ವಿಜಯಪುರ : ಕಡುಬಡಜನರಿಗೆ ಕಾಲಕಾಲಕ್ಕೆ ಆಹಾರ ದೊರೆಯಬೇಕು. ಆರೋಗ್ಯ, ಶಿಕ್ಷಣ, ಸಾಲ ಸೌಲಭ್ಯ ಪಡೆದುಕೊಳ್ಳುವ ಸದುದ್ದೇಶದಿಂದ ಜನರಿಗೆ ಬಿ.ಪಿ.ಎಲ್. ಪಡಿತರ ಚೀಟಿ ವ್ಯವಸ್ಥೆ ಮಾಡಿರುವದು ಸ್ವಾಗತಾರ್ಹ. ಆದರೆ ಸರಕಾರವು ಸದ್ಯ ಬಿ.ಪಿ.ಎಲ್.ಪಡಿತರ ಕಾರ್ಡ ಪಡೆಯುವ ಹಾಗೂ ಅರ್ಜಿ ಸಲ್ಲಿಸುವ ಆನ್‌ಲೈನ್ ಪ್ರಕ್ರಿಯೆ ಬಂದ್ ಮಾಡಿರುವುದನ್ನು ವಿಜಯಪುರ ರಾಜೀವಗಾಂಧಿ ಬಡವರ ಸಂಘದ ಅಧ್ಯಕ್ಷ ಇಬ್ರಾಹಿಂ ಎಂ.ಶಿವಣಗಿ ಖಂಡಿಸಿದ್ದಾರೆ.
ಇನ್ನು ಇತ್ತೀಚಿಗೆ ಗ್ಯಾರೆಂಟಿ ಯೋಜನೆಗಳ ಜಾರಿ ಆದ ನಂತರವಂತೂ ಪಡಿತರ ಚೀಟಿಯ ಆನ್‌ಲೈನ್ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನು ಲಕ್ಷಾಂತರ ಜನರು ಸರಕಾರದ ಗ್ಯಾರೆಂಟಿ ಯೋಜನೆಗಳ ಸದುಪಯೋಗ ಪಡೆದುಕೊಂಡಿರುವದಿಲ್ಲ. ಕಡುಬಡವರು ಶಿಕ್ಷಣ, ಆರೋಗ್ಯ ಮತ್ತು ಇನ್ನಿತರ ಸೌಲಭ್ಯ ಪಡೆದುಕೊಳ್ಳಲು ಬಿ.ಪಿ.ಎಲ್.ಪಡಿತರ ಕಾರ್ಡ ಅತ್ಯವಶ್ಯಕವಾಗಿದೆ. ಸರಕಾರವು ಜೂನ್ ೧೫ ರಿಂದ ಆನ್‌ಲೈನ್ ಪ್ರಕ್ರಿಯೆ ಪ್ರಾರಂಭಗೊಳಿಸುವುದಾಗಿ ಹೇಳಿಕೆ ನೀಡಿತ್ತು. ಇನ್ನುವರೆಗೆ ಬಿ.ಪಿ.ಎಲ್.ಪಡಿತರ ಆನ್‌ಲೈನ್ ಪ್ರಕ್ರಿಯೆ ಪ್ರಾರಂಭಗೊಂಡಿಲ್ಲ.
ಆದ್ದರಿಂದ ಸರಕಾರವು ಶೀಘ್ರವೇ ಬಿ.ಪಿ.ಎಲ್.ಪಡಿತರ ಆನ್‌ಲೈನ್ ಪ್ರಕ್ರಿಯೇ ಪ್ರಾರಂಭಗೊಂಡ ಪ್ರತಿಯೊಬ್ಬ ಕಡುಬಡವರು ಸಹ ಬಿ.ಪಿ.ಎಲ್.ಪಡಿತರ ಕಾರ್ಡ ಪಡೆದುಕೊಳ್ಳುವ ಹಾಗೂ ಸದುಪಯೋಗ ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಇಬ್ರಾಹಿಂ ಶಿವಣಗಿ ಪ್ರಕಟಣೆಯಲ್ಲಿ ಆಗ್ರಹಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
