Author: editor.udayarashmi@gmail.com

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್‌. ಕೆ. ಬೆಂಗಳೂರು ಅರ್ಹರನ್ನು ಗುರುತಿಸಲಾರದಷ್ಟು ಭ್ರಷ್ಟಗೊಂಡ ವ್ಯವಸ್ಥೆ..ಭಾರತ ಈ ಕ್ಷಣದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮುಂದುವರಿಯುತ್ತಿದೆ, ಬೆಳೆಯುತ್ತಿದೆ, ಅಭಿವೃದ್ಧಿ ಹೊಂದುತ್ತಿದೆ, ವಿಶ್ವಗುರು ಪಟ್ಟಕ್ಕೆ ಮುನ್ನಡೆಯುತ್ತಿದೆ ಎಂದು ಏನೇ ಹೇಳಿದರು ಸಹ ಆಂತರಿಕವಾಗಿ ಶೈಕ್ಷಣಿಕವಾಗಿಯೇ ಆಗಿರಲಿ, ಉದ್ಯೋಗಕ್ಕಾಗಿಯೇ ಆಗಿರಲಿ ಪರೀಕ್ಷೆಗಳನ್ನು ನಡೆಸಿ ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಸಂಪೂರ್ಣ ವಿಫಲವಾಗಿದೆ ಅಥವಾ ನಿರಾಶದಾಯಕವಾಗಿದೆ ಅಥವಾ ಜನರ ನಂಬಿಕೆ ಕಳೆದುಕೊಂಡು ಅನುಮಾನ ಹುಟ್ಟಿಸುತ್ತಿದೆ ಅಥವಾ ಭ್ರಮನಿರಸನವಾಗಿದೆ..ಉದ್ಯೋಗಕ್ಕಾಗಿಯೋ, ಕಾಲೇಜು ಪ್ರವೇಶಕ್ಕಾಗಿಯೋ, ವೃತ್ತಿಪರ ಕೋರ್ಸ್ಗಳ ಆಯ್ಕೆಗಾಗಿಯೋ ನಡೆಯುವ ಪ್ರತಿ ಪರೀಕ್ಷೆಯಲ್ಲೂ, ಭಿನ್ನ – ಭಿನ್ನವಾಗಿ, ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ, ಕಲ್ಪಿಸಲು ಅಸಾಧ್ಯವಾದ ರೂಪದಲ್ಲಿ, ದೊಡ್ಡ ಮಟ್ಟದ ಅಧಿಕಾರಿಗಳು, ರಾಜಕಾರಣಿಗಳು, ಅದರ ಫಲಾನುಭವಿಗಳು ಎಲ್ಲರೂ ಸೇರಿ ಬೇರೆ ಬೇರೆ ರೀತಿ ವಂಚಿಸುತ್ತಿದ್ದಾರೆ.. ಅಧಿಕೃತ ಮಾಹಿತಿಯ ಪ್ರಕಾರ ಕಳೆದು ಎಂಟು ವರ್ಷಗಳಲ್ಲಿ ಇಡೀ ದೇಶದಲ್ಲಿ 50 ಕ್ಕೂ ಹೆಚ್ಚು ಪರೀಕ್ಷೆಗಳು ರದ್ದಾಗಿವೆ ಅಥವಾ ಮುಂದೂಡಲ್ಪಟ್ಟಿವೆ ಮತ್ತು ಪುನಃ ಪರೀಕ್ಷೆ ನಡೆಸಲಾಗಿದೆ. ಅಂದರೆ…

