Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಗಿರಾಕಿಗಳಿಲ್ಲದೇ ಬೇಸತ್ತ ವ್ಯಾಪಾರಿಯೊಬ್ಬ ೧೦ರೂಪಾರಿಗೆ ೩ಕೆಜಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡಿ ಬೇಸರ ಹೊರಹಾಕಿರುವ ಘಟನೆ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆದಿದೆ.ದಿನೇ ದಿನೆ ಗ್ರಹ ಬಳಕೆಯ ವಸ್ತುಗಳು ಸೇರಿದಂತೆ ಎಲ್ಲ ಸರಕುಗಳ ಬೆಲೆ ಹೆಚ್ಚುತ್ತಿದ್ದರೆ ಇತ್ತ ಮಾವಿನ ಹಣ್ಣು ಖರೀದಿಸುವವರಿಲ್ಲದೇ ಬೇಸತ್ತ ಯುವಕ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ೧೦ರೂ ಗೆ ೩ಕೆಜಿಯಂತೆ ಮಾರಾಟ ಮಾಡಿ ತನ್ನಲ್ಲಿರುವ ಹಣ್ಣುಗಳನ್ನು ಖಾಲಿ ಮಾಡಿಕೊಂಡಿದ್ದಾನೆ.ಈ ವರ್ಷ ೧೦೦ ರಿಂದ ೩೦೦ ರೂ ಗಳಿಗೆ ಕೆಜಿಯಂತೆ ಮಾವಿನ ಹಣ್ಣುಗಳು ಮಾರಾಟವಾಗಿದ್ದವು. ಆದರೆ ಕಳೆದ ಕೆಲವು ದಿನಗಳಿಂದ ಮಾವು ಕೊಳ್ಳಲು ಜನ ಹಿಂದೇಟು ಹಾಕಿದ್ದು ಈತನ ಬೇಸರಕ್ಕೆ ಕಾರಣವಾಗಿದೆ. ಎಂದಿನಂತೆ ಶನಿವಾರವೂ ಕೂಡ ತನ್ನ ತಲ್ಳು ಗಾಡಿಯಯ ತುಂಬ ಹಣ್ಣುಗಳನ್ನು ಹಾಕಿಕೊಂಡು ವ್ಯಾಪರಕ್ಕೆ ನಿಂತಿದ್ದಾನೆ. ಸಂಜೆಯವರೆಗೂ ಹಣ್ಣುಗಳು ಮಾರಾಟವಾಗದಿದ್ದಾಗ ಬೇಸರಗೊಂಡು ೧೦ರೂ ಗೆ ೩ಕೆಜಿ ಯಂತೆ ಮಾರಾಟಕ್ಕಿಳಿದಾಗ ಆತನ ಬಳಿ ಇದ್ದ ಹಣ್ಣುಗಳೆಲ್ಲ ಕೆಲವೇ ನಿಮಿಷಗಳಲ್ಲಿ ಖಾಲಿಯಾಗಿವೆ.
