Author: editor.udayarashmi@gmail.com

ಬಸವನಬಾಗೇವಾಡಿ: ತಾಲೂಕಿನ ಆರೂಢನಂದಿಹಾಳ ಗ್ರಾಮದ ಶ್ರೀಗುರು ಆರೂಢರ 116ನೇ ಜಯಂತ್ಯೋತ್ಸವ ಹಾಗೂ ಆರೂಢನಂದಿಹಾಳ ಗ್ರಾಮದ ಮರುನಾಮಕರಣ ಕಾರ್ಯಕ್ರಮ ಜೂ.22 ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಕಡಕೋಳದ ರಾಜಗುರು ಮಹಾಲಿಂಗ ಸ್ವಾಮಿ ವಹಿಸುವರು. ತಹಸೀಲ್ದಾರ ವೈ.ಎಸ್ ಸೋಮನಕಟ್ಟಿ ಉದ್ಘಾಟಿಸುವರು. ಪ್ರವಚನಕಾರ ಚಿಕ್ಕರೂಗಿಯ ಈರಣ್ಣ ಶಾಸ್ತ್ರಿ, ಹುಣಶ್ಯಾಳ ಪಿಬಿಯ ಶಂಕರ ಆಲೂರ, ಗ್ರಾಪಂ ಸದಸ್ಯ ರಾಮಚಂದ್ರ ಸಾಸನೂರ ಹಾಗೂ ಪಾರ್ವತಿ ಶಂ ಹಳ್ಳಿ ಅತಿಥಿಗಳಾಗಿ ಆಗಮಿಸುತ್ತಾರೆ. ಅಧ್ಯಕ್ಷತೆಯನ್ನು ಕಮೀಟಿ ಅಧ್ಯಕ್ಷ ಶ್ರೀಶೈಲಾರೂಢರು ವಹಿಸುವರು ಎಂದು ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಬಸವನಬಾಗೇವಾಡಿ: ರಾಜ್ಯ ಸರ್ಕಾರ ಏಕಾಏಕಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿರುವುದು ಖಂಡನೀಯ ಎಂದು ಬಸವನಬಾಗೇವಾಡಿ ಮಂಡಲದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಹುಲ ಕಲಗೊಂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರ ಜನರ ಮೇಲೆ ಆರ್ಥಿಕ ಹೊರೆಯನ್ನು ಹೊರಿಸುತ್ತಿದೆ. ಯಾವುದೇ ಮುಂಜಾಗ್ರತೆ ಇಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸಿದ್ದು ಯಾವ ಪುರುಷಾರ್ಥಕ್ಕಾಗಿ ತೈಲ ಬೆಲೆ ಏರಿಕೆಯಿಂದ ದಿನ ಬಳಕೆ ವಸ್ತುಗಳ ಬೆಲೆಯೂ ಹೆಚ್ಚುತ್ತದೆ. ಇದರಿಂದ ಸಾಮಾನ್ಯ ಜನ ಬದುಕುವುದು ಕಷ್ಟವಾಗುತ್ತದೆ.ರಾಜ್ಯ ಸರಕಾರ ಕೂಡಲೇ ತೈಲ ಬೆಲೆಯನ್ನು ಇಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Read More