Read More

ಕೆಂಭಾವಿ: ಮಾದಕ ವಸ್ತುಗಳಾದ ಗಾಂಜಾ, ಅಫೀಮು, ಗಸಗಸೆ ಸೋಪು, ನಿದ್ರೆ ಮಾತ್ರೆ, ಸೇವನೆಯು ಆರೋಗ್ಯಕ್ಕೆ ಹಾನಿಕಾರಕ, ಇವುಗಳ ವಿರುದ್ದ ಯುವಜನತೆ ದ್ವನಿ ಎತ್ತಬೇಕು ಎಂದು ಪಿಎಸ್ಐ ರಾಜಶೇಖರ ರಾಠೋಡ್ ಹೇಳಿದರು.ಪಟ್ಟಣದ ಶ್ರೀಮತಿ ಗಂಗಾಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಯಾದಗಿರಿ ಜಿಲ್ಲಾ ಪೋಲೀಸ್ ಮತ್ತು ಕೆಂಭಾವಿ ಪೋಲೀಸ್ ಠಾಣೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ “ಮಾದಕ ದ್ರವ್ಯಗಳ ಸೇವನೆ ಮತ್ತು ಸಾಗಣಿಕೆ ವಿರುದ್ಧ ದಿನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮಾದಕ ವಸ್ತುಗಳ ವ್ಯಸನಿಗಳಾಗಿ, ದಿನಕ್ಕೆ ಹತ್ತು ಜನರು ಆತ್ಮಹತ್ಯೆ ಮಾಡಿಕೊಳುತ್ತಾರೆ ಎಂದವರು. ಅಕ್ರಮವಾಗಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟ ಅಕ್ಷಮ್ಯ ಅಪರಾಧ ಎನ್ನುತ್ತಾ, ಅನೇಕ ‌ಕಾನೂನಾತ್ಮಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಮಾದರಿ ವ್ಯಕ್ತಿಯಾಗಿ ನಾಳೆ ನಾಡ ನಾಯಕರಾಗುವಂತೆ ಕರೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್,…

Read More

ಮಂಡ್ಯದಲ್ಲಿ ಡಿ.20,21,22 ರಂದು 87ನೇ ಸಮ್ಮೇಳನ ನಡೆಸಲು ತೀರ್ಮಾನ | ಸಿಎಂ ಸಿದ್ದರಾಮಯ್ಯ ಮಾಹಿತಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್‌ 20,21,22 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.ಜೂ.25 ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಸಿಎಂ ಮಾಹಿತಿ ನೀಡಿದರು.“ಈ ಹಿಂದೆ ಜೂನ್‌ ತಿಂಗಳಲ್ಲಿ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ, ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆ ಮುಂದೂಡಲಾಗಿತ್ತು. ಇದೀಗ ಡಿಸೆಂಬರ್‌ ತಿಂಗಳಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ರಾಜ್ಯ, ಹೊರರಾಜ್ಯ ಹಾಗೂ ವಿದೇಶದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮ್ಮೇಳನದಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇವೆ” ಎಂದು ಹೇಳಿದರು.“ಸರ್ಕಾರ ಜಿಲ್ಲಾಡಳಿತ, ಸಾಹಿತ್ಯ ಪರಿಷತ್ತಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಸಾಹಿತ್ಯ ಸಮ್ಮೇಳನ ಅಧ್ಯಕ್ಷರ…

Read More

ವಿಜಯಪುರ: ಕರ್ನಾಟಕ ರಾಜ್ಯ ಉಪ್ಪಾರ ಸಂಘ,ಬೆಂಗಳೂರು ಇವರ ಆಶ್ರಯದಲ್ಲಿ ಸನ್ ೨೦೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.೯೦% ರಷ್ಟು ಅಂಕ ಪಡೆದು ಉತ್ತೀರ್ಣಗೊಂಡ ಉಪ್ಪಾರ ಸಮಾಜದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪ್ರತಿಭಾ ಪುರಸ್ಕಾರದ ದಿನಾಂಕ ಇನ್ನು ನಿಗದಿಯಾಗಿರುವದಿಲ್ಲ. ಅಲ್ಲಿಯವರೆಗೆ ನೀವು ತಮ್ಮ ಸ್ವ ವಿವರಗಳನ್ನು ಈ ಕೆಳಕಂಡ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸು ಮಾಹಿತಿ ಸಲ್ಲಿಸಬಹುದು.ಕಾರಣ ವಿಜಯಪುರ ಜಿಲ್ಲೆಯ ಉಪ್ಪಾರ ಸಮಾಜದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.೯೦% ಅಂಕ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ಅಂಕಪಟ್ಟಿ ಹಾಗೂ ಸ್ವ ವಿವರಗಳೊಂದಿಗೆ ವಿಜಯಪುರ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷರಾದ ಜಕ್ಕಪ್ಪ ಯಡವೆ ಮೊ:೯೪೮೩೨೪೮೫೦೮, ಪುಂಡಲೀಕ ಉಪ್ಪಾರ : ೦೮೩೫೨-೬೩೬೩೫೨ ಮಾಹಲಿಂಗ ಉಪ್ಪಾರ, ಸಿದ್ದು ಗೇರಡೆ ಮೊಬೈಲ್ ನಂ. ೯೦೦೮೮೪೫೯೮೬ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Read More