ಮುದ್ದೇಬಿಹಾಳ: ೨೫ ವರ್ಷಗಳಿಂದ ನಮ್ಮ ಸಂಘದ ವತಿಯಿಂದ ನಿರಂತರ ಹೋರಾಟ ನಡೆಸಿದರೂ ನಮ್ಮ ಬೇಡಿಕೆಗಳನ್ನು ಈಡೇಸಲು ಎಲ್ಲ ಸರ್ಕಾರಗಳು ಹಿಂದೇಟು ಹಾಕಿವೆ. ಆಡಳಿತಾರೂಢ ಸರ್ಕಾರ ಈಗಲಾದರೂ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರಥಮ ಚಿಕಿತ್ಸಕರ ಹಾಗೂ ಪರಿಣಿತರ ಸಂಘದ ತಾಲೂಕು ಅಧ್ಯಕ್ಷ ಈರಣ್ಣ ಬಡಿಗೇರ ಸರ್ಕಾರಕ್ಕೆ ಒತ್ತಾಯಿಸಿದರು.ಪಟ್ಟಣದ ಪ್ರವಾಸಿ ಮಂದಿರಲ್ಲಿ ನಡೆದ ಪ್ರಥಮ ಚಿಕಿತ್ಸಕರ ಹಾಗೂ ಪರಿಣಿತರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.ಹಳ್ಳಿಗಳಳ್ಳಿ ಬಡವರು ದೂರದ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಳಿಕ ಸಣ್ಣ ಪುಟ್ಟ ಚಿಕಿತ್ಸೆಗಾಗಿ ಮತ್ತೊಮ್ಮೆ ಹೋಗಲು ಸಾಧ್ಯವಾಗದೇ ನಮ್ಮ ಬಳಿ ಬರುತ್ತಾರೆ. ಇಂಥವರಿಗೆ ಆರೈಕೆ ಮಾಡಲು ನಮಗೆ ಸರ್ಕಾರದಿಂದ ಅನುಮತಿ ಅವಶ್ಯವಿದ್ದು ನಮ್ಮ ಸಮಸ್ಯೆಯನ್ನು ಅರಿತು ಸರ್ಕಾರ ಕೂಡಲೇ ರಾಜ್ಯದ ಎಲ್ಲ ಪ್ರಥಮ ಚಿಕಿತ್ಸಕರನ್ನು ತರಬೇತಿಗೆ ಒಳಪಡಿಸಿ ಪ್ರಥಮ ಚಿಕಿತ್ಸೆ ಸೇವೆ ನೀಡಲು ಮಾನ್ಯತೆ ನೀಡಬೇಕು ಎಂದರು.ಸಂಘದ ಸದಸ್ಯ ಶಿವರಾಜ ರಕ್ಕಸಗಿ ಮಾತನಾಡಿ ಆಂದ್ರಪ್ರದೇಶ ದಲ್ಲಿ ಪ್ರಥಮ ಚಿಕಿತ್ಸಕರಿಗೆ ಸೂಕ್ತ ಸ್ಥಾನಮಾನ ನೀಡಲಾಗಿದೆ. ಆದರೆ ನಮ್ಮಲ್ಲಿ…
ಬಸವನಬಾಗೇವಾಡಿ: ತಾಲೂಕಿನ ನಂದಿಹಾಳ ಪಿಎಚ್ ಗ್ರಾಮವು ಶ್ರೀಗುರು ಆರೂಢರ ಐಕ್ಯಕ್ಷೇತ್ರವಾಗಿದೆ. ಶ್ರೀಗುರು ಆರೂಢರ ಭಕ್ತರ ಮನವಿಯಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಗ್ರಾಮಕ್ಕೆ ನಂದಿಹಾಳ ಪಿಎಚ್ ಬದಲಾಗಿ ಆರೂಢನಂದಿಹಾಳ ಎಂದು ಅಧಿಕೃತವಾಗಿ ಆದೇಶ ಮಾಡಿದೆ. ಈ ಗ್ರಾಮವು ಇನ್ನು ಮುಂದೆ ಆರೂಢನಂದಿಹಾಳ ಎಂದು ದಾಖಲೆಯಲ್ಲಿ ದಾಖಲಾಗುತ್ತದೆ. ಎಲ್ಲ ಸರ್ಕಾರಿ ಇಲಾಖೆಗಳು ಹಾಗೂ ಜನರು ಆರೂಢನಂದಿಹಾಳ ಎಂದು ತಮ್ಮ ಪತ್ರ ವ್ಯವಹಾರ ಸೇರಿದಂತೆ ನಿತ್ಯ ಜೀವನದಲ್ಲಿ ಇದನ್ನು ಬಳಕೆ ಮಾಡಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.ತಾಲೂಕಿನ ಆರೂಢನಂದಿಹಾಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಗುರು ಆರೂಢರ ೧೧೬ ನೇ ಜಯಂತ್ಯೋತ್ಸವ ಹಾಗೂ ಗ್ರಾಮಕ್ಕೆ ಆರೂಢನಂದಿಹಾಳ ನಾಮಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಒಳಿತು ಮಾಡಿದವರು ಮಾತ್ರ ಆರೂಢರ ತರಹ ಮಹಾನ್ ಶರಣರಾಗಲು ಸಾಧ್ಯ. ಇಲ್ಲಿನ ಶ್ರೀಗುರು ಆರೂಢರು ಹುಬ್ಬಳ್ಳಿ ಸಿದ್ದಾರೂಢರ ಎರಡನೇ ಅವತಾರವೆಂದು ಭಕ್ತರು ಭಾವಿಸಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಈ ಗ್ರಾಮದ ಅಭಿವೃದ್ಧಿಯ ಬಗ್ಗೆ ಸ್ಪಂದಿಸುವುದಾಗಿ ಹೇಳಿದ ಅವರು ಈಗಾಗಲೇ ಪಹಣಿಗೆ ಆಧಾರ ಲಿಂಕ್…