– ಬಸವರಾಜ ನಂದಿಹಾಳಬಸವನಬಾಗೇವಾಡಿ: ತಾಲೂಕಿನಲ್ಲಿ ಶುಕ್ರವಾರ ಕಾರಹುಣ್ಣಿಮೆಯ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಬಸವೇಶ್ವರ ದೇವಸ್ಥಾನ ಮುಂಭಾಗ ಕಾರಹುಣ್ಣಿಮೆಯಂಗವಾಗಿ ತಾತ್ಕಾಲಿಕವಾಗಿ ಹಾಕಲಾಗಿರುವ ಅಂಗಡಿಗಳಲ್ಲಿ ಜಾನುವಾರುಗಳಿಗೆ ಬೇಕಾದ ಸಾಮಗ್ರಿಗಳ ಮಾರಾಟ ಕಳೆದ ಕೆಲ ದಿನಗಳಿಂದ ನಡೆಯುತ್ತಿದೆ.ಈ ಸಲ ಮಳೆ ಕೃಪೆಯಾಗಿರುವದರಿಂದ ರೈತ ಬಾಂಧವರು ಇದೀಗ ಮಳೆ ವಿರಾಮ ನೀಡಿದ್ದರಿಂದ ಹೆಚ್ಚಾಗಿ ಬಿತ್ತನೆ ಕಾರ್ಯದಲ್ಲಿ ತೊಡಗಿರುವದರಿಂದಾಗಿ ಜಾನುವಾರುಗಳಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿಗೆ ಬರುವವರ ಸಂಖ್ಯೆ ವಿರಳವಾಗಿದೆ. ಗುರುವಾರ ಹೊನ್ನುಗ್ಗಿ ಇರುವದರಿಂದಾಗಿ ಹೆಚ್ಚು ರೈತ ಬಾಂಧವರು ಸಾಮಗ್ರಿಗಳನ್ನು ಖರೀದಿಸಲು ಬರುತ್ತಾರೆ ಎಂದು ಅಂಗಡಿಕಾರರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಕೆಲ ರೈತ ಬಾಂಧವರು ತಮ್ಮ ಜೀವನಾಡಿ ಜಾನುವಾರುಗಳ ಹಬ್ಬ ಕಾರಹುಣ್ಣಿಮೆಯನ್ನು ಆಚರಿಸಲು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾರಹುಣ್ಣಿಮೆಯಂದು ಕರಿ ಹರಿಯುವ ಕಾರ್ಯಕ್ರಮದಲ್ಲಿ ಬಿಳಿ ಎತ್ತು ಮುಂದೆ ಬಂದರೆ ಹಿಂಗಾರಿ ಜೋಳ ಫಲವತ್ತಾಗಿ ಬರುವುದು. ಕರಿ ಎತ್ತು ಬಂದರೆ ಮುಂಗಾರಿ ಜೋಳ ಫಲವತ್ತಾಗಿ ಬರುವುದು ಎಂಬ ನಂಬಿಕೆ ರೈತ ಬಾಂಧವರಲ್ಲಿದೆ.ಈಚೆಗೆ ಬಹುತೇಕರು ತಮ್ಮ ಹೊಲಗಳನ್ನು ಟ್ಯಾಕ್ಟರ್ ಮೂಲಕ ಬಿತ್ತನೆ ಮಾಡಿಸುವದರಿಂದ ಜಾನುವಾರುಗಳ ಸಂಖ್ಯೆ…

Read More

ಸಿಂದಗಿ: ಜೂ.೨೦ರಂದು ಬೆಳಿಗ್ಗೆ ೧೧ಗಂಟೆಗೆ ಪಟ್ಟಣದ ಅಂಬೇಡ್ಕರ್ ವೃತದಲ್ಲಿ ಸಿಂದಗಿ ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು, ಸದರಿ ಪ್ರತಿಭಟನೆಯು ಮಾಜಿ ಶಾಸಕ ರಮೇಶ ಭೂಸನೂರ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಪೇಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹಾಗೂ ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಹಾಗೂ ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾರಣ ತಾಲೂಕಿನ ಬಿಜೆಪಿ ಪಕ್ಷದ ಮುಖಂಡರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Read More

ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.ಈ ಕುರಿತು ಮಾಧ್ಯಮದ ಮೂಲಕ ಅಧಿಕಾರಿಗಳಿಗೆ ಎಚ್ಚರಿಸಿದ ನಿವಾಸಿಗಳು, ಸಾಕಷ್ಟು ಅನುದಾನ ಖರ್ಷು ಮಾಡಿ ಈ ಘಟಕ ಸ್ಥಾಪಿಸಲಾಗಿದೆ. ಈ ಘಟಕ ಸ್ಥಾಪನೆಯಿಂದ ಇಲ್ಲಿನ ನಿವಾಸಿಗಳಿಗೆ ಸಾಕಷ್ಟು ಅನುಕೂಲವಾಗಿತ್ತು. ಘಟಕ ಸ್ಥಾಪನೆಯಾದಾಗಿನಿಂದ ಇದರ ನಿರ್ವಹಣೆ ಮಾಡುವವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕಳೆದ ಎರಡು-ಮೂರು ತಿಂಗಳಿನಿಂದ ಈ ಘಟಕದಿಂದ ಸರಿಯಾಗಿ ನೀರು ಬಂದಿಲ್ಲ ಅಲ್ಲದೇ ಘಟಕದ ಬಳಿ ಯಾರೂ ಇರುವದಿಲ್ಲ. ದಿನಂಪ್ರತಿ ಕಾಯಿನ್‌ಗಳಿಲ್ಲದೇ ಸಾಕಷ್ಟು ಜನ ಪರದಾಡುತ್ತಾರೆ. ಹೀಗೆ ನಿರ್ವಹಣೆಯ ಜವಾಬ್ದಾರಿ ಹೊತ್ತವರು ಸರಿಯಾಗಿ ನಿರ್ವಹಿಸದ ಕಾರಣ ಈ ಘಟಕ ಸಧ್ಯ ಬಂದ್ ಆಗಿದ್ದು ಕೂಡಲೇ ಇದನ್ನು ಸರಿಪಡಿಸಿ ಸರಿಯಾಗಿ ನಿರ್ವಹಣೆ ಮಾಡುವವರಿಗೆ ಜವಾಬ್ದಾರಿ ನೀಡುವಂತೆ ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Read More

