Author: editor.udayarashmi@gmail.com

ಸಿಂದಗಿ: ಯೋಗವು ವೈಯಕ್ತಿಕ ಆರೋಗ್ಯ ಮಾತ್ರವಲ್ಲದೇ ಸಾಮಾಜಿಕ ಯೋಗಕ್ಷೇಮಕ್ಕೂ ಕೊಡುಗೆ ನೀಡುತ್ತದೆ ಎಂದು ಸಿಂದಗಿಯ ಎನ್.ಬಿ.ಎನ್ ಫೌಂಡೇಶನ್ ಮುಖ್ಯಸ್ಥ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.ಅವರು ಪಟ್ಟಣದ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಲಿಟಲ್ ವಿಂಗ್ಸ್ ಪ್ರಿ ಸ್ಕೂಲ್ ಹಾಗೂ ಎನ್.ಬಿ.ಎನ್ ಫೌಂಡೇಶನ್ ವತಿಯಿಂದ ನಡೆದ ಅಂತರರಾಷ್ಟ್ರೀಯ ಯೋಗದಿನಾಚರಣೆ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಯೋಗವು ವೈಯಕ್ತಿಕ ಮತ್ತು ಸಾಮಾಜಿಕ ಆರೋಗ್ಯದ ಪರಸ್ಪರ ಸಂಬಂಧವನ್ನು ಒತ್ತಿಹೇಳುತ್ತದೆ. ನಿತ್ಯ ಯೋಗ ಮಾಡುವುದರಿಂದ ನಮ್ಮಯ ಅನೇಕ ರೋಗಗಳು ದೂರವಾಗುವುದಲ್ಲದೆ ನಮ್ಮನ್ನು ಸದಾ ಹಸನ್ಮುಖಿಯಾಗಿಸುತ್ತದೆ ಎಂದರು.ಈ ವೇಳೆ ಸಾನಿಧ್ಯ ವಹಿಸಿದ ಕೆರುಟಗಿ ಸಿದ್ದರಾಮೇಶ್ವರ ಮಠದ ಅಪ್ಪಯ್ಯ ಹಿರೇಮಠ ಪೂಜ್ಯರು, ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಎಚ್.ಜಿ.ಪದವಿ ಪೂರ್ವ ಕಾಲೇಜಿನ ಉಪನ್ಯಾಸ ಸಿದ್ದಲಿಂಗ ಕಿಣಗಿ, ಲಿಟಲ ವಿಂಗ್ಸ್ ಶಾಲೆಯ ಮಾರ್ಗದರ್ಶಕ ಸಿದ್ದಲಿಂಗ ಚೌಧರಿ ಮಾತನಾಡಿದರು.ಈ ವೇಳೆ ಯೋಗ ಶಿಕ್ಷಕ ಸಾಯಬಣ್ಣ ಪಿಳಬಂಟಿ ಮಕ್ಕಳಿಗೆ ಯೋಗದ ತರಬೇತಿ ನೀಡಿದರು. ನಂತರ ಶಾಲಾ ಮಕ್ಕಳು ವಿವಿಧ ಯೋಗಾಸನದ ಭಂಗಿಗಳನ್ನು ಮಾಡಿದರು.ವೇದಿಕೆ ಮೇಲೆ…

Read More

ವಿಜಯಪುರ: ಪಟ್ಟಣದ ರಸ್ತೆಯಲ್ಲಿರುವ ಹೆಸರಾಂತ ವಿವಾ (VIVA) ಫಿಟ್ನೆಸ್ ಕ್ಲಾಸಿಸ್ ನಲ್ಲಿ ಶುಕ್ರವಾರ ಮಹಿಳೆಯರಿಗೆ ಯೋಗ ತರಬೇತಿ ನೀಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.’ವಿವಾ ಫಿಟ್ನೆಸ್’ ಕ್ಲಾಸಿಸ್ ಮುಖ್ಯಸ್ಥೆ ಶ್ರೀಮತಿ ವಿಜಯಲಕ್ಷ್ಮಿ ಗಿರಿಗಾಂವಕರ ಯೋಗದ ಮಹತ್ವ ಮತ್ತು ಪ್ರಯೋಜನಗಳ ಕುರಿತು ವಿವರಿಸಿದರು.’ಉದಯರಶ್ಮಿ’ ದಿನಪತ್ರಿಕೆ ಪ್ರಕಾಶಕಿ ಶೈಲಾ ಮಣೂರ, ಪುಷ್ಪಾ ಗಡಿನಾಯಕ, ಸವಿತಾ ಅಗಸರ, ಹೇಮಾ ದೇಸಾಯಿ, ರಾಜೇಶ್ವರಿ, ಪ್ರಿಯಾಂಕ, ಐಶ್ವರ್ಯ, ಯಶೋಧ, ಸುಮಂಗಲಾ ಸೇರಿದಂತೆ ಹಲವರಿದ್ದರು.

