ಕೆಂಭಾವಿ: ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಾಂಶುಪಾಲ ಡಾ.ನಾಗಪ್ಪ ಚಾವಲ್ಕರ್ ಮಾತನಾಡಿ, ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಅಧಿಕಾರ, ಅಂತಸ್ತು, ಹಣ್ಣ ಮುಖ್ಯವಲ್ಲ, ಆರೋಗ್ಯ ಮುಖ್ಯ, ಹಾಗಾಗಿ ವಿದ್ಯಾರ್ಥಿಗಳು ದಿನಂಪ್ರತಿ ಬೆಳಿಗ್ಗೆ ಅರ್ಧ ಗಂಟೆ ಯೋಗಾಭ್ಯಾಸ ಮಾಡುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ ಸಿದ್ದಲಿಂಗ ರಾಠೋಡ್ ಮಾತನಾಡಿ, ಯೋಗವು ಮನಸ್ಸು ಮತ್ತು ದೇಹ ಗಟ್ಟಿಗೊಳಿಸಿ, ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ ಎಂದವರು ಪ್ರತಿ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನವಾಗಿ ಆಚರಿಸಲಾಗುತ್ತದೆ ಎಂದರು.
ಇದೇ ವೇಳೆ ಡಾ ನಂದಾ ವಾರದ, ಡಾ ಬಸಮ್ಮ ಎಸ್, ನಸ್ರೀನ್ ತಾಜ್, ಗುಲಾಂ ಮೈಹಿಬೂಬಸಾಬ್, ಮಾಸುಮ ಅಲಿ ನಾಶಿ ಡಾ ಯಂಕನಗೌಡ ಪಾಟೀಲ, ಮಲ್ಲಣ್ಣ ಬಿಳೇಬಾವಿ, ಶರಣಪ್ಪ ನಡಕೂರ, ಡಾ ಆನಂದ ರೇವಡಿ, ಬಸವರಾಜ ಹೋಳಿಕಟ್ಟಿ, ಮರಿಸ್ವಾಮಿ, ಶರಣಬಸವ ಅಂಗಡಿ, ಜಟ್ಟೇಪ್ಪ ಹೊಸ್ಮನಿ, ಮಲ್ಲಿಕಾರ್ಜುನ ಕಲಾಲ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೈಹಿಕ ನಿರ್ದೇಶಕ ಡಾ ಪ್ರಸಾದ್ ಭಂಡಾರಿ, ಉಪನ್ಯಾಸಕ ಮಂಜುನಾಥ ಚೆಟ್ಟಿ ಹಾಗೂ ಬಸವರಾಜ ಪಾಟೀಲ ವಿದ್ಯಾರ್ಥಿಗಳಿಗೆ ಯೋಗಾಸನದ ವಿವಿಧ ಭಂಗಿಗಳು ಹಾಗೂ ಉಸಿರಾಟ ಪ್ರಕ್ರಿಯೆ ಮಾಹಿತಿ ನೀಡುತ್ತಾ ಯೋಗ ಮಾಡಿ ತೋರಿಸಿದರು ಹಾಗೆಯೇ ವಿದ್ಯಾರ್ಥಿಗಳ ಜೊತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸಾತ್ ನೀಡಿದರು. ನಂತರ ಬಿಕಾಂ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ ವೆಂಕಟೇಶ್ ಮಾಡಿದ ಯೋಗಾಸನದ ವಿವಿಧ ಭಂಗಿಗಳು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದು ವಿಶೇಷ.
Subscribe to Updates
Get the latest creative news from FooBar about art, design and business.
Related Posts
Add A Comment