ಢವಳಗಿ: ಸಮೀಪದ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಸಂಸ್ಥೆಯ ಅಡಿಯಲ್ಲಿ ನಡೆಯುವ ಮಾತೋಶ್ರೀ ಶಿವಲಿಂಗಮ್ಮ ಬ ನಾಡಗೌಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 19 ಬುಧವಾರದಂದು 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಮಕ್ಕಳಿಗೆ ಸಂಸ್ಥೆಯಿಂದ ಉಚಿತವಾಗಿ ಸಮವಸ್ತ್ರವನ್ನು ವಿತರಣೆ ಮಾಡಲಾಯಿತು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಬಿ ಕೆ ಬಿರಾದಾರ ಮಾತನಾಡಿ, ಸರಕಾರದಿಂದ ಅನುದಾನಿತ ಶಾಲೆಗಳಿಗೆ ಶಿಕ್ಷಕರ ಸಂಬಳ,ಮಕ್ಕಳಿಗೆ ಬಿಸಿಊಟ, ಪಠ್ಯ ಪುಸ್ತಕ ಮಾತ್ರ ದೊರೆಯುತ್ತದೆ. ಆದರೆ ಮಕ್ಕಳಿಗೆ ಶಾಲಾ ಸಮವಸ್ತ್ರ ಕೊಡುವುದಿಲ್ಲ ಎಂದು ಹೇಳಿದರು. ಸಂಸ್ಥೆಯ ದಾನಿಗಳು ಹಾಗೂ ಸಂಸ್ಥೆಯ ಸಹಕಾರದೊಂದಿಗೆ 10 ವರ್ಷಗಳಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ನೀಡುವುದರ ಜೋತೆಗೆ ಸಂಪೂರ್ಣ ಉಚಿತ ಶಿಕ್ಷಣ ನಮ್ಮ ಸಂಸ್ಥೆಯ ಶಾಲಾ ಮಕ್ಕಳಿಗೆ ಸಿಗಲಿದೆ. ಅದರ ಜೋತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಗ್ರಾಮೀಣ ಪ್ರದೇಶದ ಸಂಸ್ಥೆ ಇದಾಗಿದೆ. 5 ರಿಂದ 7ನೇ ವರ್ಗದ ತರಗತಿಯ ಮಕ್ಕಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ ಇದೆ…