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ- ಗದಗ ಯೋಗವು ಒಂದು ವಿಜ್ಞಾನವಾಗಿದ್ದು ಮನುಷ್ಯ ಸಂಕುಲವು ಅನುಭವಿಸುತ್ತಿರುವ ಎಲ್ಲಾ ದುಃಖ ನಿರಾಶೆ ನೋವು ಜಂಜಡಗಳಿಗೆ, ಮಾನಸಿಕ ಸಂಕಷ್ಟಗಳಿಗೆ ರಾಮಬಾಣವಾಗಿದೆ. ಆದ್ದರಿಂದಲೇ ಯೋಗಃ ಚಿತ್ರವೃತ್ತಿ ನಿರೋಧಹ ಎಂದು ಹೇಳುತ್ತಾರೆ.ಚಿತ್ತ ದ ಹಲವಾರು ವೃತ್ತಿಗಳನ್ನು ಅಂದರೆ ವಿವಿಧ ಬಗೆಯ ಮಾನಸಿಕ ಕ್ಲೇಶಗಳನ್ನು ಕಳೆಯುವ ಶಕ್ತಿ ಯೋಗಕ್ಕಿದೆ.”ಯೋಗೇನ ಚಿತ್ತಸ್ಯ ಪದೇನ ವಾಚಾಮಲಂ ಶರೀರಸ್ಯಚ ವೈದ್ಯಕೇನಾಯೋಪಾಕರೋತ್ತಮ ಪ್ರವರಂ ಮುನೀನ ಪತಂಜಲಿಂ ಪ್ರಾಂಜಲಿಂ ರಾನತೋಸ್ಮಿ” ಎಂಬುದು ಭಾರತ ದೇಶಕ್ಕೆ ಅಷ್ಟೇ ಏಕೆ ಇಡೀ ವಿಶ್ವಕ್ಕೆ ಯೋಗದ ಜ್ಞಾನವನ್ನು ಕೊಟ್ಟ ಪತಂಜಲಿ ಮಹರ್ಷಿಯನ್ನು ಕುರಿತಾದ ಪ್ರಾರ್ಥನಾ ಮಂತ್ರ.2014ರಲ್ಲಿ ವಿಶ್ವಸಂಸ್ಥೆಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಅನುಮೋದಿಸಲ್ಪಟ್ಟಿತು. 2015 ಜೂನ್ 21ರಂದು ಮೊತ್ತ ಮೊದಲ ಬಾರಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಡೀ ಜಗತ್ತಿನಲ್ಲಿಯೇ ಆಚರಿಸಲಾಯಿತು. ತನ್ಮೂಲಕ ಜಗತ್ತಿನ ಹಲವಾರು ರಾಷ್ಟ್ರಗಳು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತವೆ. ಜೂನ್ 21ರಂದೇ ಯೋಗ ದಿನವನ್ನು ಆಚರಿಸಲು ಕಾರಣ…