ಬಸವನಬಾಗೇವಾಡಿ: ಕಾನೂನು ಉಲ್ಲಂಘನೆ ಮಾಡಿದವರು ಯಾರೇ ಇದ್ದರೂ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ವಿನಾ ಕಾರಣ ನಮ್ಮ ಸಿಬ್ಬಂದಿ ಯಾರ ಮೇಲೂ ದರ್ಪ ತೋರುವದಿಲ್ಲ. ಎಲ್ಲ ಬಿಟ್ ಪೊಲೀಸರು, ರಾತ್ರಿ ಗಸ್ತು ಸಿಬ್ಬಂದಿಗಳು ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸ್ ಇಲಾಖೆಯ ಉಪವಿಭಾಗವು ಶನಿವಾರ ಸಂಜೆ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಯು ಯಾವಾಗಲೂ ದಲಿತ ಬಾಂಧವರು ಸೇರಿದಂತೆ ಎಲ್ಲ ಜನರಿಗೂ ನ್ಯಾಯ ಒದಗಿಸಿಕೊಡುವಲ್ಲಿ ಸದಾ ಸಿದ್ದವಿದೆ. ಇದರ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಮರಳು ಮಾಫಿಯಾದ ಬಗ್ಗೆ ಸಭೆಯ ಗಮನಕ್ಕೆ ತಂದವರು ಸೂಕ್ತ ದಾಖಲೆಯನ್ನು ನೀಡಿದರೆ ಖಂಡಿತ ಇದರಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕ್ರಮ ಖಂಡಿತ ತೆಗೆದುಕೊಳ್ಳುತ್ತೇವೆ. ಎಲ್ಲರೂ ರಸ್ತೆ ನಿಯಮಗಳನ್ನು ಪಾಲಿಸುವದು ತುಂಬಾ ಮುಖ್ಯವಾಗಿದೆ. ಪಟ್ಟಣದಲ್ಲಿ ಸೋಮವಾರ ಸಂತೆ ದಿನ ಅನೇಕ ಕಡೆಗಳಲ್ಲಿ…
ಮುದ್ದೇಬಿಹಾಳ: ಪಟ್ಟಣದ ವಿಬಿಸಿ ಪ್ರೌಢ ಶಾಲೆಯ ಮುಂಭಾಗದಿಂದ ವಿದ್ಯಾನಗರಕ್ಕೆ ಕಲ್ಪಿಸುವ ರಸ್ತೆಯ ಮಧ್ಯೆ ಪೈಪ್‌ಲೈನ್ ದುರಸ್ತಿ ಕಾಮಗಾರಿಗಾಗಿ ಗುಂಡಿ ತೋಡಿದ್ದು ಹಲವು ದಿನಗಳಿಂದ ದುರಸ್ತಿ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಅಲ್ಲದೇ ಗುಂಡಿ ತೋಡಿರುವ ಮಣ್ಣನ್ನು ರಸ್ತೆಯ ಮೇಲೆ ಹಾಕಿದ್ದರಿಂದ ಇಲ್ಲಿ ಓಡಾಡುವ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗಿತ್ತು.ಈ ಕುರಿತು ’ಉದಯರಶ್ಮಿ’ ಪತ್ರಿಕೆಯು “ಮುಚ್ಚದ ಗುಂಡಿ: ಅಧಿಕಾರಿಗಳ ವಿರುದ್ಧ ಆಕ್ರೋಶ” ಎಂಬ ತಲೆಬರಹದಡಿ ವರದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ವರದಿ ಗಮನಿಸಿದ ಅಧಿಕಾರಿಗಳು ಎಚ್ಚೆತ್ತು ಪೈಪ್‌ಲೈನ್ ಕಾಮಗಾರಿಯನ್ನು ದುರಸ್ತಿಗೊಳಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿ ಕೊಟ್ಟಿದ್ದಾರೆ.
