ಮುದ್ದೇಬಿಹಾಳ: ಪಟ್ಟಣದ ವಿಬಿಸಿ ಪ್ರೌಢ ಶಾಲೆಯ ಮುಂಭಾಗದಿಂದ ವಿದ್ಯಾನಗರಕ್ಕೆ ಕಲ್ಪಿಸುವ ರಸ್ತೆಯ ಮಧ್ಯೆ ಪೈಪ್‌ಲೈನ್ ದುರಸ್ತಿ ಕಾಮಗಾರಿಗಾಗಿ ಗುಂಡಿ ತೋಡಿದ್ದು ಹಲವು ದಿನಗಳಿಂದ ದುರಸ್ತಿ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಅಲ್ಲದೇ ಗುಂಡಿ ತೋಡಿರುವ ಮಣ್ಣನ್ನು ರಸ್ತೆಯ ಮೇಲೆ ಹಾಕಿದ್ದರಿಂದ ಇಲ್ಲಿ ಓಡಾಡುವ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗಿತ್ತು.
ಈ ಕುರಿತು ’ಉದಯರಶ್ಮಿ’ ಪತ್ರಿಕೆಯು “ಮುಚ್ಚದ ಗುಂಡಿ: ಅಧಿಕಾರಿಗಳ ವಿರುದ್ಧ ಆಕ್ರೋಶ” ಎಂಬ ತಲೆಬರಹದಡಿ ವರದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ವರದಿ ಗಮನಿಸಿದ ಅಧಿಕಾರಿಗಳು ಎಚ್ಚೆತ್ತು ಪೈಪ್‌ಲೈನ್ ಕಾಮಗಾರಿಯನ್ನು ದುರಸ್ತಿಗೊಳಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿ ಕೊಟ್ಟಿದ್ದಾರೆ.