Read More

ಜಿಲ್ಲಾ ಉಸ್ತುವಾರಿ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾಹಿತಿ ಬೆಂಗಳೂರು: ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನಲ್ಲಿ ಇರುವ ಐತಿಹಾಸಿಕ ಮಮದಾಪುರ ಕೆರೆಯನ್ನು ಪುನಶ್ಚೇತನಗೊಳಿಸಲು ಕೋಕಾಕೋಲಾ ಕಂಪನಿ ಮುಂದೆ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶುಕ್ರವಾರ ಹೇಳಿದ್ದಾರೆ.ಈ ಬಗ್ಗೆ ಕಂಪನಿಯ ಉನ್ನತಾಧಿಕಾರಿಗಳಾದ ಹಿಮಾಂಶು ಪ್ರಿಯದರ್ಶಿ ಮತ್ತು ಮುಕುಂದ್ ತ್ರಿವೇದಿ ಸಚಿವರನ್ನು ಇಲ್ಲಿ ಭೇಟಿ ಮಾಡಿ ಚರ್ಚಿಸಿದರು.16ನೇ ಶತಮಾನದಲ್ಲಿ ಆದಿಲ್ ಶಾಹಿ ಸುಲ್ತಾನರ ಕಾಲದಲ್ಲಿ ನಿರ್ಮಿತವಾಗಿರುವ ಮಮದಾಪುರ ಕೆರೆಯು ರಾಜ್ಯದ ಅತಿದೊಡ್ಡ ಕೆರೆಗಳ ಪೈಕಿ ಒಂದಾಗಿದೆ. ಕೆರೆಯ ಸುತ್ತಮುತ್ತ ಹಸಿರಿನಿಂದ ತುಂಬಿರುವ 1,654 ಎಕರೆ ಪ್ರದೇಶದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ನೆನಪಿನಲ್ಲಿ ಅರಣ್ಯ ಅಭಿವೃದ್ಧಿ ಪಡಿಸಲಾಗುತ್ತದೆ. ಕೆರೆ ಪುನಶ್ಚೇತನದ ಬಳಿಕ ಈ ಸ್ಥಳವು ಪ್ರವಾಸಿ ಆಕರ್ಷಣೆಯ ತಾಣವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕೋಕಾಕೋಲಾ ಕಂಪನಿಯು ಕೆರೆಗೆ ಸಂಪರ್ಕಿಸುವ ನಾಲೆಗಳಲ್ಲಿ ಬಾಂದಾರವನ್ನು ನಿರ್ಮಿಸಲಿದೆ. ಜೊತೆಗೆ ಮಮದಾಪುರ ಗ್ರಾಮದ ಮುಂಭಾಗದಲ್ಲಿ ಇರುವ 800 ಮೀಟರ್ ಉದ್ದದ…

Read More

ಕೆಂಭಾವಿ: ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಪ್ರಾಂಶುಪಾಲ ಡಾ.ನಾಗಪ್ಪ ಚಾವಲ್ಕರ್ ಮಾತನಾಡಿ, ಯೋಗವನ್ನು ‌ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಅಧಿಕಾರ, ಅಂತಸ್ತು, ಹಣ್ಣ ಮುಖ್ಯವಲ್ಲ, ಆರೋಗ್ಯ ಮುಖ್ಯ, ಹಾಗಾಗಿ ವಿದ್ಯಾರ್ಥಿಗಳು ದಿನಂಪ್ರತಿ ಬೆಳಿಗ್ಗೆ ಅರ್ಧ ಗಂಟೆ ಯೋಗಾಭ್ಯಾಸ ಮಾಡುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದರು.ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ ಸಿದ್ದಲಿಂಗ ರಾಠೋಡ್ ಮಾತನಾಡಿ, ಯೋಗವು ಮನಸ್ಸು ಮತ್ತು ದೇಹ ಗಟ್ಟಿಗೊಳಿಸಿ, ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಎಂದವರು ಪ್ರತಿ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನವಾಗಿ ಆಚರಿಸಲಾಗುತ್ತದೆ ಎಂದರು.ಇದೇ ವೇಳೆ ಡಾ ನಂದಾ ವಾರದ, ಡಾ ಬಸಮ್ಮ ಎಸ್, ನಸ್ರೀನ್ ತಾಜ್, ಗುಲಾಂ ಮೈಹಿಬೂಬಸಾಬ್, ಮಾಸುಮ ಅಲಿ ನಾಶಿ ಡಾ ಯಂಕನಗೌಡ ಪಾಟೀಲ, ಮಲ್ಲಣ್ಣ ಬಿಳೇಬಾವಿ, ಶರಣಪ್ಪ ನಡಕೂರ, ಡಾ ಆನಂದ ರೇವಡಿ, ಬಸವರಾಜ ಹೋಳಿಕಟ್ಟಿ, ಮರಿಸ್ವಾಮಿ,…

