಂದ್ರ ಸಂಪುಟ ದರ್ಜೆಯ ಸಚಿವ ಸ್ಥಾನಕ್ಕೆ ಪರಿಗಣಿಸಬೇಕೆಂದು ಭಾರತಿಯ ಜನತಾ ಪಕ್ಷದ ಎಸ್.ಸಿ.ಮೋರ್ಚಾ ಉಪಾದ್ಯಕ್ಷ ವಿಠ್ಠಲ ನಡುವಿನಕೇರಿ ಮನವಿ ಮಾಡಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ರಮೇಶ ಜಿಗಜಿಣಗಿಯವರು ರಾಜಕೀಯ ಜೀವನದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಕಂದಾಯ ಅಬಕಾರಿ, ಸಮಾಜ ಕಲ್ಯಾಣ ಸಚಿವರಾಗಿ, ಗೃಹ ಸಚಿವರಾಗಿ ಹಲವಾರು ಮಹತ್ತರ ಅಭಿವೃದ್ದಿ ಕೆಲಸಗಳನ್ನು ಮಾಡಿದ ಹೆಮ್ಮೆ ಇವರದು ಇನ್ನು ಸತತವಾಗಿ ೭ ಬಾರಿ ಸಂಸದರಾಗಿ ಆಯ್ಕೆಯಾಗಿ ಬಿಜೆಪಿಗೆ ತಮ್ಮ ಆದ ಕೊಡುವೆಯನ್ನು ನೀಡಿದ್ದಾರೆ. ದಕ್ಷಿಣ ಭಾರತದಲ್ಲಿಯೇ ದಲಿತ ನಾಯಕರಾಗಿ ಇವರು ಆಯ್ಕೆಗೊಂಡಿರುವದು ಎಲ್ಲ ದಲಿತ ಸಮುದಾಯಕ್ಕೆ ಹಾಗೂ ಇನ್ನುಳಿದ ಸಮದಾಯಕ್ಕೆ ಹರ್ಷವನ್ನುಂಟು ಮಾಡಿದೆ.
ಇವರು ತಮ್ಮ ರಾಜಕೀಯ ಜೀವನದಲ್ಲಿ ಅಜಾತ ಶತ್ರು ಆಗಿ ಹೊರಹೊಮ್ಮಿದ ನಾಯಕರಾಗಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಕಟ್ಟಿ ಬೆಳೆಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಈ ಹಿಂದೆ ಕೇಂದ್ರ ಸಚಿವರಾದ ಸಮಯದಲ್ಲಿ ೧ ಲಕ್ಷ ಕೋಟಿ ರೂ.ಗಳ ಅನುದಾನವನ್ನು ಪಡೆದುಕೊಂಡು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಿದ್ದಾರೆ.
ಇಂತಹ ಮುತ್ಸದ್ದಿ ನಾಯಕ ರಮೇಶ ಜಿಗಜಿಣಗಿಯವರ ಕೊನೆಯ ಚುನಾವಣೆ ಹಾಗೂ ಅನುಭವಿಗಳಾದ ಇವರಿಗೆ ಗೌರವ ನೀಡುವುದರೊಂದಿಗೆ ಎನ್.ಡಿ.ಎ. ನೇತೃತ್ವದ ಬಿಜೆಪಿ ಸರಕಾರದ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ನೇಮಕಗೊಳಿಸಿ ವಿಜಯಪುರ ಜಿಲ್ಲೆಗೆ ನ್ಯಾಯ ಒದಗಿಸಿಕೊಡಬೇಕೆಂದು ವಿಠ್ಠಲ ಶಿವಲಿಂಗಪ್ಪ ನಡುವಿನಕೇರಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