Read More

ವಿಜಯಪುರ : ಕಡುಬಡಜನರಿಗೆ ಕಾಲಕಾಲಕ್ಕೆ ಆಹಾರ ದೊರೆಯಬೇಕು. ಆರೋಗ್ಯ, ಶಿಕ್ಷಣ, ಸಾಲ ಸೌಲಭ್ಯ ಪಡೆದುಕೊಳ್ಳುವ ಸದುದ್ದೇಶದಿಂದ ಜನರಿಗೆ ಬಿ.ಪಿ.ಎಲ್. ಪಡಿತರ ಚೀಟಿ ವ್ಯವಸ್ಥೆ ಮಾಡಿರುವದು ಸ್ವಾಗತಾರ್ಹ. ಆದರೆ ಸರಕಾರವು ಸದ್ಯ ಬಿ.ಪಿ.ಎಲ್.ಪಡಿತರ ಕಾರ್ಡ ಪಡೆಯುವ ಹಾಗೂ ಅರ್ಜಿ ಸಲ್ಲಿಸುವ ಆನ್‌ಲೈನ್ ಪ್ರಕ್ರಿಯೆ ಬಂದ್ ಮಾಡಿರುವುದನ್ನು ವಿಜಯಪುರ ರಾಜೀವಗಾಂಧಿ ಬಡವರ ಸಂಘದ ಅಧ್ಯಕ್ಷ ಇಬ್ರಾಹಿಂ ಎಂ.ಶಿವಣಗಿ ಖಂಡಿಸಿದ್ದಾರೆ.ಇನ್ನು ಇತ್ತೀಚಿಗೆ ಗ್ಯಾರೆಂಟಿ ಯೋಜನೆಗಳ ಜಾರಿ ಆದ ನಂತರವಂತೂ ಪಡಿತರ ಚೀಟಿಯ ಆನ್‌ಲೈನ್ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನು ಲಕ್ಷಾಂತರ ಜನರು ಸರಕಾರದ ಗ್ಯಾರೆಂಟಿ ಯೋಜನೆಗಳ ಸದುಪಯೋಗ ಪಡೆದುಕೊಂಡಿರುವದಿಲ್ಲ. ಕಡುಬಡವರು ಶಿಕ್ಷಣ, ಆರೋಗ್ಯ ಮತ್ತು ಇನ್ನಿತರ ಸೌಲಭ್ಯ ಪಡೆದುಕೊಳ್ಳಲು ಬಿ.ಪಿ.ಎಲ್.ಪಡಿತರ ಕಾರ್ಡ ಅತ್ಯವಶ್ಯಕವಾಗಿದೆ. ಸರಕಾರವು ಜೂನ್ ೧೫ ರಿಂದ ಆನ್‌ಲೈನ್ ಪ್ರಕ್ರಿಯೆ ಪ್ರಾರಂಭಗೊಳಿಸುವುದಾಗಿ ಹೇಳಿಕೆ ನೀಡಿತ್ತು. ಇನ್ನುವರೆಗೆ ಬಿ.ಪಿ.ಎಲ್.ಪಡಿತರ ಆನ್‌ಲೈನ್ ಪ್ರಕ್ರಿಯೆ ಪ್ರಾರಂಭಗೊಂಡಿಲ್ಲ.ಆದ್ದರಿಂದ ಸರಕಾರವು ಶೀಘ್ರವೇ ಬಿ.ಪಿ.ಎಲ್.ಪಡಿತರ ಆನ್‌ಲೈನ್ ಪ್ರಕ್ರಿಯೇ ಪ್ರಾರಂಭಗೊಂಡ ಪ್ರತಿಯೊಬ್ಬ ಕಡುಬಡವರು ಸಹ ಬಿ.ಪಿ.ಎಲ್.ಪಡಿತರ ಕಾರ್ಡ ಪಡೆದುಕೊಳ್ಳುವ ಹಾಗೂ ಸದುಪಯೋಗ ಪಡೆದುಕೊಳ್ಳಲು ಕ್ರಮ…

Read More

ವಿಜಯಪುರ: ಕಾಂಗ್ರೆಸ್ ಸರಕಾರವು ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಡಗಳ ಅನುದಾನವನ್ನು ಸದರಿ ಜನಾಂಗಕ್ಕೆ ನೀಡದೇ ತನ್ನ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದನ್ನು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮುತ್ತಣ್ಣ ಬ. ಸಾಸನೂರ (ವಕೀಲರು) ಖಂಡಿಸಿದ್ದಾರೆ.ಸರ್ಕಾರದ ಈ ಕ್ರಮ ಕಾನೂನು ಬಾಹಿರವಾಗಿದೆ. ತಮ್ಮ ಬ್ಯಾಳೆ ಬೇಯಿಸಿಕೊಳ್ಳುವುದಕ್ಕೆ ಹಾಗೂ ತಾವು ಅಧಿಕಾರದಲ್ಲಿ ಇರುವುದಕ್ಕಾಗಿ ದೀನ-ದಲಿತರ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡಗಳ ಸುಮಾರು ೨೪ ಸಾವಿರ ಕೋಟಿ ರೂ.ಗಳಷ್ಟು ಅನುದಾನವನ್ನು ತನ್ನ ಗ್ಯಾರೆಂಟಿ ಯೋಜನೆಗಳಿಗೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಾಗೂ ಸಚಿವ ಸಂಪುಟವೇ ನೇರವಾಗಿ ಹೊಣೆಯಾಗುತ್ತದೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದು ಸುಮಾರು ೨ ವರ್ಷಗಳಾಗುತ್ತಿದ್ದು, ಇಲ್ಲಿಯವರೆಗೆ ಯಾವುದೇ ಅಭಿವೃದ್ದಿ ಕಾಮಗಾರಿಗಳ/ ಯೋಜನೆಗಳನ್ನು ವಿಜಯಪುರ ಜಿಲ್ಲೆಯಲ್ಲಿ ಜಾರಿಗೊಳಿಸಿಲ್ಲ. ಇದರಿಂದ ವಿಜಯಪುರ ಜಿಲ್ಲೆಯು ಅಭಿವೃದ್ದಿ ದೃಷ್ಟಿಯಿಂದ ಕುಂಠಿತಗೊಳ್ಳುತ್ತಿದೆ. ಇದಕ್ಕೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರು ಹೊಣೆಗಾರರಾಗುತ್ತಾರೆ.ಏಕೆಂದರೆ ಅವರು ವಿಜಯಪುರ ಜಿಲ್ಲೆಯ ಅಭಿವೃದ್ದಿ ಕಡೆಗೆ ಗಮನ…