Read More

ವಿಜಯಪುರ: ಪಟ್ಟಣದ ರಿಂಗ್ ರಸ್ತೆರಲ್ಲಿರುವ ವಿವಾ (VIVA) ಫಿಟ್ನೆಸ್ ಕ್ಲಾಸಿಸ್ ನಲ್ಲಿ ಶುಕ್ರವಾರ ಮಹಿಳೆಯರಿಗೆ ಯೋಗ ತರಬೇತಿ ನೀಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.’ವಿವಾ ಫಿಟ್ನೆಸ್’ ಕ್ಲಾಸಿಸ್ ಮುಖ್ಯಸ್ಥೆ ಶ್ರೀಮತಿ ವಿಜಯಲಕ್ಷ್ಮಿ ಗಿರಿಗಾಂವಕರ ಯೋಗದ ಮಹತ್ವ ಮತ್ತು ಪ್ರಯೋಜನಗಳ ಕುರಿತು ವಿವರಿಸಿದರು.’ಉದಯರಶ್ಮಿ’ ದಿನಪತ್ರಿಕೆ ಪ್ರಕಾಶಕಿ ಶೈಲಾ ಮಣೂರ, ಪುಷ್ಪಾ ಗಡಿನಾಯಕ, ಸವಿತಾ ಅಗಸರ, ಹೇಮಾ ದೇಸಾಯಿ, ರಾಜೇಶ್ವರಿ, ಪ್ರಿಯಾಂಕ, ಐಶ್ವರ್ಯ, ಯಶೋಧ, ಸುಮಂಗಲಾ ಸೇರಿದಂತೆ ಹಲವರಿದ್ದರು.

Read More

ಚಡಚಣ: ಯೋಗ ಎಂದರೆ, ಒಂದು ಆಧ್ಯಾತ್ಮಿಕ ಆಚರಣೆ. ಇದು ವಿಶ್ವಕ್ಕೆ ಭಾರತದ ಕೊಡುಗೆ. ವಿಶ್ವದಲ್ಲಿ ಯೋಗದ ಕುರಿತಾದ ಭರವಸೆ ಮತ್ತು ವಿಶ್ವಾಸಗಳು ಹೆಚ್ಚುತ್ತಿರುವ ಪ್ರತೀಕವೇ ಅಂತಾರಾಷ್ಟ್ರೀಯ ಯೋಗ ದಿನವೆಂದು ಶಿಕ್ಷಣ ಸಂಯೋಜಕ ಸಂಗಮೇಶ ಸೂರಜ ಹೇಳಿದರು.ಅವರು ಶುಕ್ರವಾರ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ಆಸನ, ಪ್ರಾಣಾಯಾಮ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಮೀರಿದಂತಹ ಕರ್ಮಾಚರಣೆಯೇ ಯೋಗ ಎಂದರು.ಶಿಕ್ಷಕ ಬಸವರಾಜ ಕರಜಗಿ ಮಾತನಾಡಿ, ಯೋಗ ಯಾವುದೇ ಜಾತಿ,ಮತ, ಧರ್ಮಕ್ಕೆ ಸೀಮಿತವಾದುದಲ್ಲ. ಶರೀರ, ಮನಸ್ಸು ಮತ್ತು ಆತ್ಮದ ಕನ್ನಡಿಯಾಗಿ ವರ್ತಿಸುವ ಪ್ರಬಲ ಶಕ್ತಿಯಾಗಿದೆ. ಯೋಗ ಈ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿದಿನವೂ ಆಚರಣೆಯಲ್ಲಿರಲಿ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ವಹಿಸಿದ್ದರು. ಶಿಕ್ಷಕಿ ಸುರೇಖಾ ಝುಲ್ಪಿಯವರ ಮಾರ್ಗದರ್ಶನದಲ್ಲಿ ಯೋಗಾಸನ ಜರುಗಿತು.ಯೋಗಾಸನದಲ್ಲಿ ಮುದ್ದು ಮಕ್ಕಳು, ಎಲ್ಲ ಗುರುಗಳು ಹಾಗೂ ಗುರುಮಾತೆಯರು, ಅತಿಥಿ ಗುರುಮಾತೆಯರು ಹಾಗೂ ಅಡುಗೆ ಸಹೋದರಿಯರು ಭಾಗವಹಿಸಿದ್ದರು.ಶಿಕ್ಷಕ ದುಂಡಪ್ಪ…

Read More

ಮುದ್ದೇಬಿಹಾಳ: ತಾಲ್ಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಪ್ರೌಢಶಾಲೆ ಹಾಗೂ ಮಾತೋಶ್ರೀ ಶಿವಲಿಂಗಮ್ಮ ಬ ನಾಡಗೌಡರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆವನ್ನು ಸಂಸ್ಥೆಯ ಅಧ್ಯಕ್ಷರಾದ ಕೆ ವಾಯ್ ಬಿರಾದಾರ ಹಾಗೂ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ಎಸ್ ಬಿ ನಾಡಗೌಡರ(ಧಣಿ), ಹಾಗೂ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು, ಹಾಗೂ ಸಹ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.ದೈಹಿಕ ಶಿಕ್ಷಕರಾದ ಸಚೀನ ರಾಠೋಡ ಮಕ್ಕಳಿಗೆ ಯೋಗಾಸನ ಮಾಡಿಸಿದರು. ಪ್ರಕಾಶ ಗೊಂದಳೆ ಶಿಕ್ಷಕರು ಕಾರ್ಯಕ್ರಮವನ್ನು ನಿರೂಪಿಸಿದರು.

