ಸಿಂದಗಿ: ಯೋಗವು ವೈಯಕ್ತಿಕ ಆರೋಗ್ಯ ಮಾತ್ರವಲ್ಲದೇ ಸಾಮಾಜಿಕ ಯೋಗಕ್ಷೇಮಕ್ಕೂ ಕೊಡುಗೆ ನೀಡುತ್ತದೆ ಎಂದು ಸಿಂದಗಿಯ ಎನ್.ಬಿ.ಎನ್ ಫೌಂಡೇಶನ್ ಮುಖ್ಯಸ್ಥ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ಅವರು ಪಟ್ಟಣದ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಲಿಟಲ್ ವಿಂಗ್ಸ್ ಪ್ರಿ ಸ್ಕೂಲ್ ಹಾಗೂ ಎನ್.ಬಿ.ಎನ್ ಫೌಂಡೇಶನ್ ವತಿಯಿಂದ ನಡೆದ ಅಂತರರಾಷ್ಟ್ರೀಯ ಯೋಗದಿನಾಚರಣೆ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗವು ವೈಯಕ್ತಿಕ ಮತ್ತು ಸಾಮಾಜಿಕ ಆರೋಗ್ಯದ ಪರಸ್ಪರ ಸಂಬಂಧವನ್ನು ಒತ್ತಿಹೇಳುತ್ತದೆ. ನಿತ್ಯ ಯೋಗ ಮಾಡುವುದರಿಂದ ನಮ್ಮಯ ಅನೇಕ ರೋಗಗಳು ದೂರವಾಗುವುದಲ್ಲದೆ ನಮ್ಮನ್ನು ಸದಾ ಹಸನ್ಮುಖಿಯಾಗಿಸುತ್ತದೆ ಎಂದರು.
ಈ ವೇಳೆ ಸಾನಿಧ್ಯ ವಹಿಸಿದ ಕೆರುಟಗಿ ಸಿದ್ದರಾಮೇಶ್ವರ ಮಠದ ಅಪ್ಪಯ್ಯ ಹಿರೇಮಠ ಪೂಜ್ಯರು, ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಎಚ್.ಜಿ.ಪದವಿ ಪೂರ್ವ ಕಾಲೇಜಿನ ಉಪನ್ಯಾಸ ಸಿದ್ದಲಿಂಗ ಕಿಣಗಿ, ಲಿಟಲ ವಿಂಗ್ಸ್ ಶಾಲೆಯ ಮಾರ್ಗದರ್ಶಕ ಸಿದ್ದಲಿಂಗ ಚೌಧರಿ ಮಾತನಾಡಿದರು.
ಈ ವೇಳೆ ಯೋಗ ಶಿಕ್ಷಕ ಸಾಯಬಣ್ಣ ಪಿಳಬಂಟಿ ಮಕ್ಕಳಿಗೆ ಯೋಗದ ತರಬೇತಿ ನೀಡಿದರು. ನಂತರ ಶಾಲಾ ಮಕ್ಕಳು ವಿವಿಧ ಯೋಗಾಸನದ ಭಂಗಿಗಳನ್ನು ಮಾಡಿದರು.
ವೇದಿಕೆ ಮೇಲೆ ಶಕುಂತಲಾ ಹಿರೇಮಠ, ಬಸವರಾಜ ಶೀಲವಂತ, ಪ್ರಶಾಂತಗೌಡ ಪಾಟೀಲ ಕನ್ನೋಳ್ಳಿ, ಶಿವಶಂಕರಗೌಡ ಬಿರಾದಾರ, ಭಾರತಿ ಚೌಧರಿ ಇದ್ದರು.
ಕಾರ‍್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರಾದ ಪೂಜಾ ಗಾಯಕವಾಡ, ನಗ್ಮಾ ಪಾಟೀಲ, ಭಾಗ್ಯಶ್ರೀ ಕೊತಂಬರಿ, ಪ್ರೀಯಾಂಕ ಹೊಸಮನಿ, ನಾಗರೇಖಾ, ಪ್ರೀತಿ ಬೆಳಗಾವಿ, ಸಂಗೀತಾ ಕರಾಬಿ, ಸುರಭಿ, ಪೂರ್ಣಿಮಾ ಗುಮಠೆ, ಲಕ್ಷ್ಮೀ, ಪ್ರದೀಪ ಹಿರೇಮಠ, ಅಭಿಷೇಕ ಚೌಧರಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

