ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮದ ಮೂಲಕ ಅಧಿಕಾರಿಗಳಿಗೆ ಎಚ್ಚರಿಸಿದ ನಿವಾಸಿಗಳು, ಸಾಕಷ್ಟು ಅನುದಾನ ಖರ್ಷು ಮಾಡಿ ಈ ಘಟಕ ಸ್ಥಾಪಿಸಲಾಗಿದೆ. ಈ ಘಟಕ ಸ್ಥಾಪನೆಯಿಂದ ಇಲ್ಲಿನ ನಿವಾಸಿಗಳಿಗೆ ಸಾಕಷ್ಟು ಅನುಕೂಲವಾಗಿತ್ತು. ಘಟಕ ಸ್ಥಾಪನೆಯಾದಾಗಿನಿಂದ ಇದರ ನಿರ್ವಹಣೆ ಮಾಡುವವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕಳೆದ ಎರಡು-ಮೂರು ತಿಂಗಳಿನಿಂದ ಈ ಘಟಕದಿಂದ ಸರಿಯಾಗಿ ನೀರು ಬಂದಿಲ್ಲ ಅಲ್ಲದೇ ಘಟಕದ ಬಳಿ ಯಾರೂ ಇರುವದಿಲ್ಲ. ದಿನಂಪ್ರತಿ ಕಾಯಿನ್‌ಗಳಿಲ್ಲದೇ ಸಾಕಷ್ಟು ಜನ ಪರದಾಡುತ್ತಾರೆ. ಹೀಗೆ ನಿರ್ವಹಣೆಯ ಜವಾಬ್ದಾರಿ ಹೊತ್ತವರು ಸರಿಯಾಗಿ ನಿರ್ವಹಿಸದ ಕಾರಣ ಈ ಘಟಕ ಸಧ್ಯ ಬಂದ್ ಆಗಿದ್ದು ಕೂಡಲೇ ಇದನ್ನು ಸರಿಪಡಿಸಿ ಸರಿಯಾಗಿ ನಿರ್ವಹಣೆ ಮಾಡುವವರಿಗೆ ಜವಾಬ್ದಾರಿ ನೀಡುವಂತೆ ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

