ತಿಕೋಟಾ: ತಾಲೂಕಿನ ಲೋಹಗಾಂವ ಗ್ರಾಮ ಪಂಚಾಯತಿಗೆ ಬುಧವಾರ ಶ್ರೀಮತಿ ಶೋಭಕ್ಕ ಶಿಳೀನ, ಸಹಾಯಕ ನಿರ್ದೇಶಕರು (ಗ್ರಾ.ಉ & ಪಂ.ರಾ), ತಾಲೂಕು ಪಂಚಾಯತಿ ತಿಕೋಟಾ ಅವರು ಭೇಟಿ ನೀಡಿ, ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಅಮೃತ ಸರೋವರ, ಗೋಮಾಳ & ಹೂಳೆತ್ತುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಕೂಲಿಕಾರರೊಡನೆ ಚರ್ಚೆ ನಡೆಸಿ “ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ನೀವು ನಿಮ್ಮ ಗ್ರಾಮದ ಅಭಿವೃದ್ಧಿಯ ದೃಷ್ಠಿಯಿಂದ ಕೆಲಸ ಮಾಡುತ್ತಿದ್ದೀರಿ ಎಂಬ ಭಾವನೆ ಹೊಂದಬೇಕು. ಏಕೆಂದರೆ, ನೀವು ಮಾಡುವ ಈ ಕಾರ್ಯಗಳು ಕೇವಲ ಒಬ್ಬ ವ್ಯಕ್ತಿಗೆ ಲಾಭವಾಗುದಿಲ್ಲ, ಬದಲಾಗಿ ಇಡೀ ಗ್ರಾಮದ ಜನರಿಗೆ ಈ ಕಾಮಗಾರಿಯಿಂದ ಲಾಭವಿದೆ ಎಂದರು.
ಅದಕ್ಕಾಗಿ ನಿಮ್ಮ ಸುತ್ತ-ಮುತ್ಲಿನ ಜನರಿಗೂ ಈ ಯೋಜನೆಯ ಕುರಿತು ಮಾಹಿತಿ ನೀಡಿ ಅವರನ್ನು ಸಹ ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.
ಬಳಿಕ ಲೋಹಗಾಂವ ಗ್ರಾಮದ ಮಾದರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊನೆಯಲ್ಲಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಕಾಮಗಾರಿ ಕಡತಗಳ ಪರಿಶೀಲನೆ ಹಾಗೂ ನೀರಿನ ಪರೀಕ್ಷೆ ನಡೆಸಿದರು.
ಈ ವೇಳೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪದ್ಮಿನಿ ಬಿರಾದಾರ, ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ತಾಂತ್ರಿಕ ಸಹಾಯಕ ರೇಷ್ಮಾ ಭಾಗವಾನ, ಕಾರ್ಯದರ್ಶಿ ಕಾಸಪ್ಪ ತಳವಾರ, ಬಿ.ಎಫ್.ಟಿ ಸಂತೋಷ ಗೊಜ್ಜಿ, ಕಾಯಕ ಮಿತ್ರ ಸರೋಜಾ ರಾಠೋಡ, ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