ಚಿಮ್ಮಡ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ ಚಿಮ್ಮಡ: ರೈತರಿಗೆ ಸಹಕಾರಿ ಸಂಘದಿಂದ ದೊರೆಯುವ ಸಕಲ ಸೌಲಭ್ಯಗಳನ್ನು ನೀಡುವ ಮೂಲಕ ಅವರ ಹಿತ ಕಾಯಲು ನೂತನ ಅಧ್ಯಕ್ಷ ಉಪಾಧ್ಯಕ್ಷರು ಬದ್ದರಾಗಿರಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಸಲಹೆ ನೀಡಿದರು.ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರೈತರ ಜೀವನಾಡಿಯಾಗಿರುವ ಈ ಸಂಘ ಈಗಾಗಲೇ ಲಾಭದಲ್ಲಿದ್ದು ರೈತ, ನೇಕಾರ, ಕೂಲಿ ಕಾರ್ಮಿಕರ ಹಾಗೂ ವ್ಯಾಪಾರಸ್ಥರ ಸರ್ವತೋಮುಖ ಅಭಿವೃದ್ದಿಗೆ ಶೃಮಿಸುವ ಮೂಲಕ ಸಂಘವನ್ನು ಇನ್ನೂ ಉನ್ನತ ಶ್ರೇಣಿಗೆ ಕೊಂಡೊಯ್ಯಬೇಕೆಂದರು.ಗ್ರಾ.ಪಂ. ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ, ಪ್ರಭು ನೇಸೂರ ಮಾತನಾಡಿದರು.ಇದೇ ಸಂದರ್ಬದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡ ಹಣಮಂತ ಬಸಪ್ಪ ನೇಸೂರ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಣಮಂತ ಮಲ್ಲಪ್ಪ ಕೋಳಿಯವರನ್ನು ಸತ್ಕರಿಸಲಾಯಿತು.ಹಿಂದಿನ ಅಧ್ಯಕ್ಷ ಶಂಕರ ಗಂಗಪ್ಪ ಬಟಕುರ್ಕಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜೇರಿ,…

Read More

ದೇವರಹಿಪ್ಪರಗಿ: ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸುವುದರ ಜೊತೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಿ:೨೭ ರಂದು ಗುರುವಾರ ರಾಜ್ಯಾದ್ಯಂತ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಗುತ್ತಿದ್ದು, ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ೧೦೦೮ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೯ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಸ್ತಬ್ಧಚಿತ್ರ ಪ್ರದರ್ಶನ, ಮಕ್ಕಳಿಗಾಗಿ ಕೆಂಪೇಗೌಡ ವೇಷಭೂಷಣ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗೆ ಬಹುಮಾನ ವಿತರಣೆ. ಹಾಗೂ ವಿಶೇಷ ಉಪನ್ಯಾಸದ ಮೂಲಕ ಕೆಂಪೇಗೌಡ ಜೀವನ ಮತ್ತು ಸಾಧನೆಗಳ ಪರಿಚಯದಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲ ಸಂಘ ಸಂಸ್ಥೆಗಳು ಭಾಗವಹಿಸಬೇಕು ಎಂದರು.ದಲಿತ ಸಂಘರ್ಷ ಸಮೀತಿಯ ಪದಾಧಿಕಾರಿ ಪ್ರಕಾಶ ಗುಡಿಮನಿ ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ಕೆಲವು ಇಲಾಖೆಗಳ ಅಧಿಕಾರಿಗಳು ಮಾತ್ರ ಹಾಜರಿದ್ದು, ಉಳಿದವರ ಗೈರುಹಾಜರಿ ಕಾಣುತ್ತಿದೆ. ಮುಂದಿನ ದಿನಗಳಲ್ಲಿ…