ಮುದ್ದೇಬಿಹಾಳ: ತಾಳಿಕೋಟೆ ತಾಲೂಕಿನ ಹಂದ್ರಾಳ ಗ್ರಾಮದ ಶ್ರೀದೇವಿ ನಡಗೇರಿ ಮತ್ತು ಈಕೆಯ ಅಕ್ಕನ ೩ವರ್ಷದ ಮಗ ಸುಮಂತ ಕಾಣೆಯಾಗಿರುವ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತಾಲೂಕಿನ ಲೊಟಗೇರಿ ಗ್ರಾಮದಲ್ಲಿರುವ ತನ್ನ ಸಹೋದರ ಮಾವನವನ ಹತ್ತಿರ ಹೋಗಿ ಬರುತ್ತೇನೆ ಅಂತಾ ಹೇಳಿದಾಗ ನನ್ನ ಬೈಕ್ ನಲ್ಲಿ ಹಂದ್ರಾಳದಿಂದ ಕರೆದುಕೊಂಡು ಬಂದು ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಬಿಟ್ಟು ನಾನು ಕೆಲಸಕ್ಕೆ ಹೋಗಿದ್ದು ನಂತರ ಕರೆ ಮಾಡಿದರೆ ಮೊಬೈಲ್ ಸ್ವಿಚ್‌ಆಫ್ ಅಂತಾ ಬರುತ್ತಿದ್ದು ನಮ್ಮ ತಂದೆ-ತಾಯಿ ಮತ್ತು ಸಂಬAಧಿಕರಿಗೆ ಕರೆ ಮಾಡಿ ವಿಚಾರಿಸಲಾಗಿ ಏನೂ ಗೊತ್ತಾಗಿಲ್ಲ. ಇವರನ್ನು ಹುಡುಕಿಕೊಡುವಂತೆ ಆಕೆಯ ಸಹೋದರ ದುರ್ಗಪ್ಪ ಹಂದ್ರಾಳ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಇಂಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಸರಾಸರಿ ಅಂಕಗಳನ್ನು ಪಡೆದ ರಾಜ್ಯದ ಒಟ್ಟು ೮೩೦ ವಸತಿ ಶಾಲೆಗಳಲ್ಲಿ ಕಿತ್ತೂರ ರಾಣಿ ಚನ್ನಮ್ಮ ಶಾಲೆಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಶಾಲೆಯ ಪ್ರಾಂಶುಪಾಲರು ಸಿ ಸಿ ಸೇಠ್ ಪತ್ರಿಕೆ ಪ್ರಕಟಣೆ ಗೆ ತಿಳಿಸಿದ್ದಾರೆ.ತಾಲೂಕಿನ ಅಂಜುಟಗಿ ಗ್ರಾಮದ ಕಿತ್ತೂರ್ ರಾಣಿ ಚನ್ನಮ್ಮ ವಸತಿ ಶಾಲೆಯು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತ ಅಶ್ರಯದಲ್ಲಿ ನಡೆದ ೨೦೨೩-೨೦೨೪ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಗಣಿತ ಶಿಕ್ಷಕ ಶ್ರೀ ಸೈಫನ್ ಮುಲ್ಕ ಬಿಂಗೊಳಗಿ ಅವರನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪ್ರಧಾನ ಮಾಡಿ ಪ್ರೊತ್ಸಾಹಿಸಿದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಎಸ್ ಸಿ ಮಹದೇವಪ್ಪ ಹಾಗೂ ಶಾಸಕರು ಮತ್ತು ಇಲಾಖೆಯ ಅಧಿಕಾರಿಗಳು ಉಸ್ಥಿತರಿದ್ದರು. ಪ್ರಾಂಶುಪಾಲರು ಸಿ ಸಿ ಸೇಠ್, ಹಾಗೂ ಎಲ್ಲಾ…
