ಚಡಚಣ: ಯೋಗ ಎಂದರೆ, ಒಂದು ಆಧ್ಯಾತ್ಮಿಕ ಆಚರಣೆ. ಇದು ವಿಶ್ವಕ್ಕೆ ಭಾರತದ ಕೊಡುಗೆ. ವಿಶ್ವದಲ್ಲಿ ಯೋಗದ ಕುರಿತಾದ ಭರವಸೆ ಮತ್ತು ವಿಶ್ವಾಸಗಳು ಹೆಚ್ಚುತ್ತಿರುವ ಪ್ರತೀಕವೇ ಅಂತಾರಾಷ್ಟ್ರೀಯ ಯೋಗ ದಿನವೆಂದು ಶಿಕ್ಷಣ ಸಂಯೋಜಕ ಸಂಗಮೇಶ ಸೂರಜ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಆಸನ, ಪ್ರಾಣಾಯಾಮ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಮೀರಿದಂತಹ ಕರ್ಮಾಚರಣೆಯೇ ಯೋಗ ಎಂದರು.
ಶಿಕ್ಷಕ ಬಸವರಾಜ ಕರಜಗಿ ಮಾತನಾಡಿ, ಯೋಗ ಯಾವುದೇ ಜಾತಿ,ಮತ, ಧರ್ಮಕ್ಕೆ ಸೀಮಿತವಾದುದಲ್ಲ. ಶರೀರ, ಮನಸ್ಸು ಮತ್ತು ಆತ್ಮದ ಕನ್ನಡಿಯಾಗಿ ವರ್ತಿಸುವ ಪ್ರಬಲ ಶಕ್ತಿಯಾಗಿದೆ. ಯೋಗ ಈ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿದಿನವೂ ಆಚರಣೆಯಲ್ಲಿರಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ವಹಿಸಿದ್ದರು. ಶಿಕ್ಷಕಿ ಸುರೇಖಾ ಝುಲ್ಪಿಯವರ ಮಾರ್ಗದರ್ಶನದಲ್ಲಿ ಯೋಗಾಸನ ಜರುಗಿತು.
ಯೋಗಾಸನದಲ್ಲಿ ಮುದ್ದು ಮಕ್ಕಳು, ಎಲ್ಲ ಗುರುಗಳು ಹಾಗೂ ಗುರುಮಾತೆಯರು, ಅತಿಥಿ ಗುರುಮಾತೆಯರು ಹಾಗೂ ಅಡುಗೆ ಸಹೋದರಿಯರು ಭಾಗವಹಿಸಿದ್ದರು.
ಶಿಕ್ಷಕ ದುಂಡಪ್ಪ ಬಗಲಿ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿ ವ್ಹಿ ಎಸ್ ಪತ್ತಾರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

