ಮುದ್ದೇಬಿಹಾಳ: ೨೫ ವರ್ಷಗಳಿಂದ ನಮ್ಮ ಸಂಘದ ವತಿಯಿಂದ ನಿರಂತರ ಹೋರಾಟ ನಡೆಸಿದರೂ ನಮ್ಮ ಬೇಡಿಕೆಗಳನ್ನು ಈಡೇಸಲು ಎಲ್ಲ ಸರ್ಕಾರಗಳು ಹಿಂದೇಟು ಹಾಕಿವೆ. ಆಡಳಿತಾರೂಢ ಸರ್ಕಾರ ಈಗಲಾದರೂ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರಥಮ ಚಿಕಿತ್ಸಕರ ಹಾಗೂ ಪರಿಣಿತರ ಸಂಘದ ತಾಲೂಕು ಅಧ್ಯಕ್ಷ ಈರಣ್ಣ ಬಡಿಗೇರ ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ನಡೆದ ಪ್ರಥಮ ಚಿಕಿತ್ಸಕರ ಹಾಗೂ ಪರಿಣಿತರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಹಳ್ಳಿಗಳಳ್ಳಿ ಬಡವರು ದೂರದ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಳಿಕ ಸಣ್ಣ ಪುಟ್ಟ ಚಿಕಿತ್ಸೆಗಾಗಿ ಮತ್ತೊಮ್ಮೆ ಹೋಗಲು ಸಾಧ್ಯವಾಗದೇ ನಮ್ಮ ಬಳಿ ಬರುತ್ತಾರೆ. ಇಂಥವರಿಗೆ ಆರೈಕೆ ಮಾಡಲು ನಮಗೆ ಸರ್ಕಾರದಿಂದ ಅನುಮತಿ ಅವಶ್ಯವಿದ್ದು ನಮ್ಮ ಸಮಸ್ಯೆಯನ್ನು ಅರಿತು ಸರ್ಕಾರ ಕೂಡಲೇ ರಾಜ್ಯದ ಎಲ್ಲ ಪ್ರಥಮ ಚಿಕಿತ್ಸಕರನ್ನು ತರಬೇತಿಗೆ ಒಳಪಡಿಸಿ ಪ್ರಥಮ ಚಿಕಿತ್ಸೆ ಸೇವೆ ನೀಡಲು ಮಾನ್ಯತೆ ನೀಡಬೇಕು ಎಂದರು.
ಸಂಘದ ಸದಸ್ಯ ಶಿವರಾಜ ರಕ್ಕಸಗಿ ಮಾತನಾಡಿ ಆಂದ್ರಪ್ರದೇಶ ದಲ್ಲಿ ಪ್ರಥಮ ಚಿಕಿತ್ಸಕರಿಗೆ ಸೂಕ್ತ ಸ್ಥಾನಮಾನ ನೀಡಲಾಗಿದೆ. ಆದರೆ ನಮ್ಮಲ್ಲಿ ಸಾಕಷ್ಟು ಹೋರಾಟಗಳಾದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿದಲ್ಲಿ ಗ್ರಾಮೀಣ ಜನರಲ್ಲಿ ಚಿಕ್ಕ ಪುಟ್ಟ ಗಾಯಗಳಾದಾಗ ಕೇವಲ ಪ್ರಥಮ ಚಿಕಿತ್ಸೆಗಾಗಿ ದೂರದ ಆಸ್ಪತ್ರೆಗಳಿಗೆ ಅಲೆಯುವದು ತಪ್ಪುತ್ತದೆ ಎಂದರು.
ಈ ವೇಳೆ ಸಂಘದ ಅಣ್ಣಪ್ಪಗೌಡ ಜಯಗೊಂಡ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ತಾರನಾಳ, ಮಹಾಂತೇಶ ಬಡಿಗೇರ, ಮುತ್ತು ಹುನಶ್ಯಾಳ, ಪ್ರಭು ಹಿರೇಮಠ, ರಾಮು ಬಡಿಗೇರ, ಗಂಗಧರ ಬಡಿಗೇರ, ಈರಣ್ಣ ಪತ್ತಾರ, ಸಿ.ಕೆ.ಕಲಕೇರಿ, ಮಹಾದೇವ ಬಿರಾದಾರ, ಮಹಾಂತೇಶ ಕೊಳೂರ, ಆರ್.ವಿ,ಪಾಟೀಲ, ಹಣಮಂತ ಗುರಿಕಾರ, ಬಸವರಾಜ ಅಂಬಿಗೇರ, ಶಿವಾನಂದ ಕವಡಿಮಟ್ಟಿ, ಶೇಕರ ತುಳಸಿಗೇರಿ, ಗುರಯ್ಯ ನಾಯ್ಕೋಡಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