ಇಂಡಿ: ಅದ್ದೂರಿಯಾಗಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸುವ ಸಂಬಂಧ ತಹಶೀಲ್ದಾರ ಬಿ ಎಸ್ ಕಡಕಭಾವಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಜರುಗಿತು.ಸೋಮವಾರ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಜು-27 ರಂದು ಸರಕಾರದ ನಿರ್ದೇಶನದಂತೆ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜ್ಯದಾದ್ಯಂತ ಜುಲೈ 27 ರಂದು ನಾಡುಪ್ರಭು ಕೆಂಪೇಗೌಡ ಜಯಂತಿ ಸರಕಾರದ ನಿರ್ದೇಶನದಂತೆ ಜರುಗುತ್ತದೆ. ಅದರಂತೆ ನಮ್ಮ ತಾಲೂಕಿನ ಎಲ್ಲಾ ಸರಕಾರಿ ಶಾಲಾ ಕಾಲೇಜು ಮತ್ತು ಕಛೇರಿಗಳಲ್ಲಿ, ಗ್ರಾಮ ಪಂಚಾಯತ್ ಮತ್ತು ತಾಲೂಕು ಕಛೇರಿಯಲ್ಲಿ ಸರಕಾರದ ನಿರ್ದೇಶನದಂತೆ, ಯಾವುದೇ ಲೋಪವಾಗದಂತೆ ವ್ಯವಸ್ಥಿತವಾಗಿ ಕೆಂಪೇಗೌಡ ಜಯಂತಿ ಆಚರಣೆ ಮಾಡಬೇಕು. ಇನ್ನೂ ಪಟ್ಟಣದಲ್ಲಿ ಪ್ರಮುಖ ವೃತ್ತಗಳು ಅಲಂಕಾರಗೊಳಿಸಿಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಎಲ್ಲಾ ಶಾಲಾ, ಕಾಲೇಜು ಮತ್ತು ಕಛೇರಿಗಳಲ್ಲಿ 9 ಘಂಟೆಗೆ ಆಚರಣೆ ಮಾಡಬೇಕು. ತದನಂತರ ತಾಲೂಕು ಆಡಳಿತ ಸೌಧದಲ್ಲಿ 10 ಘಂಟೆಗೆ ಜರುಗುವ ಕೆಂಪೇಗೌಡ ಜಯಂತಿಯಲ್ಲಿ ಪಾಲ್ಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಿರೂಪಣೆ ಶಿರಸ್ತೆದಾರ ಬಿ.ಎ ರಾವೂರ ಮಾಡಿದರು.ಈ…
ಇಂಡಿ: ಎಮ್ ಓ ಬಿ ಹಾಗೂ ಇತ್ತೀಚೆಗೆ ಭೀಮಾತೀರದಲ್ಲಿ ನಡೆದ ಗುಂಡಿನ ದಾಳಿ ಹಿನ್ನಲೆ ಭೀಮಾತೀರದಲ್ಲಿ ರೌಡಿಶೀಟರ್‌ಗಳಿಗೆ ಇಂಡಿ ಶಹರ ಸಿಪಿಐ ರತನಕುಮಾರ ಜಿರಗ್ಯಾಳ ಹಾಗೂ ಪಿಎಸ್ಐ ವಿನೋದ ದೊಡ್ಡಮನಿ ನೇತೃತ್ವದಲ್ಲಿ ರೌಡಿಶೀಟರ್‌ಗಳಿಗೆ ಪರೇಡ್ ನಡೆಯಿತು.ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಇಂಡಿ ಶಹರ ಪೊಲೀಸ ಠಾಣಾ ಆವರಣದಲ್ಲಿ ರೌಡಿಶೀಟರ್‌ಗಳಿಗೆ ಪಿಎಸ್ಐ ವಿನೋದ ಖಡಕ್ ಎಚ್ಚರಿಕೆ ನೀಡಿದರು.