ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಯೋಗ ದಿನಾಚರಣೆ
ವಿಜಯಪುರ: ದೈನಂದಿನ ಚಟುವಟಿಕೆಗಳಲ್ಲಿ ಯೋಗ ಅಳವಡಿಸಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಸದೃಡತೆಗೆ ಯೋಗವು ತುಂಬಾ ಸಹಾಯಕಾರಿಯಾಗಿದೆ. ನಮ್ಮ ಬದುಕಿನಲ್ಲಿ ದಿನನಿತ್ಯದ ಚಟುವಟಿಕೆಗಳಲ್ಲಿ ಯೋಗಾಸನ ಮಹತ್ವದ್ದಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಹೇಳಿದರು.
ಶುಕ್ರವಾರ ನಗರದ ಬಿ.ಎಲ್.ಡಿ.ಇ.ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ,ಎನ್ ಎಸ್ ಎಸ್ ಘಟಕ ಹಾಗೂ ಐಐಸಿ ಸಂಯೋಜನೆಯಡಿಯಲ್ಲಿ ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಯೋಗವು ಒಂದು ಸರ್ವ ಸಿದ್ದಿಸಾಧವಾಗಿದೆ, ನಮ್ಮ ದೈಹಿಕ, ಮಾನಸಿಕ ಸದೃಡತೆಗೆ ಹಾಗೂ ನಮ್ಮ ಭವಿಷ್ಯದ ಸುಂದರ ಬದುಕಿಗೆ ಅಂತ್ಯದ ಅವಶ್ಯಕವಾಗಿದೆ. ಯೋಗವು ಕೇವಲ ಒಂದು ದಿನಕ್ಕೆ ಆಚರಣೆಗೆ ಸೀಮಿತವಾಗದೇ ನಿತ್ಯದ ಬದುಕಿನಲ್ಲಿ ಸದಾ ಯೋಗಾಸನ ಮಾಡುವ ಮೂಲಕ ವ್ಯಕ್ತಿಯೂ ತನ್ನ ಆರೋಗ್ಯವನ್ನು ಕಾಪಡಿಕೊಳ್ಳವಂತಾಗಬೇಕು. ವಿದ್ಯಾರ್ಥಿಗಳು ಪ್ರತಿನಿತ್ಯವು ಯೋಗಾಸನ ಆರಂಭಿಸುವ ಮೂಲಕವೇ ತನ್ನ ಕಾರ್ಯ ಚಟುವಟಿಕೆಗಳನ್ನು ಆರಂಭಿಸಬೇಕು. ಇದರಿಂದ ನಿತ್ಯದ ಕಾರ್ಯದಲ್ಲಿ ಉಲ್ಲಾಸ ಉತ್ಸಾಹ ಎದ್ದು ಕಾಣುತ್ತದೆ. ಅಲ್ಲದೆ ಮನಸ್ಸಿನ ಏಕಾಗ್ರತೆಗೆ ಒಂದು ಸೂಕ್ತ ಸಾಧನ ಎಂದು ಯೋಗಾಸನದ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ ಆರ್.ಎಮ್.ಮಿರ್ದೆ, ನಿವೃತ್ತ ಪ್ರಾಚಾರ್ಯ ಡಾ.ಎ.ಎಸ್.ಪೂಜಾರ, ಡಾ.ಯು.ಎಸ್.ಪೂಜೇರಿ, ಪ್ರೊ.ಬಿ.ಎಸ್.ಬಗಲಿ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್ ಪಾಟೀಲ, ದೈಹಿಕ ನಿರ್ದೇಶಕ ಎಸ್ ಕೆ ಪಾಟೀಲ್, ಎನ್ ಎಸ್ ಎಸ್ ಸಂಯೋಜನಾಧಿಕಾರಿ ಪ್ರೊ.ಮಿಲನ್ ರಾಠೋಡ್, ಡಾ.ತರನ್ನಮ್ ಜಬೀನ್ ಖಾನ್, ಡಾ.ಕೆ.ಮಹೇಶಕುಮಾರ,ಪ್ರೊ.ವಿದ್ಯಾ ಪಾಟೀಲ, ಮಹಾವಿದ್ಯಾಲಯದ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರಿದ್ದರು.