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಯೋಗ ದಿನಾಚರಣೆ ವಿಜಯಪುರ: ದೈನಂದಿನ ಚಟುವಟಿಕೆಗಳಲ್ಲಿ ಯೋಗ ಅಳವಡಿಸಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಸದೃಡತೆಗೆ ಯೋಗವು ತುಂಬಾ ಸಹಾಯಕಾರಿಯಾಗಿದೆ. ನಮ್ಮ ಬದುಕಿನಲ್ಲಿ ದಿನನಿತ್ಯದ ಚಟುವಟಿಕೆಗಳಲ್ಲಿ ಯೋಗಾಸನ ಮಹತ್ವದ್ದಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಹೇಳಿದರು.ಶುಕ್ರವಾರ ನಗರದ ಬಿ.ಎಲ್.ಡಿ.ಇ.ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ,ಎನ್ ಎಸ್ ಎಸ್ ಘಟಕ ಹಾಗೂ ಐಐಸಿ ಸಂಯೋಜನೆಯಡಿಯಲ್ಲಿ ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಯೋಗವು ಒಂದು ಸರ್ವ ಸಿದ್ದಿಸಾಧವಾಗಿದೆ, ನಮ್ಮ ದೈಹಿಕ, ಮಾನಸಿಕ ಸದೃಡತೆಗೆ ಹಾಗೂ ನಮ್ಮ ಭವಿಷ್ಯದ ಸುಂದರ ಬದುಕಿಗೆ ಅಂತ್ಯದ ಅವಶ್ಯಕವಾಗಿದೆ. ಯೋಗವು ಕೇವಲ ಒಂದು ದಿನಕ್ಕೆ ಆಚರಣೆಗೆ ಸೀಮಿತವಾಗದೇ ನಿತ್ಯದ ಬದುಕಿನಲ್ಲಿ ಸದಾ ಯೋಗಾಸನ ಮಾಡುವ ಮೂಲಕ ವ್ಯಕ್ತಿಯೂ ತನ್ನ ಆರೋಗ್ಯವನ್ನು ಕಾಪಡಿಕೊಳ್ಳವಂತಾಗಬೇಕು. ವಿದ್ಯಾರ್ಥಿಗಳು ಪ್ರತಿನಿತ್ಯವು ಯೋಗಾಸನ ಆರಂಭಿಸುವ ಮೂಲಕವೇ ತನ್ನ ಕಾರ್ಯ ಚಟುವಟಿಕೆಗಳನ್ನು ಆರಂಭಿಸಬೇಕು. ಇದರಿಂದ ನಿತ್ಯದ ಕಾರ್ಯದಲ್ಲಿ ಉಲ್ಲಾಸ ಉತ್ಸಾಹ ಎದ್ದು…

Read More

ವಿಜಯಪುರ: ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕರೆ ನೀಡಿದರು.ಅವರು ಆಯುಷ್ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜೂನ್ ೨೧ರಂದು ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ನಡೆದ ೧೦ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.ದೈಹಿಕ, ಮಾನಸಿಕ ಸದೃಢತೆಗೆ ಯೋಗ ಸಹಕಾರಿ. ಜೀವನದಲ್ಲಿ ಪ್ರತಿನಿತ್ಯ ಯೋಗ ರೂಡಿಸಿಕೊಳ್ಳಬೇಕು. ನಿಯಮಿತ ಯೋಗ ಮಾಡುವುದರ ಮೂಲಕ ಆರೋಗ್ಯ ದೃಢತೆ ಹಾಗೂ ಚೈತನ್ಯಯುಕ್ತ ಬದುಕು ನಡೆಸಬಹುದಾಗಿದೆ. ಯೋಗ ರೂಢಿಸಿಕೊಳ್ಳುವ ಮೂಲಕ ಆರೋಗ್ಯಯುತ ಜೀವನ ನಡೆಸಬಹುದು.ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಭಾರತ. ಜೂನ್೨೧ ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ದೇಶಗಳು ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.ಸಾಮೂಹಿಕ ಯೋಗಾಭ್ಯಾಸ:‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ನಡೆದ ೧೦ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ…

Read More