ಅಲ್ಲದೇ, ಯಾವುದೇ ಗ್ಯಾಂಗ್ ವಾರ್, ಗಲಭೆ ಸೇರಿದಂತೆ ವಿವಿಧ ಕ್ರೈಂಗಳಲ್ಲಿ ಭಾಗವಹಿಸಿದ್ರೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ರೌಡಿಶೀಟರ್‌ಗಳಿಗೆ ವಾರ್ನಿಂಗ್ ನೀಡಿದರಲ್ಲದೇ, ಇನ್ನು ಇಂಡಿ ಬಿಟ್ಟು ಬೇರೆಡೆಗೆ ಹೋದ್ರೇ ಲೈವ್ ಲೋಕೇಷನ್ ಕಳಸಬೇಕು ಅಥವಾ ವಿಡಿಯೋ ಕಾಲ್ ಮಾಡಿ ಮಾಹಿತಿ ನೀಡಬೇಕು ಎಂದು ರೌಡಿಶೀಟರ್‌ಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಪಿ ಎಸ್ ಐ ಶಶಿಕಲಾ ಲಂಗೋಟಿ, ಪೋಲಿಸ್ ಸಿಬ್ಬಂದಿ ಸಿ.ಎಸ್. ರಾಠೋಡ, ಎಮ್ ಜಿ ಸಾವಳೆ ಉಪಸ್ಥಿತರಿದ್ದರು. “ಪೋಲಿಸ್ 24*7 ನಿರಂತರವಾಗಿ ಹದ್ದಿನ ಕಣ್ಣು, ಇಟ್ಟುಕೊಂಡು ಕೆಟ್ಟ ಎಚ್ಚರಿಕೆಯಲ್ಲಿ ಕರ್ತವ್ಯ ನಿರ್ವಹಣೆ ನಡೆಯುತ್ತಿದೆ. ಅದರಲ್ಲೂ ಕಣ್ಣು…
ಇಂಡಿ: ಪಟ್ಟಣದ ಹಳೆಯ ಬಸ್ ಡಿಪೋ ಗೆ ಬೇಟಿ ನೀಡಿ, ಅಲ್ಲಿ ಕೈಗೊಳ್ಳಬೇಕಾದ ವಿವಿಧ ಕಾಮಗಾರಿಗಳ ಹಿನ್ನೆಲೆ ಸ್ಥಳ ಪರಿಶೀಲನೆ ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಸೋಮವಾರ ನಡೆಸಿದರು.ಪಟ್ಟಣದಲ್ಲಿರುವ ತಾಲ್ಲೂಕು ಹಳೆ ಬಸ ಡಿಪೋದಲ್ಲಿ ಶೌಚಾಲಯ ನಿರ್ಮಿಸುವ ಹಾಗೂ ಗ್ರಾಮೀಣ ಮತ್ತು ನಗರ ಬಸ್ ನಿಲ್ದಾಣ ಬೇರೆ ಬೇರೆ ಮಾಡುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಸದ್ಯ ಇಂಡಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಯತ್ತಚ್ಚೆವಾಗಿದೆ. ಆ ಕಾರಣಕ್ಕಾಗಿ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ನಿಲ್ದಾಣವನ್ನು ನಗರ ಮತ್ತು ಗ್ರಾಮೀಣ ಭಾಗವಾಗಿ ಬಸ್ ನಿಲ್ದಾಣ ಮಾಡುವ ದೃಷ್ಟಿಯಿಂದ ಇಂದು ಸ್ಥಳ ಪರಿಶೀಲನೆ ನಡೆಸಿದ್ದೆವೆ. ಅದಲ್ಲದೇ ಇಂದು ಮಧ್ಯಾಹ್ನ ಎನ್ ಕೆ ಆರ್ ಟಿ ಸಿ ಜಿಲ್ಲಾ ಅಧಿಕಾರಿಯೂ ಈ ಸ್ಥಳ ಪರಿಶೀಲನೆ ಮಾಡುತ್ತಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ, ಕೆ ಎಸ್ ಆರ್ ಟಿ ಸಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
