ಮುದ್ದೇಬಿಹಾಳ: ಗಿರಾಕಿಗಳಿಲ್ಲದೇ ಬೇಸತ್ತ ವ್ಯಾಪಾರಿಯೊಬ್ಬ ೧೦ರೂಪಾರಿಗೆ ೩ಕೆಜಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡಿ ಬೇಸರ ಹೊರಹಾಕಿರುವ ಘಟನೆ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆದಿದೆ.
ದಿನೇ ದಿನೆ ಗ್ರಹ ಬಳಕೆಯ ವಸ್ತುಗಳು ಸೇರಿದಂತೆ ಎಲ್ಲ ಸರಕುಗಳ ಬೆಲೆ ಹೆಚ್ಚುತ್ತಿದ್ದರೆ ಇತ್ತ ಮಾವಿನ ಹಣ್ಣು ಖರೀದಿಸುವವರಿಲ್ಲದೇ ಬೇಸತ್ತ ಯುವಕ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ೧೦ರೂ ಗೆ ೩ಕೆಜಿಯಂತೆ ಮಾರಾಟ ಮಾಡಿ ತನ್ನಲ್ಲಿರುವ ಹಣ್ಣುಗಳನ್ನು ಖಾಲಿ ಮಾಡಿಕೊಂಡಿದ್ದಾನೆ.
ಈ ವರ್ಷ ೧೦೦ ರಿಂದ ೩೦೦ ರೂ ಗಳಿಗೆ ಕೆಜಿಯಂತೆ ಮಾವಿನ ಹಣ್ಣುಗಳು ಮಾರಾಟವಾಗಿದ್ದವು. ಆದರೆ ಕಳೆದ ಕೆಲವು ದಿನಗಳಿಂದ ಮಾವು ಕೊಳ್ಳಲು ಜನ ಹಿಂದೇಟು ಹಾಕಿದ್ದು ಈತನ ಬೇಸರಕ್ಕೆ ಕಾರಣವಾಗಿದೆ. ಎಂದಿನಂತೆ ಶನಿವಾರವೂ ಕೂಡ ತನ್ನ ತಲ್ಳು ಗಾಡಿಯಯ ತುಂಬ ಹಣ್ಣುಗಳನ್ನು ಹಾಕಿಕೊಂಡು ವ್ಯಾಪರಕ್ಕೆ ನಿಂತಿದ್ದಾನೆ. ಸಂಜೆಯವರೆಗೂ ಹಣ್ಣುಗಳು ಮಾರಾಟವಾಗದಿದ್ದಾಗ ಬೇಸರಗೊಂಡು ೧೦ರೂ ಗೆ ೩ಕೆಜಿ ಯಂತೆ ಮಾರಾಟಕ್ಕಿಳಿದಾಗ ಆತನ ಬಳಿ ಇದ್ದ ಹಣ್ಣುಗಳೆಲ್ಲ ಕೆಲವೇ ನಿಮಿಷಗಳಲ್ಲಿ ಖಾಲಿಯಾಗಿವೆ.
Subscribe to Updates
Get the latest creative news from FooBar about art, design and business.
Related Posts
Add A Comment