Read More

ಕೆಂಭಾವಿ: ಪಟ್ಟಣದಲ್ಲಿ ಹೈಟೆಕ್ ಬಸ್ಸ್ ನಿಲ್ದಾಣ ನಿರ್ಮಾಣ ಮಾಡುವಂತೆ, ಟೀಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಬುಧವಾರ ಸುರಪುರದಲ್ಲಿ ಜರುಗಿದ ತಾಲೂಕು ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿತು.ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಬಂದೇನವಾಜ್ ಆಯ್ ನಾಲತ್ತವಾಡ ಪುರಸಭೆ ಹಾಗೂ ಹೋಬಳಿ ಕೇಂದ್ರವಾಗಿದ್ದು, ಈಗಿರುವ ಬಸ್ಸ್ ನಿಲ್ದಾಣ ಚಿಕ್ಕದಾಗಿ, ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು , ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆ ಇಲ್ಲದಿರುವುದು, ವಯೋವೃದ್ಧರು, ಅಂಗವಿಕಲರ, ಮಹಿಳೆಯರು ಮಕ್ಕಳು ದಿನಂಪ್ರತಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸುಮಾರು 150 ಕ್ಕೂ ಹೆಚ್ಚು ಬಸ್ಸುಗಳು ಓಡಾಡುತ್ತವೆ. ಆದರೆ 10 ಬಸ್ಸುಗಳು ನಿಲ್ಲುವ ಸಾಮರ್ಥ್ಯ ಹೊಂದಿದ್ದು. ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳು ತಮ್ಮ ಸ್ವಾಧೀನದಲ್ಲಿರುವ ಸ್ಥಳದಲ್ಲಿ ಹೈಟೆಕ್ ಬಸ್ಸ್ ನಿಲ್ದಾಣ ನಿರ್ಮಾಣ ಮಾಡಲು ಆಗ್ರಹಿಸಿದರು.

Read More

ತಿಕೋಟಾ: ತಾಲೂಕಿನ ಲೋಹಗಾಂವ ಗ್ರಾಮ ಪಂಚಾಯತಿಗೆ ಬುಧವಾರ ಶ್ರೀಮತಿ ಶೋಭಕ್ಕ ಶಿಳೀನ, ಸಹಾಯಕ ನಿರ್ದೇಶಕರು (ಗ್ರಾ.ಉ & ಪಂ.ರಾ), ತಾಲೂಕು ಪಂಚಾಯತಿ ತಿಕೋಟಾ ಅವರು ಭೇಟಿ ನೀಡಿ, ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಅಮೃತ ಸರೋವರ, ಗೋಮಾಳ & ಹೂಳೆತ್ತುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಕೂಲಿಕಾರರೊಡನೆ ಚರ್ಚೆ ನಡೆಸಿ “ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ನೀವು ನಿಮ್ಮ ಗ್ರಾಮದ ಅಭಿವೃದ್ಧಿಯ ದೃಷ್ಠಿಯಿಂದ ಕೆಲಸ ಮಾಡುತ್ತಿದ್ದೀರಿ ಎಂಬ ಭಾವನೆ ಹೊಂದಬೇಕು. ಏಕೆಂದರೆ, ನೀವು ಮಾಡುವ ಈ ಕಾರ್ಯಗಳು ಕೇವಲ ಒಬ್ಬ ವ್ಯಕ್ತಿಗೆ ಲಾಭವಾಗುದಿಲ್ಲ, ಬದಲಾಗಿ ಇಡೀ ಗ್ರಾಮದ ಜನರಿಗೆ ಈ ಕಾಮಗಾರಿಯಿಂದ ಲಾಭವಿದೆ ಎಂದರು.ಅದಕ್ಕಾಗಿ ನಿಮ್ಮ ಸುತ್ತ-ಮುತ್ಲಿನ ಜನರಿಗೂ ಈ ಯೋಜನೆಯ ಕುರಿತು ಮಾಹಿತಿ ನೀಡಿ ಅವರನ್ನು ಸಹ ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.ಬಳಿಕ ಲೋಹಗಾಂವ ಗ್ರಾಮದ ಮಾದರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊನೆಯಲ್ಲಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಕಾಮಗಾರಿ ಕಡತಗಳ ಪರಿಶೀಲನೆ ಹಾಗೂ ನೀರಿನ…

Read More