Read More

ವಿಜಯಪುರ: ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು, ನಗರದ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗದಲ್ಲಿರುವ ನವರತ್ನ ಹೋಟೆಲ್ ಮುಂಭಾಗದ ರಸ್ತೆಗೆ ಶ್ರೀ ಮಹರ್ಷಿ ಭಗೀರಥ ವೃತ್ತ ಎಂದು ನಾಮಕರಣ ಮಾಡಲು ಈ ಹಿಂದೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದ್ದರು.ಅವರ ಸೂಚನೆಯಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಅವರು ಜೂ.೧೨ ರಂದು ಶ್ರೀ ಮಹರ್ಷಿ ಭಗೀರಥ ವೃತ್ತವೆಂದು ನಾಮಕರಣಗೊಳಿಸಿ, ಆದೇಶ ಹೊರಡಿಸಿದ್ದಾರೆ ಎಂದು ನಗರ ಶಾಸಕರ ಸಾರ್ವಜನಿಕ ಜನಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Read More

ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಜೂ. ೨೬ ರಂದು ಬೆಳಗ್ಗೆ ೧೧ ಗಂಟೆಗೆ ಜೂ.೨೭ ರಂದು ಆಚರಿಸಲ್ಪಡುವ ನಾಡಪ್ರಭು ಕೆಂಪೇಗೌಡ ಅವರ ೫೧೫ ನೇ ಜಯಂತಿಯಂಗವಾಗಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಭೆಗೆ ತಾಲೂಕು ಮಟ್ಟದ ಎಲ್ಲ ವಿವಿಧ ಇಲಾಖೆಯ ಅಧಿಕಾರಿಗಳು, ಪಟ್ಟಣದ ಎಲ್ಲ ವಿವಿಧ ಸಂಘಟನೆಗಳ ಪ್ರಮುಖರು, ಮುಖಂಡರು, ಪದಾಽಕಾರಿಗಳು,ಎಲ್ಲ ವಿವಿಧ ಸಮಾಜದ ಮುಖಂಡರು ಆಗಮಿಸಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಗೆ ಸಲಹೆ-ಸೂಚನೆಗಳನ್ನು ನೀಡಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ತಾಲೂಕಿನ ನಂದಿಹಾಳ ಪಿಯು ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ 2024-25 ನೇ ಸಾಲಿನ ಶಾಲಾ ಸಂಸತ್ ಗೆ ಚುನಾವಣೆ ಜರುಗಿತು.ಶಾಲಾ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದ ಮಕ್ಕಳಿಗೆ ಪ್ರಮಾಣ ವಚನ ಬೋಧಿಸಿ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು.ಶಿಕ್ಷಕ ಬಸವರಾಜ ಬಾಗೇವಾಡಿ ಅವರು ಶಾಲಾ ಸಂಸತ್ತು ರಚನೆ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ಶಾಲಾ ಕರ್ತವ್ಯ ಬಗ್ಗೆ ವಿವರವಾಗಿ ಹೇಳಿದರು. ಶಾಲಾ ಮುಖ್ಯ ಗುರು ಬಿ.ಎಂ. ಸಂಗಳದ, ಶಿಕ್ಷಕರಾದ ಸಿ.ಎನ್. ಗಟೆಗಾರ್, ಸಂಗು ನಾಗರಾಳ, ಪ್ರೇಮಲತಾ, ರಮೇಶ ಕುದರಿ, ಶಿವು ಮಡಿಕೇಶ್ವರ, ವೈ.ಬಿ. ಬಾಗೇವಾಡಿ,ಅತಿಥಿ ಶಿಕ್ಷಕರಾದ ಲಕ್ಷ್ಮಿಕಾಂತ, ವಿಜಯಲಕ್ಷ್ಮೀ, ಶಭಾನಮ್ ಇದ್ದರು.

Read More